ವಾರ್ತೆ ಇಲಾಖೆ ಬಾಪೂಜಿ ಪ್ರಬಂಧ ಸ್ಪರ್ಧೆ: ಶ್ರೀನಿತಾ ಪ್ರಥಮ

| Published : Oct 06 2025, 01:01 AM IST

ಸಾರಾಂಶ

ಉಡುಪಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ 156 ನೇ ಜಯಂತಿ ಅಂಗವಾಗಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮೂರು ವಿಭಾಗಗಳಲ್ಲಿ ಬಾಪೂಜಿ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ 156 ನೇ ಜಯಂತಿ ಅಂಗವಾಗಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮೂರು ವಿಭಾಗಗಳಲ್ಲಿ ಬಾಪೂಜಿ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.ಈ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಅಜ್ಜರಕಾಡಿನ ಭುಜಂಗ ಪಾರ್ಕ್‌ನಲ್ಲಿ ನಡೆದ ಗಾಂಧಿ ಜಯಂತಿಯಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಬಹುಮಾನಗಳನ್ನು ವಿತರಿಸಿದರು, ಶಾಸಕ ಯಶ್‌ಪಾಲ್ ಸುವರ್ಣ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಎಸ್ಪಿ ಹರಿರಾಮ್ ಶಂಕರ್ ಮುಂತಾದರಿದ್ದರು.

ವಿಜೇತರು ಪ್ರೌಢಶಾಲಾ ವಿಭಾಗ: ಕುಂದಾಪುರ ಶಂಕರನಾರಾಯಣ ಸ.ಪ.ಪೂ. ಕಾಲೇಜಿನ ಶ್ರೀನಿತಾ ಪ್ರಥಮ, ಉಡುಪಿಯ ಬಾಲಕಿಯರ ಸಪಪೂ ಕಾಲೇಜಿನ ಶಿವಾನಿ ದ್ವಿತೀಯ ಹಾಗೂ ಕಾರ್ಕಳ ಕಾಬೆಟ್ಟು ಎಸ್‌ವಿಟಿ ಆಂಗ್ಲ ಮಾಧ್ಯಮ ಶಾಲೆಯ ಅಸ್ಮಿತಾ ತೃತೀಯ ಸ್ಥಾನ ಪಡೆದಿರುತ್ತಾರೆ.ಪದವಿ ಪೂರ್ವ ಶಿಕ್ಷಣ ವಿಭಾಗ: ಕಾರ್ಕಳ ಸಾಣೂರು ಸಪಪೂ ಕಾಲೇಜಿನ ಸ್ನೇಹ ಪ್ರಥಮ, ಕುಂದಾಪುರ ಸಂತ ಮೇರಿ ಪಪೂ ಕಾಲೇಜಿನ ವಿದ್ಯಾಶ್ರೀ ದ್ವಿತೀಯ ಹಾಗೂ ಕುಂದಾಪುರ ಹೆಮ್ಮಾಡಿ ಜನತಾ ಪಪೂ ಕಾಲೇಜಿನ ಸುಶ್ಮಿತಾ ಆರ್ ನಾಯ್ಕ್ ತೃತೀಯ ಸ್ಥಾನ ಪಡೆದಿರುತ್ತಾರೆ.ಪದವಿ - ಸ್ನಾತಕೋತ್ತರ ಪದವಿ ವಿಭಾಗ: ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರದ ಕಾಲೇಜಿನ ಸವಿತಾ ಎಸ್.ಎಂ ಪ್ರಥಮ, ತೆಂಕನಿಡಿಯೂರು ಸಪ್ರದ ಕಾಲೇಜಿನ ಅಪ್ಸನಾ ದ್ವಿತೀಯ ಹಾಗೂ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರ.ದ. ಕಾಲೇಜಿನ ವಿದ್ಯಾರ್ಥಿನಿ ಅಶ್ವಿನಿ ಎನ್.ಡಬ್ಲ್ಯು. ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.