ಸಾರಾಂಶ
ಇಂಚಗೇರಿ ಸಂಪ್ರದಾಯದ ಮಠಗಳಲ್ಲಿ ಯಾವುದೇ ಬೇಧಭಾವವಿಲ್ಲ. ಈ ಮಠಗಳು ಜಾತ್ಯತೀತ ಮಠಗಳಾಗಿವೆ. ಎಲ್ಲ ವರ್ಗದ ಜನರು ನಮ್ಮ ಮಠದಲ್ಲಿದ್ದಾರೆ ಎಂದು ಇಂಚಗೇರಿ ಮಠದ ಪೀಠಾಧಿಪತಿ ಶ್ರೀ ರೇವಣಸಿದ್ಧೇಶ್ವರ ಮಹಾರಾಜರು ಹೇಳಿದರು.
ವಿಜಯಪುರ: ಇಂಚಗೇರಿ ಸಂಪ್ರದಾಯದ ಮಠಗಳಲ್ಲಿ ಯಾವುದೇ ಬೇಧಭಾವವಿಲ್ಲ. ಈ ಮಠಗಳು ಜಾತ್ಯತೀತ ಮಠಗಳಾಗಿವೆ. ಎಲ್ಲ ವರ್ಗದ ಜನರು ನಮ್ಮ ಮಠದಲ್ಲಿದ್ದಾರೆ ಎಂದು ಇಂಚಗೇರಿ ಮಠದ ಪೀಠಾಧಿಪತಿ ಶ್ರೀ ರೇವಣಸಿದ್ಧೇಶ್ವರ ಮಹಾರಾಜರು ಹೇಳಿದರು.
ನಮ್ಮ ಅಡುಗೆ ಮನೆಗಳಲ್ಲಿ ಎಲ್ಲ ಜಾತಿಯ ಜನರಿಗೆ ಅವಕಾಶ ಇದೆ. ಜಾತ್ಯತೀತ ಸಂಪ್ರದಾಯದ 40 ಮಠಗಳಲ್ಲಿ ಹರಿಜನ ಗಿರಿಜನರು ಇರುವ ಮಠಗಳು ಇವೆ. ಗಿರಿಮಲ್ಲೇಶ್ವರ ಮಹಾರಾಜರ ಮಾರ್ಗದರ್ಶನದಲ್ಲಿ ಮಾಧವಾನಂದ ಪ್ರಭುಜಿಗಳು ಜಾತ್ಯತೀತತೆಯನ್ನು ಅನುಸರಿಸಿದ್ದಾರೆ. ಸ್ವಾತಂತ್ರ್ಯ ಹೋರಾಟ, ಆಧ್ಯಾತ್ಮಿಕ ಸೇರಿದಂತೆ ಎಲ್ಲವನ್ನೂ ಜನರಿಗೆ, ಭಕ್ತರಿಗೆ ಮುಟ್ಟಿಸಿದ್ದು ಮಾಧವಾನಂದ ಪ್ರಭುಜಿಗಳು. ಎಲ್ಲಾ ಜಾತಿಗಳು, ಎಲ್ಲಾ ಸಮುದಾಯಗಳಲ್ಲೂ ಸಹ ಮಠಾಧೀಶರು ಆಗಿರುವ ಅವಕಾಶ ಕೊಟ್ಟಿದ್ದು ಇಂಚಗೇರಿ ಸಂಪ್ರದಾಯ ಮಠ ಎಂದರು.