ಮೋದಿಯವರ ಧೃಢ ನಿರ್ಧಾರದಿಂದ ಭಾರತ ಪ್ರಗತಿಯತ್ತ

| Published : Sep 16 2025, 01:00 AM IST

ಮೋದಿಯವರ ಧೃಢ ನಿರ್ಧಾರದಿಂದ ಭಾರತ ಪ್ರಗತಿಯತ್ತ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಭಿಮತ । ನಗರ-ಗ್ರಾಮಾಂತರ ಅಧ್ಯಕ್ಷರ ಪದಗ್ರಹಣ ಸಮಾರಂಭ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅಮೇರಿಕಾದ ಅಧ್ಯಕ್ಷ ಟ್ರಂಪ್ ಭಾರತದ ಮೇಲೆ ವಿನಾಕಾರಣ ಕಿಡಿಕಾರಿದ್ದಾರೆ, ಇದರ ಬಗ್ಗೆ ಮೋದಿಯವರು ಯಾವುದೇ ರೀತಿಯಿಂದ ಮಾತನಾಡದೇ ಚೈನಾ ಹಾಗೂ ರಷ್ಯಾದ ಜೊತೆಯಲ್ಲಿ ಮಾತನಾಡಲು ಪ್ರಾರಂಭ ಮಾಡಿದಾಗ ಅಮೇರಿಕಾ ಬಗ್ಗಿದೆ, ಮೋದಿಯವರ ಧೃಢ ನಿರ್ಧಾರದಿಂದ ಭಾರತ ಉತ್ತಮವಾದ ರೀತಿಯಲ್ಲಿ ಪ್ರಗತಿ ಸಾಧಿಸುತ್ತಿದೆ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.

ಚಿತ್ರದುರ್ಗ ನಗರದ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಸೋಮವಾರ ನಡೆದ ಚಿತ್ರದುರ್ಗ ನಗರ ಮತ್ತು ಗ್ರಾಮಾಂತರ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಮೆರಿಕಾದಲ್ಲಿ ಟ್ರಂಪ್ ಅಧ್ಯಕ್ಷರಾಗಲು ಅಲ್ಲಿನ ಅನಿವಾಸಿ ಭಾರತೀಯರು ಸಹಾ ಸಹಾಯವನ್ನು ಮಾಡಿದ್ದಾರೆ, ಅವರಿಗೆ ಮತವನ್ನು ನೀಡಿದ್ದಾರೆ. ಟ್ರಂಪ್ ಅವರು ಗೆಲ್ಲುವುದಕ್ಕೂ ಮನ್ನಾ ಒಂದು ರೀತಿ ಇದ್ದರೆ ಗೆದ್ದ ಮೇಲೆ ಒಂದು ಥರ ಆಗಿದ್ದು, ಭಾರತದ ಮೇಲೆ ವಿನಾಕಾರಣ ಕಿಡಿ ಕಾರುತ್ತಿದ್ದಾರೆ ತೆರಿಗೆಯನ್ನು ಹೆಚ್ಚಳ ಮಾಡುವುದರ ಮೂಲಕ ನಮ್ಮ ದೇಶದ ಮೇಲೆ ಗಧಾ ಪ್ರವಾಹ ಸಾರಿದ್ದಾರೆ. ಇದರ ಬಗ್ಗೆ ನಮ್ಮ ದೇಶದ ಪ್ರಧಾನ ಮಂತ್ರಿಗಳು ಇದರ ಬಗ್ಗೆ ತೆಲೆಕೆಡಿಸಿಕೊಳ್ಳದೇ ಚೈನಾ ಮತ್ತು ರಷ್ಯಾ ದೇಶದ ಜೊತೆಯಲ್ಲಿ ಮಾತನಾಡಿದಾಗ ಇದನ್ನು ಕಂಡ ಅಮೆರಿಕಾ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿದು ಭಾರತ ದೇಶದ ಮೇಲಿನ ಭಯ ಹಾಗೂ ಗೌರವ ಮೂಡಿದ್ದು, ಸಿಟ್ಟನ್ನು ಕಡಿಮೆ ಮಾಡಿಕೊಂಡಿದ್ದಾರೆ ಇದು ನಮ್ಮ ಪ್ರಧಾನಿಯಿಂದ ಸಾಧ್ಯವಾಗಿದೆ ಎಂದರು.

ನಮ್ಮ ದೇಶದ ಪ್ರಜೆಗಳು ಬೇರೆ ದೇಶಗಳಿಂದ ವಸ್ತುಗಳನ್ನು ತರಿಸುವುದನ್ನು ಕಡಿಮೆ ಮಾಡಿ ನಮ್ಮ ದೇಶದಿಂದ ಬೇರೆ ದೇಶಗಳಿಗೆ ರಫ್ತು ಮಾಡಲು ಮುಂದಾಗಬೇಕಿದೆ. ನಮ್ಮ ದೇಶದ ಅರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಮುಂದಿನ ದಿನದಲ್ಲಿ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಮೂರನೇ ಸ್ಥಾನಕ್ಕೆ ಬರಲಿದೆ ಆದರೆ ಇದನ್ನು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಕೆಟ್ಟದಾಗಿ ಮಾತನಾಡುತ್ತಿವೆ ಎಂದ ಅವರು, ಉತ್ತರ ಭಾರತದಲ್ಲಿ ಹಲವಾರು ಸಮಸ್ಯೆಗಳು ಇವೆ ಅವುಗಳನ್ನು ಬಗೆ ಹರಿಸುವಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿಗಳು ಮುಂದಾಗಿದ್ದಾರೆ. ನಮ್ಮ ಪಕ್ಷಕ್ಕೆ ಅಧಿಕಾರಕ್ಕಿಂತ ದೇಶ ಮೊದಲು ಆದರೆ ಬೇರೆ ಪಕ್ಷದವರಿಗೆ ಪಕ್ಷಕ್ಕಿಂತ ಅಧಿಕಾರ ಮೊದಲು ಎನ್ನುವಂತಾಗಿದೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.

