ಸಾರಾಂಶ
ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪ್ರಧಾನಮಂತ್ರಿಗಳ ಕರೆಯ ಮೇರೆಗೆ ಸ್ವಚ್ಛ ತೀರ್ಥ ಅಭಿಯಾನದ ಹಿನ್ನೆಲೆಯಲ್ಲಿ ಹಿರೇಮಗಳೂರಿನ ಶ್ರೀ ಕೋದಂಡ ರಾಮಚಂದ್ರ ದೇವಾಲಯದಲ್ಲಿ ಮಂಗಳವಾರ ಬಿಜೆಪಿಯಿಂದ ಸ್ವಚ್ಛತೆ ಹಮ್ಮಿಕೊಳ್ಳಲಾಗಿತ್ತು.ಮಾಜಿ ಸಚಿವ ಸಿ.ಟಿ. ರವಿ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬೆಳಿಗ್ಗೆ ದೇವಾಲಯದ ಹೊರ ವಲಯ ಹಾಗೂ ಆವರಣದೊಳಗೆ ಕಸ ಗುಡಿಸಿ ನೀರು ಹಾಕಿ ಶುಚಿಗೊಳಿಸಿದರು.
ಹಿರೇಮಗಳೂರಿನ ಶ್ರೀ ಕೋದಂಡ ರಾಮಚಂದ್ರ ದೇವಾಲಯದಲ್ಲಿ ಸ್ವಚ್ಛತಾ ಅಭಿಯಾನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪ್ರಧಾನಮಂತ್ರಿಗಳ ಕರೆಯ ಮೇರೆಗೆ ಸ್ವಚ್ಛ ತೀರ್ಥ ಅಭಿಯಾನದ ಹಿನ್ನೆಲೆಯಲ್ಲಿ ಹಿರೇಮಗಳೂರಿನ ಶ್ರೀ ಕೋದಂಡ ರಾಮಚಂದ್ರ ದೇವಾಲಯದಲ್ಲಿ ಮಂಗಳವಾರ ಬಿಜೆಪಿಯಿಂದ ಸ್ವಚ್ಛತೆ ಹಮ್ಮಿಕೊಳ್ಳಲಾಗಿತ್ತು.ಮಾಜಿ ಸಚಿವ ಸಿ.ಟಿ. ರವಿ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬೆಳಿಗ್ಗೆ ದೇವಾಲಯದ ಹೊರ ವಲಯ ಹಾಗೂ ಆವರಣದೊಳಗೆ ಕಸ ಗುಡಿಸಿ ನೀರು ಹಾಕಿ ಶುಚಿಗೊಳಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಸಿ.ಟಿ.ರವಿ ಭವ್ಯ ಭಾರತದ ಸಾಂಸ್ಕೃತಿಕ ಇತಿಹಾಸ ರಾಮಾಯಣವಿಲ್ಲದೇ ಪೂರ್ಣ ಗೊಳಿಸಲು ಸಾಧ್ಯವಿಲ್ಲ. ಅಂತಹ ಪರಂಪರೆ ಹೊಂದಿರುವ ಅಯೋಧ್ಯೆಯಲ್ಲಿ ಸುಮಾರು ಐದು ಶತಮಾನದ ಹೋರಾಟದ ಫಲವಾಗಿ ಶ್ರೀರಾಮಚಂದ್ರನ ಮಂದಿರ ನಿರ್ಮಾಣವಾಗುತ್ತಿದೆ. ಆ ನಿಟ್ಟಿನಲ್ಲಿ ದೇವಾಲಯವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶ್ರೀರಾಮ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಒಂದು ವಾರಗಳ ಕಾಲ ಇಡೀ ದೇಶಾದ್ಯಂತ ಸ್ವಚ್ಛತಾ ಅಭಿಯಾನ ಕೈಗೊಳ್ಳಬೇಕು. ವಿಶೇಷವಾಗಿ ದೇಗುಲಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಸೋಮವಾರ ಕಳಸಾಪುರದ ದೇವಾಲಯ ಹಾಗೂ ಮಂಗಳವಾರ ಶ್ರೀ ಕೋದಂಡರಾಮಚಂದ್ರ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು. ಹೀಗಾಗಿ ಜಿಲ್ಲೆ ಹಾಗೂ ನಾಡಿನ ಸಮಸ್ತ ಜನತೆ ತಮ್ಮ ಗ್ರಾಮಗಳಲ್ಲಿರುವ ದೇವಾಲಯವನ್ನು ಅಚ್ಚುಕಟ್ಟಾಗಿ ಸ್ವಚ್ಛಗೊಳಿಸಿ ಆಂದೋಲನವನ್ನಾಗಿ ಮಾಡಬೇಕು. ಸ್ವಚ್ಛತೆ ಎಲ್ಲಿರುವುದು ಆ ಪ್ರದೇಶದಲ್ಲಿ, ಮನಸ್ಸಿನಲ್ಲಿ ಹಾಗೂ ಹೃದಯದಲ್ಲಿ ಭಗವಾನ್ ಶ್ರೀರಾಮ ನೆಲೆಸಿರಲು ಸಾಧ್ಯ ಎಂಬ ಹಿರಿಯರ ನಂಬಿಕೆಗನುಣವಾಗಿ ದೇವಾಲಯ ಸ್ವಚ್ಛವಾಗಿಡುವ ಕೆಲಸ ಮಾಡಬೇಕು ಎಂದು ಹೇಳಿದರು. ಯಾವುದೇ ದೇವಾಲಯ ಮೊದಲು ಜಾತಿ, ಅಸ್ಪೃಶ್ಯತೆಯಿಂದ ಮುಕ್ತವಾಗಬೇಕು. ಶುಚಿತ್ವದ ವಿಚಾರದಲ್ಲಿ ಜಾತಿ, ಬೇಧ ಹಾಗೂ ತಾರತಮ್ಯ ಹೊಂದದೇ ಸದುದ್ದೇಶವನ್ನಿಟ್ಟುಕೊಂಡು ಸ್ವಚ್ಛತೆಯಲ್ಲಿ ತೊಡಗಿಸಿದರೆ ಮಾತ್ರ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಂಪೂರ್ಣ ಅರ್ಥ ಮೂಡಲಿದ್ದು ಸರ್ವರು ಒಂದೇ ಎಂಬುದನ್ನು ಮನೆ, ಮನದಲ್ಲಿ ಮೂಡಿಸಿಕೊಳ್ಳುವ ಸಂಕಲ್ಪ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು. ಬಿಜೆಪಿ ನಗರಾಧ್ಯಕ್ಷ ಮಧುಕುಮಾರ್ ರಾಜ್ ಅರಸ್ ಮಾತನಾಡಿ ಶ್ರೀರಾಮಪ್ರಭುವಿನ ಭವ್ಯ ಮಂದಿರ ನಿರ್ಮಾಣದ ಅಂಗವಾಗಿ ನಗರ ಸಮಿತಿಯಿಂದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಜ.22 ರವರೆಗೂ ನಗರದ ವಿವಿಧ ದೇಗುಲಗಳಲ್ಲಿ ಸ್ವಚ್ಛಗೊಳಿಸಿ ಬಾಲರಾಮನ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದರು. ಈ ಸಂದರ್ಭದಲ್ಲಿ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ನಗರಸಭಾ ಉಪಾಧ್ಯಕ್ಷ ಅಮೃತೇಶ್ ಚೆನ್ನಕೇಶವ, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ವೆಂಕಟೇಶ್, ನಗರ ಅಧ್ಯಕ್ಷ ಕೇಶವ, ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಮಾದ್ಯಮ ಪ್ರಮುಖ್ ಅಂಕಿತಾ, ಮುಖಂಡರಾದ ಪುಷ್ಪರಾಜ್, ರಾಜ್‌ಕುಮಾರ್, ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.16 ಕೆಸಿಕೆಎಂ 5ಸ್ವಚ್ಛ ತೀರ್ಥ ಅಭಿಯಾನದ ಹಿನ್ನಲೆಯಲ್ಲಿ ಹಿರೇಮಗಳೂರಿನ ಶ್ರೀ ಕೋದಂಡರಾಮಚಂದ್ರ ದೇವಾಲಯವನ್ನು ಮಾಜಿ ಸಚಿವ ಸಿ.ಟಿ.ರವಿ ಹಾಗೂ ಬಿಜೆಪಿ ಕಾರ್ಯಕರ್ತರು ಶುಚಿಗೊಳಿಸಿದರು.