ಸಾರಾಂಶ
ಮಂಗಳೂರು: ಸ್ವಸ್ಥನಾರಿ, ಸಶಕ್ತ ಪರಿವಾರ ಅಭಿಯಾನಕ್ಕೆ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಚಾಲನೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಸ್ಥನಾರಿ, ಸಶಕ್ತ ಪರಿವಾರ ಅಭಿಯಾನದಡಿ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸುಸಜ್ಜಿತ ವ್ಯವಸ್ಥೆಯೊಂದಿಗೆ ಮಹಿಳೆಯರ ಕ್ಯಾನ್ಸರ್ ತಪಾಸಣೆ, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ತಪಾಸಣೆಗಳೊಂದಿಗೆ ರಕ್ತದೊತ್ತಡ, ಮಧುಮೇಹ ತಪಾಸಣೆ, ತಜ್ಞ ವೈದ್ಯರ ಸೇವೆಯನ್ನು ನೀಡಲಾಗುತ್ತಿದೆ. ತೊಡಕಿನ ಗರ್ಭಿಣಿಯರನ್ನು ಪತ್ತೆಹಚ್ಚಿ, ವಿಶೇಷವಾಗಿ ಗರ್ಭಿಣಿಯರ ಆರೈಕೆ, ಪೌಷ್ಠಿಕ ಆಹಾರ ಶಿಬಿರ, ಗರ್ಭಿಣಿಯರ/ ಬಾಣಂತಿಯರ ಚಿಕಿತ್ಸಾ ವ್ಯವಸ್ಥೆ, ಟ್ರಾಕಿಂಗ್ ಸಿಸ್ಟಮ್ ಅಳವಡಿಸುವ ಮೂಲಕ ಆಪ್ತ ಸಮಾಲೋಚನೆ ಇತ್ಯಾದಿಗಳೊಂದಿಗೆ ಸುಸ್ಸಜಿತ ತಜ್ಞರ ವೈದ್ಯಕೀಯ ತಂಡಗಳ ವ್ಯವಸ್ಥೆ ಮಾಡಲಾಗಿದೆ. ಜೀವನ್ಮರಣ ಸ್ಥಿತಿಯಲ್ಲಿ ಮಹಿಳೆಯರ ವಿಶೇಷ ಆರೈಕೆಗಾಗಿ ಒತ್ತು ನೀಡಲಾಗಿದೆ ಎಂದು ಹೇಳಿದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಮಾತನಾಡಿ, ಸ್ವಸ್ಥನಾರಿ ಸಶಕ್ತ ಪರಿವಾರ ಅಭಿಯಾನದಲ್ಲಿ ತಾಯಿ- ಮಕ್ಕಳ ಆರೋಗ್ಯಕ್ಕೆ ಸಂಬಂಧಪಟ್ಟ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನೀಡಲಾಗುತ್ತಿದೆ ಎಂದರು.ಮುಖ್ಯ ಅತಿಥಿಗಳಾಗಿ ಲೇಡಿಗೋಶನ್ ಆರ್‌ಎಂಒ ಡಾ.ಜಗದೀಶ್, ಸ್ತ್ರೀರೋಗ ತಜ್ಞರಾದ ಡಾ. ರವಿಶಂಕರ್, ಡಾ. ದಯಾನಂದ, ಕೆ.ಎಂ.ಸಿ ಆಸ್ಪತ್ರೆಯ ಎಚ್ಒಡಿ ಡಾ.ಶ್ರದ್ಧಾ ಶೆಟ್ಟಿ, ಮಕ್ಕಳ ತಜ್ಞ ಡಾ.ನೂತನ್ ಕಾಮತ್, ತ್ರೇಸಿಯಾ ಮ್ಯಾಟ್ರಾನ್ ಇದ್ದರು.