ಸಾರಾಂಶ
ಕೊಕಟನೂರ ಗ್ರಾಮದಲ್ಲಿ ₹5 ಕೋಟಿ ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ ಲೋಕಾರ್ಪಣೆ ಮಾಡಿದ ಶಾಸಕ ಸವದಿ ಅವರು ಅಮ್ಮಾಜೇಶ್ವರಿ ಏತ ನೀರಾವರಿ ಕಾಮಗಾರಿ ಶೀಘ್ರ ಆರಂಭ ಮಾಡಲಾಗುವುದು ಎಂದರು.
ಕನ್ನಡಪ್ರಭ ವಾರ್ತೆ ಅಥಣಿ
₹1600 ಕೋಟಿ ವೆಚ್ಚದ ಅಮ್ಮಾಜೇಶ್ವರಿ ಏತ ನೀರಾವರಿ ಕಾಮಗಾರಿ ಶೀಘ್ರದಲ್ಲಿ ಆರಂಭವಾಗಲಿದೆ. ತಾಲೂಕಿನ ಉತ್ತರ ಭಾಗದ ರೈತರ ಬೇಡಿಕೆಯಾದ ಈ ಯೋಜನೆ ಕನಸು ನನಸಾಗುತಿರುವುದು ಅಭಿಮಾನದ ಸಂಗತಿ. ಈ ಯೋಜನೆಯಿಂದ ಒಟ್ಟು 17 ಸಾವಿರ ಹೇಕ್ಟರ ಪ್ರದೇಶ ನೀರಾವರಿ ಸೌಲಭ್ಯ ಪಡೆಯಲಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನೀರಾವರಿ ಇಲಾಖೆ ಹೀರೆಹಳ್ಳಕ್ಕೆ ನಿರ್ಮಿಸಲಾಗಿದ್ದ ₹5 ಕೋಟಿ ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ ಲೋಕಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ಈ ಯೋಜನೆ ಎರಡು ಹಂತದಾಗಿದೆ. ಮೊದಲೆ ಹಂತದಲ್ಲಿ ₹900 ಕೋಟಿ ಅನುದಾನದ ಕಾಮಗಾರಿಗೆ ಚಾಲನೆ ಸಿಗುತ್ತದೆ. ಎರಡನೆ ಹಂತದ ಯೋಜನೆಯಲ್ಲಿ ಇನ್ನುಳಿದ ಅನುದಾನ ಬಳಿಕೆ ಮಾಡಲಾಗುವುದು. ಈ ಯೋಜನೆ ಜಾರಿಗೆ ಬಂದ ನಂತರ ಕರಿಮಸೂತಿ ಯಾತ ನೀರಾವರಿ ಯೋಜನೆ ಕೆಲವು ಹಳ್ಳಿಗಳಿಗೆ ನೀರು ಸರಿಯಾಗಿ ಬರುತ್ತಿಲ್ಲ. ಆ ಎಲ್ಲ ಗ್ರಾಮಗಳಿಗೆ ಈ ಯೋಜನೆಯಿಂದ ನೀರಾವರಿ ಲಾಭ ಸಿಗುತ್ತದೆ ಎಂದು ಹೇಳಿದರು.
ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ 1 ಸಾವಿರ ಎಕರೆ ಪ್ರದೇಶ ನೀರಾವರಿ ಸೌಲಭ್ಯ ಪಡೆಯುವುದರ ಜೊತೆಗೆ ಸೇತುವೆ ಇರುವುದರಿಂದ ಸಂಚಾರಕ್ಕೆ ಅನಕೂಲ ಇದೆ. ಇದಕ್ಕೆ ಒಟ್ಟು 14 ಗೇಟ್‌ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು. ಗುತ್ತಿಗೆದಾರ ಐ.ಎಸ್.ಮಟಗಾರ ಮತ್ತು ನೀರಾವರಿ ಇಲಾಖೆ ಎಂಜನಿಯರ ಪ್ರವೀಣ ಹುಣಸಿಕಟ್ಟಿ ಅವರು ಈ ಕಾಮಾಗಾರಿ ನಿರ್ಮಾಣದಲ್ಲಿ ಗುಣಾತ್ಮಕ ಮತ್ತು ಗೊತ್ತು ಪಡಿಸಿದ ಅವಧಿಯಲ್ಲಿ ಮುಗಿಸಿದ್ದಾರೆ ಎಂದು ಮುಕ್ತ ಕಂಠದಿಂದ ಹೊಗಳಿದರು.ಈ ವೇಳೆ ಮುಖ್ಯ ಅತಿಥಿಗಳಾಗಿ ನೀರಾವರಿ ಇಲಾಖೆಯ ಸಾಹಾಯಕ ಕಾರ್ಯನಿರ್ವಾಹಕ ಎಂಜನಿಯರ ಪ್ರವೀಣ ಹುಣಸಿಕಟ್ಟಿ ಮತ್ತು ವಿನಯ ಕೋಳಿ, ಗುತ್ತಿಗೆದಾರ ಐ.ಎಸ್.ಮಟಗಾರ, ದೇವರಾಜ, ವಿಠಲ್ ದೇಸಾಯಿ, ಶಾಮರಾವ್, ಮಿನಪ್ಪ ಪ್ರಜಾರಿ, ಸುಭಾಶ, ಗುರಲಿಂಗಪ್ಪ ಸೋನಕರ ಭಾಗವಹಿಸಿದ್ದರು.
ಸ್ವಾಗತ ನೀರಾವರಿ ಇಲಾಖೆ ಸಾಹಾಯಕ ಕಾರ್ಯನಿರ್ವಾಹಕ ಇಂಜನಿಯರ ಪ್ರವೀಣ ಹುಣಸಿಕಟ್ಟಿ ವಂದನಾರ್ಪಣೆ, ಸಾಹಾಯಕ ಇಂಜನಿಯ ಉದಯ ಕೋಳಿ ಮಾಡಿದರು. ಇದಕ್ಕು ಪೂರ್ವದಲ್ಲಿ ಹಳ್ಳಕ್ಕೆ ಬಾಗಿನ ಅರ್ಪಿಸಿದರು.