ಸಾರಾಂಶ
ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ ಹಳ್ಳಿಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಹಾಗೂ ಜಲ ಜೀವನ ಮೀಷನ್ ಯೋಜನೆಯಡಿ ಮನೆ-ಮನೆಗೆ ಗಂಗೆಯ ಶುದ್ಧ ನೀರು ಭರಿಸುವ ಪೈಪ್‌ಲೈನ್ ಕಾಮಗಾರಿ ಮಾಡಲಾಗಿದೆ. ಕೆಲ ವಾರ್ಡ್‌ಗಳಲ್ಲಿ ಪೈಪ್‌ಲೈನ್ ಹಾಕಿದ್ದು, ಅದಕ್ಕೆ ಅಗೆದಿರುವ ಗುಂಡಿಗಳನ್ನು ಹಾಗೆ ಬಿಡಲಾಗಿದೆ.
ಏಕನಾಥ ಮೆದಿಕೇರಿ
ಹನುಮಸಾಗರ:ಹನುಮಸಾಗರ ಗ್ರಾಮೀಣ ಭಾಗದಲ್ಲಿ ಮನೆ-ಮನೆಗೆ ನೀರು ಪೂರೈಸುವ ಜಲಜೀವನ ಮಿಷನ್ ಕಾಮಗಾರಿ ಕಳೆದ ನಾಲ್ಕು ವರ್ಷಗಳಿಂದ ಕುಂಟುತ್ತಾ ಸಾಗಿದ್ದು, ಈ ವರೆಗೂ ಹನಿ ನೀರು ಬಂದಿಲ್ಲ. ಪೈಪ್‌ಲೈನ್ ಅಳವಡಿಕೆ ಒಂದೆಡೆ ಖುಷಿ ತಂದರೆ, ಮತ್ತೊಂದೆಡೆ ಅದಕ್ಕಾಗಿ ಅಗೆದಿರುವ ರಸ್ತೆಗಳ ಸ್ಥಿತಿಯಿಂದ ಸಂಚಾರಕ್ಕೆ ತೊಂದರೆಯಾಗಿದೆ.
ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ ಹಳ್ಳಿಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಹಾಗೂ ಜಲ ಜೀವನ ಮೀಷನ್ ಯೋಜನೆಯಡಿ ಮನೆ-ಮನೆಗೆ ಗಂಗೆಯ ಶುದ್ಧ ನೀರು ಭರಿಸುವ ಪೈಪ್‌ಲೈನ್ ಕಾಮಗಾರಿ ಮಾಡಲಾಗಿದೆ. ಕೆಲ ವಾರ್ಡ್‌ಗಳಲ್ಲಿ ಪೈಪ್‌ಲೈನ್ ಹಾಕಿದ್ದು, ಅದಕ್ಕೆ ಅಗೆದಿರುವ ಗುಂಡಿಗಳನ್ನು ಹಾಗೆ ಬಿಡಲಾಗಿದೆ.ಆರಂಭದ ಆಸಕ್ತಿ ಈಗಿಲ್ಲ:
ಹನುಮಸಾಗರ ಹಾಗೂ ಹನುಮನಾಳ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಜಲಜೀವನ ಮೀಷನ್ ಯೋಜನೆ ಕಾಮಗಾರಿ ಮುಕ್ತಾಯವಾಗಿದ್ದು ಕೆಲ ಹಳ್ಳಿಗಳಿಗೆ ನೀರು ಬಂದಿದೆ. ಇನ್ನೂ ಕೆಲವು ಹಳ್ಳಿಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಆರಂಭದಲ್ಲಿ ಕಾಮಗಾರಿಗೆ ವೇಗ ನೀಡಿದ್ದ ಗುತ್ತಿಗೆದಾರರು, ಇದೀಗ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡುತ್ತಿದ್ದಾರೆ. ಕಾಮಗಾರಿ ಎಂದು ಮುಗಿಯುತ್ತದೆ, ಮನೆಗೆ ನೀರು ಯಾವಾಗ ಬರುತ್ತದೆ ಎಂದು ಜನರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.ಜೋಡಣೆ:
