ಸಾರಾಂಶ
ಐಗಳಿ: ಮಹಾತಪಸ್ವಿ ಪೂಜ್ಯ ಅಪ್ಪಯ್ಯ ಸ್ವಾಮಿ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಗುರುವಾರ ರಥೋತ್ಸವ ಅದ್ಧೂರಿಯಾಗಿ ಜರುಗಿತು.
ಐಗಳಿ: ಮಹಾತಪಸ್ವಿ ಪೂಜ್ಯ ಅಪ್ಪಯ್ಯ ಸ್ವಾಮಿಗಳ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗಿದ್ದು, ಭವ್ಯ ರಥೋತ್ಸವಕ್ಕೆ ಶ್ರೀಗಳು ಚಾಲನೆ ನೀಡಿದರು. ರಥೋತ್ಸವ ನಿಮಿತ್ತ ರಥಕ್ಕೆ ವಿವಿಧ ಹೂವುಗಳಿಂದ ಆಕರ್ಷಕವಾಗಿ ಅಲಂಕಾರ ಮಾಡಲಾಗಿದ್ದು, ಸಂಜೆ ವೇಳೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಪ್ಪಯ್ಯ ಸ್ವಾಮಿಗಳ ಭವ್ಯ ರಥೋತ್ಸವ ನಡೆಯಿತು. ರಥೋತ್ಸವಕ್ಕೆ ಕೋಹಳ್ಳಿ, ಅಡಹಳ್ಳಿ, ಅಥಣಿ, ವಿಜಯಪುರ, ಜತ್ತ ತಾಲೂಕು, ಜಮಖಂಡಿ, ಕಾಗವಾಡ, ತುಬಚಿ, ಬಾಡಗಿ, ಕೊಕಟನೂರ, ತೆಲಸಂಗ, ತಿಕೋಟಾ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳ ಭಕ್ತರು ಆಗಮಿಸಿದ್ದರು.