ಎಲ್‍ಐಸಿ ಏಜೆಂಟ್‍ರ ಅಸೋಷಿಯೇಷನ್‍ ನೂತನ ಅಧ್ಯಕ್ಷರಾಗಿ ಹೇಮಂತ್‍ರಾಜ್‌

| Published : May 12 2025, 12:30 AM IST

ಎಲ್‍ಐಸಿ ಏಜೆಂಟ್‍ರ ಅಸೋಷಿಯೇಷನ್‍ ನೂತನ ಅಧ್ಯಕ್ಷರಾಗಿ ಹೇಮಂತ್‍ರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಎಲ್‍ಐಸಿ ಏಜೆಂಟ್‍ರ ಅಸೋಷಿಯೇಷನ್‍ ನೂತನ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಸಿ.ಎಸ್. ಹೇಮಂತ್‍ರಾಜ್, ಕಾರ್ಯದರ್ಶಿಯಾಗಿ ಎಸ್. ಮುರಳಿಧರ್ ಹಾಗೂ ಖಜಾಂಚಿಯಾಗಿ ಕೆ.ಆರ್. ಪ್ರಕಾಶ್ ಆಯ್ಕೆಯಾಗಿದ್ದಾರೆ.

- ಮುರಳೀಧರ್ ಕಾರ್ಯದರ್ಶಿ, ಕೆ.ಆರ್. ಪ್ರಕಾಶ್ ಖಜಾಂಚಿಯಾಗಿ ಆಯ್ಕೆ

- - - ಹರಿಹರ: ಎಲ್‍ಐಸಿ ಏಜೆಂಟ್‍ರ ಅಸೋಷಿಯೇಷನ್‍ ನೂತನ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಸಿ.ಎಸ್. ಹೇಮಂತ್‍ರಾಜ್, ಕಾರ್ಯದರ್ಶಿಯಾಗಿ ಎಸ್. ಮುರಳಿಧರ್ ಹಾಗೂ ಖಜಾಂಚಿಯಾಗಿ ಕೆ.ಆರ್. ಪ್ರಕಾಶ್ ಆಯ್ಕೆಯಾಗಿದ್ದಾರೆ.

ನಗರದ ಶ್ರೀ ಕಸ್ತೂರಿಬಾಯಿ ತುಕಾಮಣಿಸಾ ಭೂತೆ ಕಲ್ಯಾಣ ಮಂಟಪದಲ್ಲಿ ಎಲ್‍ಐಸಿ ಏಜೆಂಟರ ಅಸೋಷಿಯೇಷನ್ ಶನಿವಾರ ಆಯೋಜಿಸಿದ್ದ ಸರ್ವ ಸದಸ್ಯರ ಸಭೆಯಲ್ಲಿ ಹೇಮಂತರಾಜ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಹರಿಹರ ಶಾಖಾ ಸಂಘದ ಅಧ್ಯಕ್ಷ ನಾಗರಾಜ್ ಪೂಜಾರ್ ಅಧ್ಯಕ್ಷತೆಯಲ್ಲಿ ಶಿವಮೊಗ್ಗ ವಿಭಾಗೀಯ ಅಧ್ಯಕ್ಷ ಎ. ವೀರೇಶಪ್ಪ, ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಎನ್.ಎ., ಜಿಲ್ಲಾ ಉಪಾಧ್ಯಕ್ಷ ಎಚ್.ಎಸ್. ಮಹಾಬಲೇಶ್, ದಾವಣಗೆರೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಮಹಾಂತೇಶ್, ಶಾಖಾ ಧಿಕಾರಿ ಎಸ್.ಡಿ. ಕೃಷ್ಣಮೂರ್ತಿ, ಉಪ ಶಾಖಾಧಿಕಾರಿ ಸಿದ್ದು, ಗೌರವ ಸಲಹೆಗಾರರು ಎಸ್.ಮೃತ್ಯುಂಜಯ ಹರಿಹರ ಶಾಖೆ ಪ್ರಧಾನ ಕಾರ್ಯದರ್ಶಿ ಜಿ.ಎಂ. ಪ್ರಶಾಂತ್ ಕುಮಾರ್, ಖಜಾಂಚಿ ಬಿ.ಎಂ. ಬೆಟ್ಟಪ್ಪ, ಮಾಜಿ ಅಧ್ಯಕ್ಷ ದ್ಯಾಮನಗೌಡ, ಪ್ರಸನ್‍ಕುಮಾರ್, ಯು ಮಠದ್, ಕೆ.ಜಯಣ್ಣ ಉಪಸ್ಥಿತರಿದ್ದರು.

- - -

-11ಎಚ್‍ಆರ್‍ಆರ್02:

ಹರಿಹರದಲ್ಲಿ ಶನಿವಾರ ಎಲ್‍ಐಸಿ ಏಜೆಂಟರ ಅಸೋಷಿಯೇಷನ್ ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಅಭಿನಂದಿಸಲಾಯಿತು.