ಹನುಮಸಾಗರದಲ್ಲಿ ಪೈಪ್‌ಲೈನ್ ಅಳವಡಿಕೆಗೆ ಸಿಸಿ ರಸ್ತೆ ಒಡೆದು ಹಾಗೆ ಬಿಟ್ಟಿದ್ದಾರೆ. ರಸ್ತೆಗಳ ಮಧ್ಯೆ ಕಲ್ಲಿನ ಕಡಿ, ತೆಗ್ಗು ಬಿದ್ದಿದ್ದು ಸಾರ್ವಜನಿಕರು ಸಂಚರಿಸುವುದು ಕಷ್ಟಕರವಾಗಿದೆ. ದ್ವಿಚಕ್ರ ಸವಾರರು, ಮಕ್ಕಳು, ವೃದ್ಧರು ಮನೆಯಿಂದ ಹೊರ ಹೋಗದಂತಹ ಸಂಕಷ್ಟ ಎದುರಾಗಿದೆ. ಕೆಲವು ಕಾಲನಿಗಳಲ್ಲಿ ಪೈಪ್‌ನಲ್ಲಿ ಚರಂಡಿ ನೀರು ಹೋಗುತ್ತಿದೆ. ಈ ಕುರಿತು ಜನರು ಗುತ್ತಿಗೆದಾರರ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ.ತುಂಡುಗುತ್ತಿಗೆ ಸಮಸ್ಯೆ:
ಕಾಮಗಾರಿ ವಿಳಂಬವಾಗಲು ಜೆಜೆಎಂ ಕಾಮಗಾರಿಯಲ್ಲಿ ತುಂಡುಗುತ್ತಿಯದ್ದೇ ದೊಡ್ಡ ಸಮಸ್ಯೆಯಾಗಿದೆ. ಯಾವ ಗುತ್ತಿಗೆದಾರರು ಯಾವ ಕೆಲಸ ಮಾಡುತ್ತಾರೆ ಎಂದು ತಿಳಿಯುವುದಿಲ್ಲ. ಹೀಗಾಗಿ ಜನರು ಅತ್ತ ನೀರು ಇಲ್ಲದೆ, ಇತ್ತ ಅಗೆದ ರಸ್ತೆಯನ್ನು ದುರಸ್ತಿ ಮಾಡದೆ ಇರುವುದರಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಕಾಮಗಾರಿ ಶೀಘ್ರ ಮುಗಿಸುವ ಜತೆಗೆ ಅಗೆದಿರುವ ರಸ್ತೆ ದುರಸ್ತಿ ಮಾಡುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಕೋಟ್...
ಜೆಜೆಎಂ ಕಾಮಗಾರಿ ಪ್ರಾರಂಭದಲ್ಲಿ ಗುಂಡಿ ತೊಡಿ ನೀರಿನ ಪೈಪ್ ಹಾಕಿದ ಬಳಿಕ ಗುತ್ತಿಗೆದಾರರೇ ಸಿಮೆಂಟ್ ಹಾಕಿ ಸರಿಪಡಿಸಬೇಕು. ಗ್ರಾಮದ ಹಲವು ವಾರ್ಡ್‌ಗಳಲ್ಲಿ ವರ್ಷಗಳಿಂದ ಹಾಗೇ ಬಿಟ್ಟಿದ್ದಾರೆ. ಈ ಕುರಿತು ನಾವು ಸಾಕಷ್ಟು ಮಾತು ಹೇಳಿದ್ದೇವೆ. ದೂರುವಾಣಿ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ.ನಿಂಗಪ್ಪ ಮೂಲಿಮನಿ, ಪಿಡಿಒ ಹನುಮಸಾಗರಜೆಜೆಎಂ ಕಾಮಗಾರಿಗೆ ತೋಡಿದ ಗುಂಡಿ ಮುಚ್ಚದ ಕಾರಣ ವಯೋವೃದ್ಧರು, ಚಿಕ್ಕಮಕ್ಕಳಿಗೆ ತೀವ್ರ ತೊಂದರೆಯಾಗಿದೆ. ನಿತ್ಯ ಬೆಳಗ್ಗೆ ಜನರ ಬೈಗುಳ ಕೇಳಲಾಗದೆ ನಾವೇ ದುಡ್ಡು ಕೊಟ್ಟು ನೀರಿನ ಪೈಪ್‌ಲೈನ್ ಗುಂಡಿಗಳನ್ನು ಮುಚ್ಚಿದ್ದೇವೆ.
ಮೌಲಾಲಿ ಮೊಟಗಿ, ಗ್ರಾಮಸ್ಥಸುಸಜ್ಜಿತ ರಸ್ತೆಗಳನ್ನು ಕಾಮಗಾರಿ ಹೆಸರಿನಲ್ಲಿ ಅಗೆದ ವರ್ಷಗಳೇ ಗತಿಸಿವೆ. ಈ ವರೆಗೂ ದುರಸ್ತಿ ಮಾಡಿಲ್ಲ. ಪೈಪ್‌ಲೈನ್ ಜೋಡಣೆ ಸಮರ್ಪಕವಾಗಿ ಮಾಡದೆ ಇರುವುದರಿಂದ ಸರ್ಕಾರದ ಹಣ ಪೋಲಾಗುತ್ತಿದೆ.
ಶ್ರೀನಿವಾಸ ಮೆದಿಕೇರಿ, ಗ್ರಾಮಸ್ಥ