ಸಾರಾಂಶ
ಪ್ರತಿಷ್ಠಿತ ಕ್ರೆಡಿಟ್ ಸಹಕಾರ ಸಂಸ್ಥೆಯಾದ ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಇದರ ಸ್ಥಳಾಂತರಿತ ಬಿ.ಸಿ.ರೋಡ್ ಶಾಖೆಯನ್ನು ಬಿ.ಸಿ. ರೋಡ್ ಕೈಕಂಬದ ಪೆರೇರಾ ಕಟ್ಟಡದ ನೆಲಮಹಡಿಯಲ್ಲಿ ಇತ್ತೀಚೆಗೆ ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಪ್ರತಿಷ್ಠಿತ ಕ್ರೆಡಿಟ್ ಸಹಕಾರ ಸಂಸ್ಥೆಯಾದ ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಇದರ ಸ್ಥಳಾಂತರಿತ ಬಿ.ಸಿ.ರೋಡ್ ಶಾಖೆಯನ್ನು ಬಿ.ಸಿ. ರೋಡ್ ಕೈಕಂಬದ ಪೆರೇರಾ ಕಟ್ಟಡದ ನೆಲಮಹಡಿಯಲ್ಲಿ ಇತ್ತೀಚೆಗೆ ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈ ಉದ್ಘಾಟಿಸಿದರು. ಉಪಾಧ್ಯಕ್ಷೆ ಲಕ್ಷ್ಮಿ ಜಯಪಾಲ ಶೆಟ್ಟಿ ಸಂದೇಶ ವಾಚಿಸಿದರು. ಶಾಖಾ ಸಲಹಾ ಸಮಿತಿ ಅಧ್ಯಕ್ಷ ಹಾಗೂ ನಿರ್ದೇಶಕ ಪಿ.ಬಿ. ದಿವಾಕರ ರೈ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿ ಹಿಂದಿನ ಕಟ್ಟಡ ಮಾಲಕಿ ಶಶಿಲೇಖಾ ಎನ್. ಆಳ್ವ ಮತ್ತು ಡಾ. ನವೀನ್ ಆಳ್ವ ದಂಪತಿ ಮತ್ತು ಹೊಸ ಕಚೇರಿ ಕಟ್ಟಡ ಮಾಲಕಿ ಅವ್ರೆಲ್ಲಾ ಲವೀನಾ ಪೆರೇರಾ ಮತ್ತು ಸಂದೀಪ್ ಜಿ. ಮೆನೇಜಸ್ ದಂಪತಿಯನ್ನು ಸನ್ಮಾನಿಸಲಾಯಿತು.ಸಂಘದ ನಿರ್ದೇಶಕರಾದ ರಾಮಯ ಶೆಟ್ಟಿ, ಕುಂಬ್ರ ದಯಾಕರ ಆಳ್ವ, ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಡಾ. ಬಿ. ಸಂಜೀವ ರೈ, ಶಾಖಾ ಸಲಹಾ ಸಮಿತಿ ಸದಸ್ಯರಾದ ಲೋಕನಾಥ್ ಶೆಟ್ಟಿ, ಐತಪ್ಪ ಆಳ್ವ, ಸದಾನಂದ ಶೆಟ್ಟಿ, ಡಾ. ಆತ್ಮರಂಜನ್ ಶೆಟ್ಟಿ, ಸಿಎ ಯತೀಶ್ ಭಂಡಾರಿ, ಚಂದ್ರಶೇಖರ್ ಶೆಟ್ಟಿ, ಮಹಾಪ್ರಬಂಧಕ ಗಣೇಶ್ ಜಿ.ಕೆ. ಮತ್ತಿತರರಿದ್ದರು.
ವಿದ್ಯಾರ್ಥಿನಿ ಪ್ರಣಮ್ಯ ಪ್ರಾರ್ಥಿಸಿದರು. ಶಾಖಾಧಿಕಾರಿ ಶ್ರೀಹರ್ಷ ಡಿ.ಎಸ್. ವಂದಿಸಿದರು. ವ್ಯವಸ್ಥಾಪಕ ಶಮಂತ್ ಟಿ. ರೈ ನಿರೂಪಿಸಿದರು.---------------