ಸಾರಾಂಶ
ಮಂಡ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಕ್ಕೆ ತಾಲೂಕಿನ ಬಾಣಸಂದ್ರ, ತುರುವೇಕೆರೆ ಮತ್ತು ಮಾಯಸಂದ್ರದಲ್ಲಿ ಭವ್ಯ ಸ್ವಾಗತವನ್ನು ನೀಡಲಾಯಿತು.
ಕನ್ನಡಪ್ರಭವಾರ್ತೆ, ತುರುವೇಕೆರೆ
ಮಂಡ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಕ್ಕೆ ತಾಲೂಕಿನ ಬಾಣಸಂದ್ರ, ತುರುವೇಕೆರೆ ಮತ್ತು ಮಾಯಸಂದ್ರದಲ್ಲಿ ಭವ್ಯ ಸ್ವಾಗತವನ್ನು ನೀಡಲಾಯಿತು. ಶುಕ್ರವಾರ ಮಧ್ಯಾಹ್ನ ತಾಲೂಕಿನ ಬಾಣಸಂದ್ರಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಿ.ಪಿ.ರಾಜು ರವರ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ಮಂಗಳವಾದ್ಯದೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ತ್ರೀ ಶಕ್ತಿ ಸಂಘದ ಪದಾದಿಕಾರಿಗಳು ಪೂರ್ಣಕುಂಭ ಸ್ವಾಗತ ನೀಡಿದರು. ಮಕ್ಕಳಿಂದ ಬ್ಯಾಂಡ್ ಸೆಟ್ ನುಡಿಸಲಾಯಿತು. ತಹಸೀಲ್ದಾರ್ ಕುಂಇ ಅಹಮದ್, ಇಓ ಶಿವರಾಜಯ್ಯ, ಬಿಇಓ ಸೋಮಶೇಖರ್, ಗ್ರಾಮ ಪಂಚಾಯತಿ ಸದಸ್ಯರಾದ ಬಿ.ಎಸ್.ಪ್ರಕಾಶ್, ಬಾಣಸಂದ್ರ ಪಾಳ್ಯದ ಬಿ.ಎನ್.ಪ್ರಕಾಶ್ ಮುಖಂಡರಾದ ಮಣಿಗೌಡ, ಪುನಿತ್, ದಂಡಿನಶಿವರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ರಾಜಶೇಖರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಗೌರವಾಧ್ಯಕ್ಷರಾದ ಟಿ.ಎಸ್.ಬೋರೇಗೌಡ, ಕೋಶಾಧ್ಯಕ್ಷರಾದ ಕೆಂಪರಾಜ್, ಕನ್ನಡದ ಕಂದ ವೆಂಕಟೇಶ್ ಸೇರಿದಂತೆ ಹಲವರು ಸ್ವಾಗತಿಸಿದರು. ತುರುವೇಕೆರೆಗೆ ಆಗಮಿಸಿದ ಕನ್ನಡ ಜ್ಯೋತಿ ರಥವನ್ನು ಪಟ್ಟಣದ ಉಡುಸಲಮ್ಮ ದೇವಾಲಯದ ಮುಂಭಾಗದಿಂದ ಪಟ್ಟಣಕ್ಕೆ ಭವ್ಯ ಮೆರವಣಿಗೆಯ ಮೂಲಕ ಕರೆತರಲಾಯಿತು. ಇಲ್ಲಿ ಹಲವಾರು ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು. ಬಾಣಸಂದ್ರ ವೃತ್ತದಲ್ಲಿ ಕೆಲಕಾಲ ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಜನರಿಗೆ ಮಾಹಿತಿ ನೀಡಲಾಯಿತು. ಈ ಸಂಧರ್ಭದಲ್ಲಿ ಸಮಾಜ ಸೇವಕ ಅಮಾನಿಕೆರೆ ಮಂಜುನಾಥ್, ಬೀದಿಬದಿ ವ್ಯಾಪಾರಿಗಳ ಸಂಘದ ಮಾರುತಿ, ಎಸ್ ಎಫ್ ಐ ಸತೀಶ್, ತಂಡಗ ಚಂದ್ರಕೀರ್ತಿ, ತಾಲೂಕು ಕರುನಾಡ ವಿಜಯ ಸೇನೆಯ ಅಧ್ಯಕ್ಷ ತಾವರೇಕೆರೆ ಸುರೇಶ್, ಡಾ.ವಿಷ್ಣುವರ್ಧನ್ ಸೇನಾ ಸಮಿತಿಯ ಅಧ್ಯಕ್ಷ ಕಿಟ್ಟಿ, ಕರ್ನಾಟಕ ರಕ್ಷಣಾ ಸಮಿತಿಯ ಅಧ್ಯಕ್ಷ ಗುಡ್ಡೇನಹಳ್ಳಿ ಗವಿರಂಗಯ್ಯ, ಆಟೋ ಚಂದ್ರಣ್ಣ, ಗಿರೀಶ್, ಮೋಹನ್ ಕುಮಾರ್, ಆಟೋ ಗಂಗಣ್ಣ, ಇನ್ನರ್ ಕ್ಲಬ್ ನ ಗೀತಾ ಸುರೇಶ್ ಸೇರಿದಂತೆ ಹಲವಾರು ಮಂದಿ ಇದ್ದರು. ಮಾಯಸಂದ್ರಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥವನ್ನು ಮಾಯಸಂದ್ರದ ಕನ್ನಡ ಸಾಹಿತ್ಯ ಪರಿಷತ್ ನ ಪದಾದಿಕಾರಿಗಳಾದ ಪ್ರಕಾಶ್, ಶ್ರೀಧರ್, ಮುನಿರಾಜು, ಸಿ.ಎನ್.ನಂಜುಂಡಪ್ಪ ಸೇರಿದಂತೆ ಹಲವಾರು ಮಂದಿ ಸ್ವಾಗತಿಸಿದರು. ಗ್ರಾಮದ ಕೆಲವು ಬೀದಿಗಳಲ್ಲಿ ಸಂಚರಿಸಿದ ಕನ್ನಡ ಜ್ಯೋತಿ ರಥವನ್ನು ಕುಣಿಗಲ್ ತಾಲೂಕಿನ ಯಡಿಯೂರಿಗೆ ಬೀಳ್ಕೊಡಲಾಯಿತು.