ನಮ್ಮ ಪಕ್ಷದಲ್ಲಿ ಬೇರೆ ಪಕ್ಷಗಳಿಗಿಂತ ವಿಭೀನ್ನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ ದಾರಿಯಲ್ಲಿ ಹೋಗುವವರಿಗೆಲ್ಲಾ ನಮ್ಮಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದಿಲ್ಲ, ಇಲ್ಲಿ ಆಯ್ಕೆಯಾದ ಪದಾಧಿಕಾರಿಗಳು ಕಾಟಾಚಾರಕ್ಕೆ ಆಗದೇ ನಿಜವಾದ ರೀತಿಯಲ್ಲಿ ಕೆಲಸ, ಪಕ್ಷದ ಸಂಘಟನೆಯನ್ನು ಮಾಡಬೇಕಿದೆ, ಹಿಂದಿನ ಅಧ್ಯಕ್ಷರರು ಉತ್ತಮವಾಗಿ ಕೆಲಸವನ್ನು ಮಾಡಿದ್ದಾರೆ, ನೀವುಗಳು ಸಹಾ ಇದಕ್ಕಿಂತ ಉತ್ತಮವಾಗಿ ಕೆಲಸವನ್ನು ಮಾಡಿ ಪಕ್ಷವನ್ನು ನಗರ, ಗ್ರಾಮಾಂತರ ಪ್ರದೇಶದಲ್ಲಿ ಸಂಘಟಿಸಬೇಕಿದೆ. ಈಗ ಪಕ್ಷದಲ್ಲಿ ಸ್ಥಾನ ಸಿಗದಿದ್ದವರು ಆಸಮಾಧಾನಗೊಳ್ಳದೇ, ಪಕ್ಷದ ಸಂಘಟನೆಯಲ್ಲಿ ತೊಡಗಿ ಮುಂದೆ ಉತ್ತಮವಾದ ಸ್ಥಾನ ಸಿಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಮಾಜಿ ಅಧ್ಯಕ್ಷರಾದ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ನಗರಮಂಡಲದ ಮಾಜಿ ಅಧ್ಯಕ್ಷ ಚಾಲುಕ್ಯ ನವೀನ್, ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್‍ಯಾದವ್, ರಾಜ್ಯ ರೈತ ಮೋಚಾರ್ಯದ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ಗ್ರಾಮಾಂತರ ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ಕೆ.ನಾಗರಾಜ್, ಮಂಡಲದ ಮಾಜಿ ಅಧ್ಯಕ್ಷ ಕಲ್ಲೇಶಯ್ಯ, ವಕ್ತಾರ ನಾಗರಾಜ್ ಬೇದ್ರೇ ಸೇರಿದಂತೆ ಇತರರು ಭಾಗವಹಿಸಿದ್ದರು. ಮಹಾಂತೇಶ್ ಸ್ವಾಗತಿಸಿದರೆ ಸಂಗಮೇಶ್ ಕಾರ್ಯಕ್ರಮ ನಿರೂಪಿಸಿದರು.ಜಿಪಂ, ತಾಪಂ ಚುನಾವಣೆಗೆ ಸಜ್ಜಾಗಿ: ತಿಪ್ಪಾರೆಡ್ಡಿ

ಮುಂದಿನ ದಿನದಲ್ಲಿ ಜಿಪಂ, ತಾಪಂ ಹಾಗೂ ನಗರಸಭೆಯ ಚುನಾವಣೆಗಳು ಬರಲಿದ್ದು, ಇದಕ್ಕೆ ಪಕ್ಷದ ಪದಾಧಿಕಾರಿಗಳು ಸಜ್ಜಾಗಬೇಕಿದೆ. ಇದಕ್ಕೆ ಈಗಿನಿಂದಲೇ ಚುನಾವಣೆಗೆ ಸಜ್ಜಾಗಬೇಕಿದೆ. ತಮ್ಮ ದೈನಂದಿನ ಚಟುವಟಿಕೆಯಲ್ಲಿ ಪಕ್ಷದ ಕೆಲಸವನ್ನು ಸಹಾ ಮಾಡಲು ಮುಂದಾಗಬೇಕಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಪದಾಧಿಕಾರಿಗಳ ಸ್ಥಾನಕ್ಕೆ ನೇಮಕ ನಡೆಯಲಿದ್ದು, ಪ್ರತಿಬಾರಿಯೂ ಸಹಾ ಹೊಸದಾದ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ ಇದರಿಂದ ಹೊಸಬರಿಗೆ ಅವಕಾಶ ಸಿಕ್ಕತೆ ಆಗುತ್ತದೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.