ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಪೇಟೆ ಗಣಪತಿ ಎಂದೇ ಹೆಸರುವಾಸಿಯಾಗಿರುವ ಗಣೇಶ ಮೂರ್ತಿಯನ್ನು ಹೋಮ ಹವನದೊಂದಿಗೆ ಪ್ರತಿಷ್ಠಾಪಿಸಲಾಯಿತು.ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಎ ಆರ್ ಅಶೋಕ್, ಪ್ರತಿವರ್ಷದಂತೆ ಈ ವರ್ಷವೂ ಸಹ ಎಲ್ಲಾ ಸ್ನೇಹಿತರ ಬಳಗದ ವತಿಯಿಂದ ಅದ್ಧೂರಿಯಾಗಿ ಗಣೇಶ ಮೂರ್ತಿಯನ್ನು ಹೋಮ ಹವನದೊಂದಿಗೆ ಪ್ರತಿಷ್ಠಾಪಿಸಲಾಗಿದೆ. ವಿಘ್ನೇಶ್ವರನ ಆಶೀರ್ವಾದದಿಂದ ಈ ಬಾರಿ ಉತ್ತಮ ಮಳೆ, ಬೆಳೆಯಾಗಿದ್ದು, ರೈತರು ಹಸನ್ಮುಖರಾಗಿದ್ದು ಅದರಂತೆ ಭಗವಂತನ ಕರುಣೆ ಈ ಸಮಿತಿಯ ಮೇಲೆ ಅವರೆಲ್ಲಾ ಕೆಲಸಕಾರ್ಯಗಳು ಈಡೇರಲಿ ಎಂದು ಶುಭಹಾರೈಸಿ, ಪೇಟೆ ಗಣಪತಿ ಸೇವ ಕಾರ್ಯಗಳಿಗೆ ವಿಸರ್ಜನೆ ತನಕ ಎಲ್ಲಾ ಸಹಕಾರವನ್ನು ಪುರಸಭೆ ವತಿಯಿಂದ ನೀಡಲಾಗುವುದು ಎಂದರು.
ಗಣಪತಿ ಸೇವಾ ಸಮಿತಿಯ ಅದ್ಯಕ್ಷ ಮಂಜುನಾಥ್ (ಮಾಪಿಳ್ಳೈ) ಮಾತನಾಡಿ, ೨೧ ದಿನಗಳ ಕಾಲ ಸಮಿತಿಯ ವತಿಯಿಂದ ಅದ್ಧೂರಿಯಾಗಿ ೬೭ನೇ ಗಣೇಶೋತ್ಸವವನ್ನು ಆಚರಿಸಲು ತೀರ್ಮಾನಿಸಿದ್ದು ಪ್ರತಿನಿತ್ಯ ಹರಿಕಥೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿಶೇಷ ಕಾರ್ಯಕ್ರಮ ಗಳನ್ನು ಆಯೋಜಿಸಿದ್ದು, ಸಾರ್ವಜನಿಕರ ಸಹಕಾರ ಹಾಗೂ ಭಕ್ತಾದಿಗಳ ಸೇವಾದಾರರ ಸಹಕಾರ ಅತಿಮುಖ್ಯವಾಗಿ ಎಂದರು.ಕಾರ್ಯಕ್ರಮದ ಗೌರವ ಅಧ್ಯಕ್ಷ ಪೈಂಟ್ ರವಿ ಮಾತನಾಡಿ, ಈ ಹಿಂದೆ ಸೇವಾರ್ಥದಾರರ ಹಾಗೂ ಸಾರ್ವಜನಿಕರ ಸಹಕಾರದಿಂದ ಅದ್ಧೂರಿಯಾಗಿ ಗಣೇಶೋತ್ಸವವನ್ನು ಆಚರಿಸಲಾಗಿತ್ತು. ಸುಮಾರು ೨೧ ದಿನಗಳ ಕಾಲ ಈ ಬಾರಿ ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿದರೆ ವಿಜೃಂಭಣೆಯಿಂದ ಕಾರ್ಯಕ್ರಮ ಆಚರಿಸಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಸೇವಾಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ, ಪುರಸಭೆ ಸದಸ್ಯರಾದ ಶಾಂತಕುಮಾರ್, ಜಗದೀಶ್, ಸೌಮ್ಯ ಸುಬ್ರಹ್ಮಣ್ಯ, ಸಮಿತಿಯ ರಾಜು, ನಿವೀತ್, ಶ್ರೀಧರ್, ವೆಂಕಟೇಶ್, ಪರಮೇಶ್, ಜುಬೆರ್ ಅಹಮದ್, ಕುಮಾರ್, ಜೀವನ್, ಹರೀಶ್, ರಾಮಚಂದ್ರ ಇತರರು ಹಾಜರಿದ್ದರು.