ಸರ್ಕಾರಿ ಶಾಲೆಗೆ ಪೀಠೋಪಕರಣ ಹಸ್ತಾಂತರ

| Published : Mar 24 2024, 01:33 AM IST

ಸಾರಾಂಶ

ಹಿರೇಕೆರೂರು ತಾಲೂಕಿನ ಕಳಗೊಂಡ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಸೀಡ್ ವರ್ಕ್ಸ ಇಂಟರ್‌ನ್ಯಾಷನಲ್ ಕಂಪನಿ ವತಿಯಿಂದ ನೀಡದ ಪೀಠೋಪಕರಣಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಹಿರೇಕೆರೂರು: ತಾಲೂಕಿನ ಕಳಗೊಂಡ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಸೀಡ್ ವರ್ಕ್ಸ ಇಂಟರ್‌ನ್ಯಾಷನಲ್ ಕಂಪನಿ ವತಿಯಿಂದ ನೀಡದ ಪೀಠೋಪಕರಣಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಈ ವೇಳೆ ಮಾತನಾಡಿದ ಸೀಡ್ ವರ್ಕ್ಸ ಇಂಟರ್‌ನ್ಯಾಷನಲ್ ಕಂಪನಿಯ ವ್ಯವಸ್ಥಾಪಕ ಹರ್ಷ ಎ. ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ನಾಗರಿಕರು, ಅವರಿಗೆ ಪ್ರಾಥಮಿಕ ಹಂತದಿಂದ ಉತ್ತಮ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಕಲಿಕೆಯ ವಯಸ್ಸಿನಲ್ಲಿ ಅವರಿಗೆ ಅನ್ಯ ಕಾರ್ಯಗಳಿಗೆ ಕಳುಹಿಸದೇ ಅವರನ್ನು ಶಿಕ್ಷಣದತ್ತ ಒಲವು ಹೆಚ್ಚಿಸಬೇಕು ಎಂದರು.

ಇನ್ನೋರ್ವ ವ್ಯವಸ್ಥಾಪಕ ಪುನೀತ್ ಎಂ.ಸಿ. ಮಾತನಾಡಿ, ಪ್ರತಿಯೊಬ್ಬರು ಶಿಕ್ಷಣವಂತರಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಿದ್ದು, ಪಾಲಕರು ತಪ್ಪದೇ ಮಕ್ಕಳನ್ನು ಶಾಲೆ ಸೇರಿಸಬೇಕು ಎಂದು ಮನವಿ ಮಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಮಹಾದೇವಪ್ಪ ಯಡಚಿ ಅಧ್ಯಕ್ಷತೆ ವಹಿಸಿದ್ದರು. ಜಗದೀಶ ದಂಡಗೀಹಳ್ಳಿ, ರತ್ನವ್ವ ಷಣ್ಮುಖಪ್ಪ ಮುದಿಗೌಡ್ರ, ರೂಪಾ ನಿಂಬೆಗೊಂದಿ, ಪ್ರಭಾಕರ ಹುಲ್ಲತ್ತಿ, ರಮೇಶ ಅರಳೀಕಟ್ಟಿ, ಪರಮೇಶಪ್ಪ ಕೆಳಗಿನಮನಿ, ಬಸವರಾಜ ಕೆಂಚಣ್ಣನವರ, ನಾಗಮ್ಮ ಮುದೇನಾಯ್ಕರ್, ವಿಜಯ ಯಡಚಿ, ಅರುಣ ತೆವರಿ, ತೇಜಸ್ವಿನಿ ಮಳವಳ್ಳಿ, ಶಾಂತಾ, ಸುನೀತಾ ಮರಿಗೌಡ್ರ, ಗೌರಮ್ಮ ಯಡಚಿ, ಚಿಂತನಾ ಮುಚಡಿ,ರಾಜೇಶ್ವರಿ ಚಪ್ಪರದಳ್ಳಿ, ಕಂಪನಿಯ ನಾಗಾರಾಜ ನಾಯ್ಕರ್, ಪರಮೇಶ್ವರಸ್ವಾಮಿ, ರಮೇಶ ತೆವರಿ ಸೇರಿದಂತೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರಿದ್ದರು.