ಗುರು-ಶಿಷ್ಯ ಪರಂಪರೆಗೆ ಭಾರತ ವಿಶ್ವಗುರು

| Published : Jul 27 2024, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ ಗುರು-ಶಿಷ್ಯ ಪರಂಪರೆಯಲ್ಲಿ ಭಾರತವೇ ವಿಶ್ವಗುರುವಾಗಿದೆ ಎಂದು ನಗರ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ತಾಳಿಕೋಟಿ ಹೇಳಿದರು. ಸ್ಥಳೀಯ ಲಯನ್ಸ್‌ ಕ್ಲಬ್‌ ಆಫ್ ಮಹಾಲಿಂಗಪು ಗ್ರೀನ್ ಬೇಸಿನ್ ಮತ್ತು ಸ್ಫೂರ್ತಿ ಗ್ರಾಮೀಣ ತರಬೇತಿ ಸಂಸ್ಥೆ ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಸಿದ್ದಾರೂಢ ಭವನದಲ್ಲಿ ನಡೆದ ಗುರುಭ್ಯೋ ನಮಃ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಗುರು-ಶಿಷ್ಯ ಪರಂಪರೆಯಲ್ಲಿ ಭಾರತವೇ ವಿಶ್ವಗುರುವಾಗಿದೆ ಎಂದು ನಗರ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ತಾಳಿಕೋಟಿ ಹೇಳಿದರು. ಸ್ಥಳೀಯ ಲಯನ್ಸ್‌ ಕ್ಲಬ್‌ ಆಫ್ ಮಹಾಲಿಂಗಪು ಗ್ರೀನ್ ಬೇಸಿನ್ ಮತ್ತು ಸ್ಫೂರ್ತಿ ಗ್ರಾಮೀಣ ತರಬೇತಿ ಸಂಸ್ಥೆ ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಸಿದ್ದಾರೂಢ ಭವನದಲ್ಲಿ ನಡೆದ ಗುರುಭ್ಯೋ ನಮಃ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅಧ್ಯಾಪಕ ವೃತ್ತಿ ಮಿಕ್ಕೆಲ್ಲ ದೇಶಗಳಿಗಿಂತ ಭಾರತದಲ್ಲಿ ಹೆಚ್ಚಿನ ಆದರ್ಶ ನೀತಿ ನಿಯಮಗಳನ್ನು ಪಾಲಿಸುತ್ತ ಬಂದಿರುವುದರಿಂದ ಇಡೀ ಜಗತ್ತಿಗೆ ಮಾದರಿಯಾಗಿದೆ. ಗುರುವಿನ ಸೇವೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಗುತ್ತದೆ ಎಂದರು.

ಈ ಸಂದರ್ಭದಲ್ಲಿ ಬಸವಾನಂದ ಶಾಲೆಯ ಮುಖ್ಯ ಗುರುಗಳಾದ ಸುರೇಶಗಿಂಡೆ ಹಾಗೂ ಯೋಗ ಶಿಕ್ಷಕರಾದ ಶಿವಕುಮಾರ್ ಪಾಟೀಲ್ ಇವರನ್ನು ಗುರುಪೂರ್ಣಿಮೆ ನಿಮಿತ್ತವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಉಮಾ ಗುಂಡಾ ಹಾಗೂ ಡಾ. ಎಂ ಎಸ್ ಚೆನ್ನಾಳ , ಪ್ರಕಾಶ ತಾಳಿಕೋಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಲಯನ್ಸ್ ಸದಸ್ಯ ಡಾ. ವಿಶ್ವನಾಥ್ ಗುಂಡಾ, ಡಾ.ಅಶೋಕ ದಿನ್ನಿಮನಿ,ಡಾ ವೆಂಕಟೇಶ ಬುರುಡ, ಡಾ ಸುರೇಖಾ ಚನ್ನಾಳ, ಡಾ ವಿದ್ಯಾ ದಿನ್ನಿಮನಿ, ಡಾ ಪ್ರಿಯಾಂಕ ಕೋಳಿಗುಡ್ಡ, ವಿದ್ಯಾ ಶಿರೋಳ, ಅಶ್ವಿನಿ ಕೋಳಿಗುಡ್ಡ, ಡಾ.ಅಪೂರ್ವ ಹಂಚಿನಾಳ, ಮಂಗಲಾ ತಾಳಿಕೋಟಿ, ಶೈಲಾ ಮುಕುಂದ ಸೇರಿ ನೂರಾರು ತಾಯಂದಿರು ಭಾಗವಹಿಸಿದ್ದರು. ಡಾಕ್ಟರ್ ರಮೇಶ ಶೆಟ್ಟರ್ ನಿರೂಪಿಸಿದರು. ಸಿದ್ದು ನಕಾತಿ ಅತಿಥಿಗಳನ್ನಿ ಪರಿಚಯಿಸಿದರು.--