ಭಾರತೀಯರು ಜಗತ್ತಿಗೆ ಸಂಸ್ಕೃತಿಯನ್ನು, ನಾಗರಿಕತೆಯನ್ನು, ಬದುಕುವ ಕಲೆಯನ್ನು ಹೇಳಿಕೊಟ್ಟವರು. ನಮ್ಮ ದೇಶ ಉಳಿಯಬೇಕೆಂದರೆ ನಮ್ಮ ಹಿಂದೂ ಧರ್ಮ ಉಳಿಯಬೇಕು. ಆ ನಿಟ್ಟಿನಲ್ಲಿ ಹಿಂದೂ ಸಮಾಜೋತ್ಸವಗಳು ದೇಶದೆಲ್ಲೆಡೆ ನಡೆಯಬೇಕು ಎಂದು ಸ್ಪಟಿಕಪುರಿ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿಗಳು ನುಡಿದರು.

ಕನ್ನಡಪ್ರಭ ವಾರ್ತೆ ಶಿರಾ ಭಾರತೀಯರು ಜಗತ್ತಿಗೆ ಸಂಸ್ಕೃತಿಯನ್ನು, ನಾಗರಿಕತೆಯನ್ನು, ಬದುಕುವ ಕಲೆಯನ್ನು ಹೇಳಿಕೊಟ್ಟವರು. ನಮ್ಮ ದೇಶ ಉಳಿಯಬೇಕೆಂದರೆ ನಮ್ಮ ಹಿಂದೂ ಧರ್ಮ ಉಳಿಯಬೇಕು. ಆ ನಿಟ್ಟಿನಲ್ಲಿ ಹಿಂದೂ ಸಮಾಜೋತ್ಸವಗಳು ದೇಶದೆಲ್ಲೆಡೆ ನಡೆಯಬೇಕು ಎಂದು ಸ್ಪಟಿಕಪುರಿ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿಗಳು ನುಡಿದರು.ಅವರು ನಗರದಲ್ಲಿ ಏರ್ಪಡಿಸಿದ್ದ ಹಿಂದೂ ಸಮಾಜೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಸನಾತನ ಧರ್ಮವನ್ನು ನಾವು ಉಳಿಸುವ ಕೆಲಸ ಮಾಡಬೇಕು. ಈ ಧರ್ಮದ ಉಳಿವು ಜಗತ್ತಿನ ಕ್ಷೇಮದಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ಆದ್ದರಿಂದ ಧರ್ಮವನ್ನು ಗಟ್ಟಿಯಾಗಿ ನೆಲೆಗೊಳಿಸಬೇಕು. ಈ ನೆಲದ ಪರಂಪರೆ ನಮ್ಮ ಮುಂದಿನ ಪೀಳಿಗೆಗೆ ತಲುಪಿಸಬೇಕು ಆದ್ದರಿಂದ ಹಿಂದೂಗಳೆಲ್ಲರೂ ಸ್ವಯಂ ಜಾಗೃತಿಯಾಗಬೇಕು ಎಂದರು. ಸಿದ್ದರಬೆಟ್ಟ ರಂಭಾಪುರಿ ಖಾಸಾ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ದೇಶದ ಹಿಂದೂಗಳೆಲ್ಲರೂ ಹಿಂದೂ ಧರ್ಮದ ಸಂಸ್ಕೃತಿ ಹಿಂದೂ ಧರ್ಮದ ಆಚಾರ ವಿಚಾರ ತಿಳಿದುಕೊಳ್ಳಬೇಕು. ಈ ದೇಶ, ಸಂಸ್ಕೃತಿ, ಭೂಮಿ ನನ್ನದು ಎಂಬ ಭಾವನೆ ಮೂಡಬೇಕು. ತಂದೆ ತಾಯಿಗಳು ನಮ್ಮ ಪರಂಪರೆ, ಸಂಸ್ಕೃತಿ ಅರಿತು ನಮ್ಮ ಮಕ್ಕಳಿಗೆ ಕಲಿಸಿ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿ ಜೊತೆಯಲ್ಲಿ ನಮ್ಮ ಧರ್ಮ ಸಂಸ್ಕೃತಿ ಗೌರವಿಸುವುದನ್ನು ಕಲಿಸಿಕೊಡಿ. ನಮ್ಮ ದೇಶದ ಸಂಸ್ಕೃತಿ ಬಗ್ಗೆ ಜಾಗೃತರಾಗದಿದ್ದರೆ ಧರ್ಮ ಉಳಿಸಲು ಕಷ್ಟ. ನಾವು ಜಾಗೃತರಾಗಬೇಕು. ನಮ್ಮ ಸಂಸ್ಕೃತಿ, ಧರ್ಮದ ಬಗ್ಗೆ ಚಿಂತನೆ ಮಾಡಬೇಕು ಎಂದರು. ರಾಷ್ಟ್ರೀಯ ಸ್ವಯಂ ಸೇಕ ಸಂಘದ ತುಮಕೂರು ವಿಭಾಗ ಪ್ರಚಾರಕ್ ಶಿವರಾಜು ಮಾತನಾಡಿ, ಪ್ರಪಂಚದ ೧೮೦ಕ್ಕೂ ಹೆಚ್ಚಿನ ದೇಶಗಳಲ್ಲಿ ಯೋಗ, ಆರ್ಯುವೇದ ಸಂಸ್ಕೃತವನ್ನು ಅನುಸರಿಸುತ್ತಿದ್ದಾರೆ. ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟವಾಗುವ ಪುಸ್ತಕ ಭಗವದ್ಗೀತೆ. ಹಿಂದೂಗಳು ಒಗ್ಗಟ್ಟಾದರೆ ಏನನ್ನು ಬೇಕಾದರೂ ಸಾಧಿಸಬಹುದು. ಹಿಂದೂ ಒಗ್ಗಟ್ಟಾದರೆ ಹಿಂದೂವಿನ ಮಾತನ್ನು ಜಗತ್ತು ಕೇಳಿತ್ತದೆ. ಏಕೆಂದರೆ ಹಿಂದೂವಿನ ಮಾತಿನಲ್ಲಿ ಸತ್ಯ ಇದೆ. ನಾವೆಲ್ಲಾ ಜಾತಿ ಉಪಜಾತಿಯಲ್ಲಿ ಬೇರೆ ಬೇರೆಯಾದರೂ ನಮ್ಮನ್ನು ವಿದೇಶದಲ್ಲಿ ಹಿಂದೂಗಳೇ ಎನ್ನುವುದು. ಹಿಂದೂ ಎಂದರೆ ಅವರು ಒಳ್ಳೆಯವರು. ಒಳ್ಳೆಯದನ್ನು ಪಾಲಿಸುವವರು ಹಿಂದೂ. ನಿತ್ಯ ಜೀವನದ ನಡವಳಿಕೆಯೇ ಹಿಂದೂ ಎಂದರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ಶ್ರೀ ಚಿದಾನಂದ ಭಾರತಿ ಸ್ವಾಮೀಜಿ, ಶ್ರೀ ಸೇವಾಲಾಲ್ ಸರ್ಧಾರ್ ಸ್ವಾಮೀಜಿ, ಬಿ.ಕೆ.ಮಂಜುನಾಥ್, ಹಿಂದೂ ಸಮಾಜೊತ್ಸವ ಆಯೋಜನ ಸಮಿತಿಯ ಅಧ್ಯಕ್ಷ ಡಾ.ಸುರೇಶ್ ಶಾಸ್ತ್ರಿ, ಉಪಾಧ್ಯಕ್ಷರು ನಾಗೇಶ್, ರಂಗನಾಥ್.ಎಸ್.ಕೆ. ದಾಸಪ್ಪ, ಚಂದ್ರಣ್ಣ, ಸಂಚಾಲಕ ಅಭಿಷೇಕ್, ಕೋಶಾಧಿಕಾರಿ ಶಿವಕುಮಾರ್, ನಗರಸಭೆ ಸದಸ್ಯೆ ಉಮಾ ವಿಜಯರಾಜ್, ಬಿಜೆಪಿ ಮುಖಂಡರಾದ ಡಾ.ಬಿ.ಗೋವಿಂದಪ್ಪ, ಚಿಕ್ಕಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.