ಸತತ ೩೨ ದಿನಗಳಿಂದ ಇಳಕಲ್ಲಿನಲ್ಲಿ ನಡೆದ ಐಪಿಎಲ್ ಕ್ರಿಕೆಟ್‌ ಪಂದ್ಯಾಟಗಳ ಅಂತಿಮ ಜಿದ್ದಾ ಜಿದ್ದಿ ಜ.೧೨ ರಂದು ನಗರದ ವೀರಮಣಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಸತತ ೩೨ ದಿನಗಳಿಂದ ಇಳಕಲ್ಲಿನಲ್ಲಿ ನಡೆದ ಐಪಿಎಲ್ ಕ್ರಿಕೆಟ್‌ ಪಂದ್ಯಾಟಗಳ ಅಂತಿಮ ಜಿದ್ದಾ ಜಿದ್ದಿ ಜ.೧೨ ರಂದು ನಗರದ ವೀರಮಣಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ನಗರದ ವಿಜಯ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಆರ್.ವೀರಮಣಿ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೧೪ ತಂಡಗಳ ಈ ಐಪಿಎಲ್ ಕ್ರಿಕೆಟ್‌ ಪಂದ್ಯದಲ್ಲಿ ಎಲ್ಲ ತಂಡಗಳು ಕಪ್‌ ತಮ್ಮದಾಗಿಸಿಕೊಳ್ಳಬೇಕೆಂದು ಪ್ರಯತ್ನ ಮಾಡಿವೆ. ಆದರೆ, ಇಂದಿಗೆ ಲಿಂಗ ಪಂದ್ಯಗಳು ಮುಗಿದು ಈಗ 4 ತಂಡಗಳ ಜಿದ್ದಾ ಜಿದ್ದಿ ನಡೆದಿದೆ. ಇದರಲ್ಲಿ ಯಾರು ಗೆಲುವು ಸಾಧಿಸುವ ಎರಡು ತಂಡಗಳು ಅಂತಿಮ ಫೈನಲ್‌ ಆಡಲಿವೆ. ಗೆದ್ದ ತಂಡಗಳಿಗೆ ಪ್ರಶಸ್ತಿ ಪ್ರದಾನವನ್ನು ಇಳಕಲ್ಲ ನಗರದ ಕಂಠಿ ವೃತ್ತದಲ್ಲಿ ವಿತರಣೆ ಮಾಡುವ ಕಾರ್ಯಕ್ರಮ ಇರುವುದು ಎಂದು ತಿಳಿಸಿದರು.ಜ.11 ರಂದು ಬೆಂಗಳೂರ ಹಾಗೂ ಮೈಸೂರಿನ ಮಹಿಳಾ ಕ್ರಿಕೆಟ್‌ ತಂಡಗಳ ಪ್ರದರ್ಶನ ಪಂದ್ಯವನ್ನು ಇಳಕಲ್ಲ ನಗರದ ಇದೇ ಮೈದಾನದಲ್ಲಿ ಆಡಿಸಲಾಗುವುದು. ಕಾರಣ ಇಳಕಲ್ಲ-ಹುನಗುಂದ ಹಾಗೂ ಎಲ್ಲ ಗ್ರಾಮಗಳ ಕ್ರೀಡಾ ಆಸಕ್ತರು ಆಗಮಿಸಬೇಕು. ಇನ್ನು ಈ ನಮ್ಮ ಪಂದ್ಯಾವಳಿಗೆ ಬಗ್ಗೆ ಆಗಲಾರದ ಯಾರೋ ಏನೆನೋ ಮಾತನಾಡುತ್ತಾರಂತೆ ಅವರ ಮಾತಿಗೆ ನಾವು ಬೆಲೆ ಕೊಡುವುದಿಲ್ಲ. ಇಲ್ಲಿ ಶುದ್ಧವಾದ ವಾತವರಣದಲ್ಲಿ ಕ್ರಿಕೆಟ್‌ ಪಂದ್ಯ ನಡೆಯುತ್ತಿದೆ. ಆಟಗಾರರಿಗೆ ಮತ್ತು ಆಟ ನೋಡಲು ಬಂದವರಿಗೂ ಸಹ ಇಲ್ಲಿ ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.ಗೋಷ್ಠಿಯಲ್ಲಿ ಮಹಾಂತೇಶ ನರಗುಂದ, ಶೇಖಣ್ಣ ಮುಚಕಂಡಿ, ಶಬ್ಬಿರ್ ಬಾಗವಾನ, ನಾಗರಾಜ ಬಾರಿಗಿಡದ, ಮೌಲೇಶ ಬಂಡಿವಡ್ಡರ, ಮುತ್ತು ನಾಲವಾಡದ ಹಾಗೂ ಇತರರು ಉಪಸ್ಥಿತರಿದ್ದರು.