ಪಟ್ಟಣದ ಹಾವಳಿ ಹನುಮಪ್ಪನ ದೇವಸ್ಥಾನದ ಹತ್ತಿರ ಹಿಂದೂ ಸಮ್ಮೇಳನದ ಮೆರವಣಿಗೆಯು ಭಾನುವಾರ ಮಧ್ಯಾಹ್ನ 3.30ಕ್ಕೆ ಸಕಲ ವಾದ್ಯ ವೈಭವಗಳೊಂದಿಗೆ ಆರಂಭವಾಗುತ್ತದೆ. ಮೆರವಣಿಗೆಯಲ್ಲಿ ಕುಂಭ ಹೊತ್ತ ನೂರಾರು ಮಹಿಳೆಯರು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವರು.

ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ತೇರಿನ ಮನೆ ಆವರಣದಲ್ಲಿ ಭಾನುವಾರ ಸಂಜೆ 5 ಗಂಟೆಗೆ ನಡೆಯುವ ಹಿಂದೂ ಸಮ್ಮೇಳನವನ್ನು ಅದ್ಧೂರಿಯಾಗಿ ಆಯೋಜಿಸಲಾಗುವುದು ಎಂದು ಹಿರಿಯ ಮುಖಂಡ ಬಸವರಾಜ ಬೆಂಡಿಗೇರಿ ತಿಳಿಸಿದರು.

ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪಟ್ಟಣದ ಹಾವಳಿ ಹನುಮಪ್ಪನ ದೇವಸ್ಥಾನದ ಹತ್ತಿರ ಹಿಂದೂ ಸಮ್ಮೇಳನದ ಮೆರವಣಿಗೆಯು ಭಾನುವಾರ ಮಧ್ಯಾಹ್ನ 3.30ಕ್ಕೆ ಸಕಲ ವಾದ್ಯ ವೈಭವಗಳೊಂದಿಗೆ ಆರಂಭವಾಗುತ್ತದೆ. ಮೆರವಣಿಗೆಯಲ್ಲಿ ಕುಂಭ ಹೊತ್ತ ನೂರಾರು ಮಹಿಳೆಯರು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವರು ಎಂದರು.

ಮೆರವಣಿಗೆಯಲ್ಲಿ 6-8 ಕಲಾ ತಂಡಗಳು ಭಾಗವಹಿಸುತ್ತವೆ. ಎಲ್ಲ ಸಮಾಜದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಶೋಭಾಯಾತ್ರೆ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು. ಸಮ್ಮೇಳನದಲ್ಲಿ ಸುಮಾರು 8 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದರು.

ಬಸವೇಶ ಮಹಾಂತಶೆಟ್ಟರ, ಸುನೀಲ ಮಹಾಂತಶೆಟ್ಟರ ಹಾಗೂ ಸೋಮಣ್ಣ ಉಪನಾಳ ಮಾತನಾಡಿ, ಹಿಂದೂ ಸಮ್ಮೇಳನವನ್ನು ಯಶಸ್ವಿಗೊಳಿಸುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸುವ ಕಾರ್ಯ ಮಾಡುವುದು ಅಗತ್ಯವಾಗಿದೆ. ಹಿಂದೂ ಸಮ್ಮೇಳನವು ಹಾವಳಿ ಹನುಮಪ್ಪನ ದೇವಸ್ಥಾನದಿಂದ ಆರಂಭಗೊಂಡು ಬಜಾರ್ ಮೂಲಕ ಸಾಗಿ ಸೋಮೇಶ್ವರ ಪಾದಗಟ್ಟಿ, ಪುರಸಭೆ ಮುಂಭಾಗ, ಶಿಗ್ಲಿ ಕ್ರಾಸ್, ಹೊಸ ಬಸ್ ನಿಲ್ದಾಣ ಮೂಲಕ ಸಾಗಿ ಗದಗ ನಾಕಾ ಹತ್ತಿರದಿಂದ ಹಾಯ್ದು ಆದಯ್ಯ ಸರ್ಕಲ್ ಮೂಲಕ ಸಾಗಿ ಸೋಮೇಶ್ವರ ತೇರಿನ ಮನೆಯ ಆಚರಣದಲ್ಲಿ ಸಭೆಯಾಗಿ ಮಾರ್ಪಡುವುದು ಎಂದು ಹೇಳಿದರು.

ಸಮ್ಮೇಳನದಲ್ಲಿ ಗದುಗಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಸಾನ್ನಿಧ್ಯ ವಹಿಸುವರು. ಸಭೆಯ ಅಧ್ಯಕ್ಷತೆಯನ್ನು ಚಂದ್ರಣ್ಣ ಮಹಾಜನಶೆಟ್ಟರ ವಹಿಸುವರು. ದಿಕ್ಸೂಚಿ ಭಾಷಣವನ್ನು ಗೋವಿಂದಪ್ಪ ಗೌಡಪ್ಪಗೋಳ ಅವರು ಮಾಡುವರು ಎಂದರು.

ರಾಮರಾವ ವೇರ್ಣೇಕರ, ಚಂದ್ರ ಹಂಪಣ್ಣವರ, ಗುರುರಾಜ ಪಾಟೀಲ ಕುಲಕರ್ಣಿ, ಎಸ್.ಪಿ. ಪಾಟೀಲ, ವೈ.ಕೆ. ಲಿಂಗಶೆಟ್ಟಿ, ಚಿಕ್ಕಣ್ಣ ಪೂಜಾರ, ಗಜಾನನ ಹೆಗಡೆ, ಅನೀಲ ಮುಳಗುಂದ, ಬಸವಣೆಪ್ಪ ನಂದೆಣ್ಣವರ, ಗಂಗಾಧರ ಮೆಣಸಿನಕಾಯಿ, ಮಂಜುನಾಥ ಹೊಗೆಸೊಪ್ಪಿನ, ಪ್ರವೀಣ ಬೋಮಲೆ, ವಿಜಯ ಕುಂಬಾರ, ಬಂಗಾರೆಪ್ಪ ಮುಳುಗುಂದ, ಈರಣ್ಣ ಮುಳುಗುಂದ, ಸುರೇಶ ಮೆಡ್ಲೇರಿ, ನವೀನ ಹಿರೇಮಠ, ಪ್ರಶಾಂತ ಮೆಡ್ಲೇರಿ, ರವಿ ಕಲ್ಲೂರ, ವೀರೇಶ ಸಾಸಲವಾಡ, ಸುರೇಶ ಕುರ್ಡೇಕರ, ಸಂತೋಷ ಜಾವೂರ ಇದ್ದರು.