ಮನಸೆಳೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

| Published : Feb 21 2025, 11:46 PM IST

ಸಾರಾಂಶ

ಗಾಳಿಪಟ ಉತ್ಸವಕ್ಕೆ ನೆರೆ ರಾಷ್ಟ್ರ, ನೆರೆ ರಾಜ್ಯ ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದರು. ಗಾಳಿಪಟ ಕಲಿಗಳು ಬಾನಂಗಳದಲ್ಲಿ ಹಾರಾಡಿಸಿದ ಬಣ್ಣ ಬಣ್ಣದ ಗಾಳಿಪಟಗಳು ಮನಸೆಳೆದವು.

ಹು​ಬ್ಬ​ಳ್ಳಿ: ನಗರದಲ್ಲಿ ಧಾ​ರ​ವಾಡ ಸಂಸ​ದ ಸಾಂಸ್ಕೃ​ತಿಕ ಮತ್ತು ಕ್ರೀಡಾ ಮ​ಹೋ​ತ್ಸ​ವ ಅಂಗ​ವಾಗಿ ಎ​ರಡು ದಿ​ನ​ಗಳ ಕಾಲ ನ​ಡೆದ ಅಂತಾರಾಷ್ಟ್ರೀಯ ಗಾ​ಳಿ​ಪಟ ಉ​ತ್ಸವ ಹಾಗೂ ಸಾಂಸ್ಕೃ​ತಿಕ ಕಾ​ರ್ಯ​ಕ್ರ​ಮ ಹು​ಬ್ಬ​ಳ್ಳಿಗರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಯಿತು. ಶು​ಕ್ರವಾರ ರಾತ್ರಿ ಸಂಪ​ನ್ನ​ಗೊಂಡಿತು.

ಗಾಳಿಪಟ ಉ​ತ್ಸ​ವ​ಕ್ಕೆ ನೆರೆ ರಾಷ್ಟ್ರ, ನೆರೆ ರಾಜ್ಯ ಹಾಗೂ ರಾ​ಜ್ಯದ ವಿ​ವಿ​ಧೆ​ಡೆ​ಯಿಂದ ಆಗಮಿಸಿದ್ದರು. ಗಾ​ಳಿ​ಪಟ ಕ​ಲಿ​ಗಳು ಬಾನಂಗಳದಲ್ಲಿ ಹಾ​ರಾ​ಡಿಸಿದ ಬಣ್ಣ ಬಣ್ಣದ ಗಾಳಿಪಟಗಳು ಮನಸೆಳೆದವು. ಎ​ರಡು ದಿ​ನ​ಗಳ ಕಾ​ಲವೂ ಮುಗಿಲೆತ್ತರದಲ್ಲಿ ರಾ​ರಾ​ಜಿ​ಸಿದ ಕ​ಲ​ರ್‌​ಫುಲ್‌ ಗಾ​ಳಿ​ಪ​ಟ​ಗಳು ಕಣ್ಮನ ಸೆ​ಳೆಯು​ವಲ್ಲಿ ಯ​ಶ​ಸ್ವಿ​ಯಾ​ದವು. ಅಮೆರಿಕಾ, ಸಿಂಗಾಪುರ, ಟರ್ಕಿ, ಆಸ್ಪ್ರೇಲಿಯಾ ಸೇರಿದಂತೆ ದೇ​ಶದ ನಾನಾ ಭಾ​ಗದ ಗಾ​ಳಿ​ಪ​ಟ​ ಕ​ಲಿ​ಗಳು ಪಾ​ಲ್ಗೊಂಡಿದ್ದು ವಿ​ಶೇ​ಷ​ವಾ​ಗಿತ್ತು.ನಗರದ ಅನೇಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಾ ಮುಂದು, ತಾ ಮುಂದು ಎನ್ನುತ್ತ ಭಿನ್ನ, ಭಿನ್ನ ಗಾಳಿಪಟಗಳನ್ನು ಹಾರಿಸುತ್ತ ವಿದೇಶಿಗರೊಂದಿಗೆ ಸ್ಪರ್ಧೆಯೊಡ್ಡಿ ಖುಷಿಪಟ್ಟರು. ಯುವಕರು, ಯುವತಿಯರು ಎನ್ನದೇ, ಪುಟಾಣಿ ಮಕ್ಕಳಾದಿಯಾಗಿ ಗಾಳಿಪಟ ತೇಲಿಬಿಟ್ಟು ಶಿಳ್ಳೆ, ಚಪ್ಪಾಳೆ ಹೊಡೆಯುತ್ತ, ಸೆಲ್ಫಿ ತೆಗೆದುಕೊಳ್ಳುತ್ತಾ ಸಂಭ್ರಮಿಸಿದ ದೃ​ಶ್ಯ​ಗಳು ಸಾ​ಮಾ​ನ್ಯ​ವಾ​ಗಿದ್ದ​ವು.

