ನಾಳೆ ಬಗರ್ ಹುಕುಂ ಸಾಗುವಳಿದಾರರಿಂದ ಅನಿರ್ದಿಷ್ಟಾವಧಿ ಧರಣಿ

| Published : Sep 14 2025, 01:04 AM IST

ನಾಳೆ ಬಗರ್ ಹುಕುಂ ಸಾಗುವಳಿದಾರರಿಂದ ಅನಿರ್ದಿಷ್ಟಾವಧಿ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಸೆ. ೧೪ರಂದು ಬಗರ್ ಹುಕುಂ ಸಾಗುವಳಿದಾರರ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಿದ್ದು ಬಗರ್ ಹುಕುಂ ಸಾಗುವಳಿ ಚೀಟಿ, ಹಕ್ಕುಪತ್ರ ನೀಡುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಇದರ ವಿರುದ್ದ ಸೆಪ್ಟೆಂಬರ್ ೧೫ರಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಅನಿರ್ದಿಷ್ಟ ಧರಣಿ ನಡೆಸಲು ಮುಂದಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜಿ. ನಾಗರಾಜ್ ಹೇಳಿದರು.

ಗಜೇಂದ್ರಗಡ: ಸೆ. ೧೪ರಂದು ಬಗರ್ ಹುಕುಂ ಸಾಗುವಳಿದಾರರ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಿದ್ದು ಬಗರ್ ಹುಕುಂ ಸಾಗುವಳಿ ಚೀಟಿ, ಹಕ್ಕುಪತ್ರ ನೀಡುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಇದರ ವಿರುದ್ದ ಸೆಪ್ಟೆಂಬರ್ ೧೫ರಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಅನಿರ್ದಿಷ್ಟ ಧರಣಿ ನಡೆಸಲು ಮುಂದಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜಿ. ನಾಗರಾಜ್ ಹೇಳಿದರು.

ಪಟ್ಟಣದ ಸೇವಾಲಾಲ ಸಭಾ ಭವನದಲ್ಲಿ ಶನಿವಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಲೆಮಾರುಗಳಿಂದ ಉಳುವೆ ಮಾಡುತ್ತಾ ಅದೇ ಜಮೀನಿನಲ್ಲಿ ತಮ್ಮ ಬದುಕು ಕಟ್ಟಿಕೊಂಡಿರುವ ರೈತರಿಗೆ ಭೂಮಿ ನೀಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದು ನಾಚೀಕೆಗೇಡಿನ ಸಂಗತಿಯಾಗಿದೆ. ಉಳುಮೆ ಮಾಡುವ ರೈತರಿಗೆ ಜಮೀನು ನೀಡಲು ಏನೇನೋ ಸಬೂಬು ಹೇಳುವ ಅಧಿಕಾರಿಗಳು, ದೊಡ್ಡ-ದೊಡ್ಡ ಪ್ಯಾನ್ ಕಂಪನಿಗಳಿಗೆ ಬೇಕಾದಷ್ಟು ಭೂಮಿಯನ್ನು ಧಾರಾಳವಾಗಿ ಬರೆದುಕೊಡುತ್ತಿರುವುದು ರೈತರ ಮೇಲಿನ ಕಾಳಜಿ ಎಂತಹದ್ದು ಎನ್ನುವುದನ್ನು ತೋರಿಸುತ್ತಿದ್ದೆ ಎಂದರು.ಕೃಷಿಕೂಲಿಕಾರರ ಸಂಘದ ತಾಲೂಕಾಧ್ಯಕ್ಷ ಬಾಲು ರಾಠೋಡ ಮಾತನಾಡಿ, ಬಗರ್ ಹುಕಂ ಸಾಗುವಳಿದಾರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಅನೇಕ ಬಾರಿ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ ಸೇರಿ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾರೂ ಗಮನ ಹರಿಸಿಲ್ಲ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಯಾವುದೇ ರೈತರನ್ನು ಒಕ್ಕಲೆಬ್ಬಿಸದೇ ಕಾಯ್ದೆಯಡಿ ಪರಿಶೀಲಿಸಿ ಹಕ್ಕುಪತ್ರ, ಸಾಗುವಳಿ ಚೀಟಿ ನೀಡಬೇಕು ಆದರೆ ತಾಲೂಕಿನಲ್ಲಿ ೫೧೧ ಅರ್ಜಿಗಳು ಸಲ್ಲಿಕೆಯಾಗಿದ್ದು ಅವುಗಳನ್ನು ತಿರಸ್ಕರಿಸಲಾಗಿದ್ದು, ಬಗರ್ ಹುಕುಂ ಭೂ ಮಂಜೂರಾತಿ ಸಮಿತಿಯ ಅಧ್ಯಕ್ಷರು ಶಾಸಕರೇ ಇರುವುದರಿಂದ ತಹಸೀಲ್ದಾರ ಅವರು ಕಾರ್ಯದರ್ಶಿಯಾಗಿದ್ದು ಯಾವುದೇ ರೀತಿಯ ಚೌಕಾಸಿ ನಡೆಸದೇ ಅರ್ಜಿಗಳನ್ನು ತಿರಸ್ಕರಿಸಿ ಅರ್ಹ ರೈತರಿಗೆ ಸಿಗಬೇಕಾದ ಭೂಮಿಯನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದರು.ಪ್ರಾಸ್ತಾವಿಕವಾಗಿ ಪೀರು ರಾಠೋಡ ಮಾತನಾಡಿದರು. ಈ ವೇಳೆ ಮುಖಂಡರಾದ ಚೆನ್ನಪ್ಪ ಗುಗಲೋತ್ತರ, ದಾವಲಸಾಬ ತಾಳಿಕೋಟಿ, ರೂಪೇಶ ಮಾಳೋತ್ತರ, ಮೆಹಬೂಬ್ ಹವಾಲ್ದಾರ್, ಮಾರುತಿ ರಾಠೋಡ, ದೇವಲಪ್ಪ ರಾಠೋಡ, ದುರ್ಗಪ್ಪ ಮಾಳೋತ್ತರ, ಗೋವಿಂದಪ್ಪ ಗುಗುಲೋತ್ತರ, ವೀರೇಶ ರಾಠೋಡ, ಕುಮಾರ ರಾಠೋಡ, ವಿರೇಶ ಮಾಳೋತ್ತರ, ರತ್ನವ್ವ ಮಾಳೋತ್ತರ ಸೇರಿ ಇತರರು ಇದ್ದರು.