ಸಾರಾಂಶ
ಕಬ್ಬಿಗೆ ₹3500 ದರ ಘೋಷಿಸಬೇಕು, ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ೮ ದಿನಗಳಿಂದ ಗುರ್ಲಾಪುರ ಕ್ರಾಸ್ ಸೇರಿದಂತೆ ಉತ್ತರ ಕರ್ನಾಟಕ ರೈತರು ಅನೇಕ ಕಡೆ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಹೋರಾಟಕ್ಕೆ ಸ್ಪಂದಿಸಿ ಕೂಡಲೇ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನ ಮುನಿ ಆಚಾರ್ಯ ೧೦೮ ಕುಲರತ್ನಭೂಷಣ ಮಹಾರಾಜರು, ಉಪವಾಸ ವ್ರತ ಆರಂಭಿಸಿದ್ದಾರೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕಬ್ಬಿಗೆ ₹3500 ದರ ಘೋಷಿಸಬೇಕು, ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ೮ ದಿನಗಳಿಂದ ಗುರ್ಲಾಪುರ ಕ್ರಾಸ್ ಸೇರಿದಂತೆ ಉತ್ತರ ಕರ್ನಾಟಕ ರೈತರು ಅನೇಕ ಕಡೆ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಹೋರಾಟಕ್ಕೆ ಸ್ಪಂದಿಸಿ ಕೂಡಲೇ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನ ಮುನಿ ಆಚಾರ್ಯ ೧೦೮ ಕುಲರತ್ನಭೂಷಣ ಮಹಾರಾಜರು, ಉಪವಾಸ ವ್ರತ ಆರಂಭಿಸಿದ್ದಾರೆ. ೪ ದಿನಗಳಿಂದ ಆಹಾರ ನೀರು ತ್ಯಾಗ ಮಾಡಿದ್ದೇವೆ. ರೈತರಿಗೆ ಮೂಲ ಸೌಕರ್ಯಗಳು ದೊರಕಬೇಕು. ರೈತ ರಾಷ್ಟ್ರದ ಬೆನ್ನೆಲೆಬು ಎಂದು ಹೇಳುವ ನಾವೆಲ್ಲರೂ ರೈತರಿಗೆ ಬೆಂಬಲ ನೀಡುವುದು ನಮ್ಮ ಆದ್ಯ ಕರ್ತ್ಯವ್ಯವಾಗಿದೆ ಎಂದರು.ವಿದ್ಯುತ್, ನೀರು ಜೊತೆಗೆ ರೈತ ಬೆಳೆದ ಕಬ್ಬಿನ ಬೆಳೆಗೆ ದರ ನಿಗದಿ ಪಡಿಸಬೇಕು. ಅವರ ಬೇಡಿಕೆಯಷ್ಟು ಬೆಲೆ ದೊರಕುವವರೆಗೂ ನಾವು ಉಪವಾಸ ವ್ರತ ಮುಂದುವರಿಸುತ್ತೇವೆ. ಓಂ ಭೀಮ ಖೃಷಿಕೋದ್ಧಾರಕ, ಶ್ರೀ ವೃಷಭ ದೇವಾಯನಮಃ ಎಂದು ಜಪಮಾಡುತ್ತಾ ಮುನಿಗಳು ಉಪವಾಸ ಮಾಡುತ್ತಿದ್ದಾರೆ. ೪ ದಿನಗಳಿಂದ ಆಹಾರ ನೀರು ಇಲ್ಲದ ಕಾರಣ ಈಗ ಮುನಿಗಳ ದೇಹದಲ್ಲಿ ಸುಸ್ತು ಕಂಡು ಬರುತ್ತಿದೆ. ಧ್ವನಿ ಬಿದ್ದು ಮಾತುಗಳು ಮೌನಕ್ಕೆ ಜಾರುತ್ತಿವೆ.
ಸರ್ಕಾರ ರೈತರ ಕಬ್ಬಿಗೆ ಕೂಡಲೇ ಬೆಂಬಲ ಬೆಲ ನೀಡಬೇಕು ಎಂದು ಜೈನ ಸಮುದಾಯದ ಶ್ರಾವಕ ಶ್ರಾವಕಿಯರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.