ಕಿಕ್ಕೇರಿ ಗ್ರಾಪಂ ಅಧ್ಯಕ್ಷರಾಗಿ ಕೆ.ಆರ್. ಕೃಷ್ಣ ಅವಿರೋಧ ಆಯ್ಕೆ

| Published : Feb 11 2025, 12:46 AM IST

ಕಿಕ್ಕೇರಿ ಗ್ರಾಪಂ ಅಧ್ಯಕ್ಷರಾಗಿ ಕೆ.ಆರ್. ಕೃಷ್ಣ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕಿಕ್ಕೇರಿ ಗ್ರಾಪಂನ ಹಿಂದಿನ ಅಧ್ಯಕ್ಷ ಕೆ.ಜಿ.ಪುಟ್ಟರಾಜು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬೆಂಬಲಿತ ಸದಸ್ಯ ಕೆ.ಆರ್.ಕೃಷ್ಣ ವರತು ಪಡಿಸಿ ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕಿಕ್ಕೇರಿ ಗ್ರಾಪಂ ನೂತನ ಅಧ್ಯಕ್ಷರಾಗಿ ಕೆ.ಆರ್.ಕೃಷ್ಣ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ ಕೆ.ಜಿ.ಪುಟ್ಟರಾಜು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬೆಂಬಲಿತ ಸದಸ್ಯ ಕೆ.ಆರ್.ಕೃಷ್ಣ ವರತು ಪಡಿಸಿ ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿಆಯ್ಕೆಯಾದರು.

ಒಟ್ಟು 16 ಸದಸ್ಯರ ಗ್ರಾಪಂನಲ್ಲಿ ಬಿಜೆಪಿ, ಜೆಡಿಎಸ್ ಬೆಂಬಲಿತ 11 ಸದಸ್ಯರು ಹಾಜರಾಗಿದ್ದರು. ಕಾಂಗ್ರೆಸ್ ಬೆಂಬಲಿತ 5 ಸದಸ್ಯರು ಗೈರಾಗಿದ್ದರು. ಚುನಾವಣಾಧಿಕಾರಿಯಾಗಿ ಸಿಡಿಪಿಒ ಅರುಣ್‌ಕುಮಾರ್, ಸಹ ಚುನಾವಣಾಧಿಕಾರಿಯಾಗಿ ಸುನಿಲ್‌ ಬಾಬು, ಪಿಡಿಒ ಚಲುವರಾಜ್‌ ಕರ್ತವ್ಯ ನಿರ್ವಹಿಸಿದರು.

ನೂತನ ಅಧ್ಯಕ್ಷ ಕೆ.ಆರ್ ಕೃಷ್ಣ ಮಾತನಾಡಿ, ತಮ್ಮ ಅಧಿಕಾರ ಅವಧಿಯಲ್ಲಿ ಗ್ರಾಪಂಗಳ ಮೂಲ ಸಮಸ್ಯೆಗಳಿಗೆ ವಿಶೇಷ ಗಮನ ಹರಿಸಿ ಬಗೆಹರಿಸಲಾಗುವುದು ಎಂದರು.

ಇದೇ ವೇಳೆ ನೂತನ ಅಧ್ಯಕ್ಷ ಕೃಷ್ಣರಿಗೆ ಅಭಿಮಾನಿಗಳು ಪುಷ್ಪಮಾಲೆ ಹಾಕಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಶುಭಾಷಯ ಕೋರಿದರು.

ಗ್ರಾಪಂ ಉಪಾಧ್ಯಕ್ಷೆ ಸಿ.ಎಲ್. ಜ್ಯೋತಿ, ಸದಸ್ಯರಾದ ಕೆ.ಜಿ.ಪುಟ್ಟರಾಜು, ಕೆ.ಆರ್.ರಾಜೇಶ್, ಎಸ್.ಕೆ.ಬಾಲಕೃಷ್ಣ, ಕೆ.ಬಿ. ಚಂದ್ರಶೇಖರ್, ಬಿ.ತಾಯಮ್ಮ, ಸಿ.ಬಿ.ಸರಸ್ವತಿ, ಭಾರತಿ, ಎಂ.ವಿ. ರೇಣುಕಮ್ಮ, ಪದ್ಮಾವತಿ, ಮುಖಂಡರಾದ ಗೋವಿಂದರಾಜು, ಅನಂತ ಇದ್ದರು.

ನಾಳೆ ಮಾಘ ಶುದ್ಧ ಪೌರ್ಣಮಿ ಮಹೋತ್ಸವ

ಮಂಡ್ಯ:

ಜಿಲ್ಲಾಡಳಿತ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ದತ್ತಿಗಳ ಇಲಾಖೆಯಿಂದ ಫೆ.12ರಂದು ಶ್ರೀರಂಗಪಟ್ಟಣದ ಶ್ರೀನಿಮಿಷಾಂಬಾ ದೇವಸ್ಥಾನದಲ್ಲಿ ಮಾಘ ಶುದ್ಧ ಪೌರ್ಣಮಿ ಮಹೋತ್ಸವ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಗಣಹೋಮ, ನಕ್ಷತ್ರಹೋಮ, ದುರ್ಗಹೋಮ ಹಾಗೂ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಮಧ್ಯಾಹ್ನ 1 ಗಂಟೆಗೆ ಪಂಚಾಮೃತ ಅಭಿಷೇಕ, ಪೂರ್ವಕ ಮಹಾಭಿಷೇಕ ನಡೆಯಲಿದೆ ಎಂದು ಶ್ರೀನಿಮಿಷಾಂಭಾ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.