ಬಾಲ ಕಾರ್ಮಿಕರ ತಪಾಸಣೆ, ಕಾಯ್ದೆ ಕುರಿತು ಜಾಗೃತಿ

| Published : Jun 17 2024, 01:33 AM IST

ಸಾರಾಂಶ

ನವದೆಹಲಿ ಎನ್‌ಸಿಪಿಸಿಆರ್, ಪ್ಯಾನ್-ಭಾರತದ ಪಾರುಗಾಣಿಕಾ ಮತ್ತು ಮಕ್ಕಳ ಮತ್ತು ಹದಿಹರೆಯದವರ ಪುನರ್ವಸತಿ ಜಾಗೃತಿ ಅಭಿಯಾನ ಬಾಲ ಹಾಗೂ ಕಿಶೋರ ಕಾರ್ಮಿಕರ ರಕ್ಷಣೆ ಹಾಗೂ ಪುರ್ನವಸತಿ ಕುರಿತು ಶನಿವಾರ ಜಿಲ್ಲೆಯ ವಿವಿಧ ಉದ್ಯಮಗಳಿಗೆ ಭೇಟಿ ನೀಡಿ, ಬಾಲ ಕಾರ್ಮಿಕರ ತಪಾಸಣೆ ಕೈಗೊಳ್ಳಲಾಯಿತು.

ಹಾವೇರಿ: ನವದೆಹಲಿ ಎನ್‌ಸಿಪಿಸಿಆರ್, ಪ್ಯಾನ್-ಭಾರತದ ಪಾರುಗಾಣಿಕಾ ಮತ್ತು ಮಕ್ಕಳ ಮತ್ತು ಹದಿಹರೆಯದವರ ಪುನರ್ವಸತಿ ಜಾಗೃತಿ ಅಭಿಯಾನ ಬಾಲ ಹಾಗೂ ಕಿಶೋರ ಕಾರ್ಮಿಕರ ರಕ್ಷಣೆ ಹಾಗೂ ಪುರ್ನವಸತಿ ಕುರಿತು ಶನಿವಾರ ಜಿಲ್ಲೆಯ ವಿವಿಧ ಉದ್ಯಮಗಳಿಗೆ ಭೇಟಿ ನೀಡಿ, ಬಾಲ ಕಾರ್ಮಿಕರ ತಪಾಸಣೆ ಕೈಗೊಳ್ಳಲಾಯಿತು.ತಪಾಸಣೆ ಸಂದರ್ಭದಲ್ಲಿ ಇಬ್ಬರು ಕಿಶೋರ ಕಾರ್ಮಿಕರನ್ನು ರಕ್ಷಿಸಿ ಪೋಷಕರ ವಶಕ್ಕೆ ಒಪ್ಪಿಸಲಾಯಿತು. ಪೋಷಕರಿಗೆ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರಾಗಲು ನೋಟಿಸ್ ನೀಡಲಾಯಿತು. ಬಾಲ ಕಾರ್ಮಿಕ ನಿಷೇಧ ಕಾಯ್ದೆಯ ಬಗ್ಗೆ ಎಲ್ಲಾ ಮಾಲೀಕರಿಗೆ ಜಾಗೃತಿ ಮೂಡಿಸಲಾಯಿತು ಹಾಗೂ ಕಾರಣ ಕೇಳುವ ಸೂಚನಾ ಪತ್ರ ಜಾರಿ ಮಾಡಲಾಯಿತು.ಕಾರ್ಮಿಕ ಇಲಾಖೆ ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ, ಕಾರ್ಮಿಕ ನಿರೀಕ್ಷಕರಾದ ಸಂಗೀತಾ ಬೆನಕನಕೊಪ್ಪ, ಪೊಲೀಸ್ ಇಲಾಖೆ, ರೇಷ್ಮೆ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಮಕ್ಕಳ ಸಹಾಯವಾಣಿ ೧೦೯೮ ಸಿಬ್ಬಂದಿಗಳು ತಪಾಸಣೆ ಸಭೆಯಲ್ಲಿ ಪಾಲ್ಗೊಂಡಿದ್ದರು.