ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಜಿಲ್ಲೆಯ ವಿವಿಧಡೆ ಡೆಂಘೀ ಜ್ವರ ಕಂಡುಬಂದಿರುವ ಹಿನ್ನೆಲೆಯಲ್ಲಿ ಡೆಂಘೀ ಜ್ವರ ಕಾರಣವಾದ ಅಂಶಗಳನ್ನು ನಿಯಂತ್ರಿಸಲು ಜಿಲ್ಲಾಡಳಿತ ತೀವ್ರ ಪ್ರಯತ್ನಪಡುತ್ತಿದೆ.ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಪರಿಸರದಲ್ಲಿ ಎಲ್ಲಿಯಾದರೂ ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯ ಲಾರ್ವಾ ಕಂಡುಬಂದಲ್ಲಿ ಅದರ ಫೋಟೋ ತೆಗೆದು ಸಂಬಂಧಿಸಿದ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಕಳುಹಿಸಿಕೊಡಬೇಕು. ಫೋಟೋದೊಂದಿಗೆ ಸ್ಥಳದ ಸರಿಯಾದ ವಿಳಾಸವನ್ನು ನಮೂದಿಸಿ, ಡೆಂಘೀ ನಿಯಂತ್ರಣಕ್ಕೆ ಸಹಕರಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ.
ಮನೆಯ ಸುತ್ತಮುತ್ತ ಹಾಗೂ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿರುವ ನೀರಿನ ತೊಟ್ಟಿಗಳು, ಡ್ರಮ್‍ಗಳು, ಬ್ಯಾರಲ್‍ಗಳು, ಹೂವಿನಕುಂಡ, ಹಳೆ ಟಯರುಗಳು, ಎಳೆನೀರು ಚಿಪ್ಪು ಮತ್ತಿತರ ವಸ್ತುಗಳಲ್ಲಿ ಅಥವಾ ಖಾಲಿ ಜಾಗಗಳಲ್ಲಿ ನೀರು ಸಂಗ್ರಹವಾದರೆ ಸೊಳ್ಳೆಗಳ ಲಾರ್ವಾಗಳು ಉತ್ಪತ್ತಿಯಾಗುತ್ತವೆ. ಲಾರ್ವಾ ನಾಶದಿಂದಷ್ಟೇ ಡೆಂಘೀ ನಿಯಂತ್ರಣ ಸಾಧ್ಯ. ಡೆಂಘೀ ನಿಯಂತ್ರಣಕ್ಕಾಗಿ ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾಗಿದೆ.ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ನಗರ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೊಳ್ಳೆ ಉತ್ಪತ್ತಿಯಾಗುವ ಪ್ರದೇಶಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲು ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಬಾಕ್ಸ್----
ಡೆಂಘೀ ಸೊಳ್ಳೆ ಉತ್ಪತ್ತಿ ತಾಣದ ಫೋಟೋ ಕಳುಹಿಸಬೇಕಾದ್ದು ಈ ಕೆಳಗಿನ ಅಧಿಕಾರಿಗಳ ಮೊಬೈಲ್ಗೆನಗರ ಪ್ರದೇಶಗಳು1) ಮಂಗಳೂರು ಮಹಾನಗರಪಾಲಿಕೆ ಕಂಟ್ರೋಲ್ ರೂಂ: 9449007722, ಮೇಲ್ವಿಚಾರಕರು: ನಿತಿನ್ - 9743219627, ಚಂದ್ರಹಾಸ- 9482250909, ಚೇತನ್- 9742567033, ಪ್ರವೀಣ್- 86187948922) ಉಳ್ಳಾಲ ನಗರಸಭೆ : ಪೌರಾಯುಕ್ತರು – 94490738713) ಸೋಮೇಶ್ವರ ಪುರಸಭೆ: ಮುಖ್ಯಾಧಿಕಾರಿಗಳು- 94494522554) ಕೋಟೆಕಾರ್ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 99022094855) ಮೂಡಬಿದ್ರೆ ಪುರಸಭೆ: ಮುಖ್ಯಾಧಿಕಾರಿಗಳು- 81059262916) ಮೂಲ್ಕಿ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 81059262917) ಕಿನ್ನಿಗೋಳಿ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 98860809408) ಬಜಪೆ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 99027749179) ಬಂಟ್ವಾಳ ಪುರಸಭೆ :ಮುಖ್ಯಾಧಿಕಾರಿಗಳು- 997298963710) ವಿಟ್ಲ ಪಟ್ಟಣ ಪಂಚಾಯತ್ : ಮುಖ್ಯಾಧಿಕಾರಿ -9606321133 11) ಪುತ್ತೂರು ನಗರಸಭೆ : ಪೌರಾಯುಕ್ತರು - 988640302912) ಬೆಳ್ತಂಗಡಿ ಪಟ್ಟಣ ಪಂಚಾಯತ್ : ಮುಖ್ಯಾಧಿಕಾರಿ – 984551826613) ಸುಳ್ಯ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 944825334114) ಕಡಬ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 9980882189ಗ್ರಾಮಾಂತರ ಪ್ರದೇಶಗಳು:1) ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ: 9480862110/94839122302) ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ: 96206364003) ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9480862110/94839122304) ಮೂಡುಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 94487959015) ಮೂಲ್ಕಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 99011146506) ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 94808621157) ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 99025793538) ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 82178301699) ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9902579353