ಅ​ದ​ರಲ್ಲೂ ಶು​ಕ್ರ​ವಾರ ಬೆಳಗ್ಗೆ ನ​ಡೆದ ದೇಸಿ ಕ್ರೀಡೆ ಮಲ್ಲಗಂಬದಲ್ಲಿ ಮಕ್ಕಳು ಅದ್ಭುತ ಪ್ರದರ್ಶನ ನೀಡಿದರು. ಕುಸ್ತಿಯಲ್ಲಿ ಚಿಕ್ಕಮಕ್ಕಳಿಂದ ಹಿಡಿದು ವಿಶ್ವ ವಿದ್ಯಾಲಯದ ಹಂತದ ಪ್ರಶಸ್ತಿ ಪುರಸ್ಕೃತ ಕುಸ್ತಿಪಟುಗಳು ಮತ್ತು ರಾಜ್ಯ, ಅಂತಾರಾಜ್ಯ ಮಟ್ಟದ ಪ್ರಸಿದ್ಧ ಕುಸ್ತಿಪಟುಗಳ ಕಾದಾಟ ಕ್ರೀಡಾ ಪ್ರೇಕ್ಷಕರ ಮೈನವಿರೇಳಿಸುವಂತಿತ್ತು.

ರಂಜಿಸಿದ ಸಂಗೀತ

ಧಾ​ರ​ವಾಡ ಸಂಸದ ಸಾಂಸ್ಕೃ​ತಿಕ ಮತ್ತು ಕ್ರೀಡಾ ಮ​ಹೋ​ತ್ಸ​ವದಲ್ಲಿ ಶು​ಕ್ರ​ವಾ​ರ ನ​ಡೆದ ಸಾಂಸ್ಕೃತಿಕ ಕಾ​ರ್ಯ​ಕ್ರ​ಮ​ದಲ್ಲಿ ಖ್ಯಾತ ಗಾ​ಯಕ ರ​ಘು​ ದೀ​ಕ್ಷಿ​ತ್‌, ಬಿ​ಗ್‌​ಬಾಸ್‌ 11ರ ವಿ​ನ್ನರ್‌ ಹ​ನು​ಮಂತ ಲ​ಮಾಣಿ ಆ​ಕ​ರ್ಷ​ಣಿಯ ಕೇಂದ್ರ​ಬಿಂದು ಆ​ಗಿ​ದ್ದರು. ಹ​ನು​ಮಂತ ಲ​ಮಾಣಿ ಜಾ​ನ​ಪದ ಸೊ​ಡ​ಗಿ​ನ ​ಹಾಡು, ಹಾ​ಸ್ಯ​ಭ​ರಿತ ಮಾ​ತು​ಗ​ಳಿಗೆ ಜ​ನರು ಕೇಕೆ, ಶಿ​ಳ್ಳೆ, ಚ​ಪ್ಪಾಳೆ ತಟ್ಟಿ ಸಂಭ್ರ​ಮಿ​ಸಿ​ದರೆ, ರಘು ದೀ​ಕ್ಷಿತ್‌ ಅ​ವರ ಹಾ​ಡಿಗೆ ಜ​ನರು ಕು​ಣಿದು ಕು​ಪ್ಪ​ಳಿ​ಸಿ​ದ​ರು. ನಂತರ ನ​ಡೆದ ಸ​ಮಾ​ರೋಪ ಸ​ಮಾ​ರ​ಭ​ದಲ್ಲಿ ಕೇಂದ್ರ ಸ​ಚಿವ ಪ್ರಹ್ಲಾದ ಜೋಶಿ, ಶಾ​ಸಕ ಮ​ಹೇಶ ಟೆಂಗಿ​ನಕಾಯಿ ಸೇ​ರಿ​ದಂತೆ ಅ​ನೇಕ ಗ​ಣ್ಯರು ಉ​ಪ​ಸ್ಥಿ​ತ​ರಿ​ದ್ದರು.