ನಾಪೋಕ್ಲು: ಕನ್ನಡ ರಾಜ್ಯೋತ್ಸವ ಕ್ರೀಡಾಕೂಟ ಸಮಿತಿಯ ಚೆಯ್ಕಾಂಡಣೆ ವತಿಯಿಂದ ಚೆಯ್ಕಾಂಡಣೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ನರಿಯಂದಡ, ಕೋಕೇರಿ ಹಾಗೂ ಚೇಲಾವರ ಗ್ರಾಮಸ್ಥರಿಗಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಕೋಕೇರಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಕೋಕೇರಿ ತಂಡವು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡರೆ ನರಿಯಂದಡ ತಂಡವು ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು
.ಕಾಳಪ್ಪ ಭರ್ಜರಿ ಬ್ಯಾಟಿಂಗ್: ಮೊದಲು ಬ್ಯಾಟಿಂಗ್ ಮಾಡಿದ ನರಿಯಂದಡ ತಂಡವು ನಿಗದಿತ 6 ಓವರ್ಗಳಲ್ಲಿ 36 ರನ್ಗಳನ್ನು ಗಳಿಸಿತು.ಗೆಲುವಿಗೆ 37 ರನ್ಗಳ ಗುರಿ ಸವಾಲನ್ನು ಸ್ವೀಕರಿಸಿ ಬೆನ್ನಟ್ಟಿದ ಕೋಕೇರಿ ತಂಡದ ಪರ ಕಾಳಪ್ಪ
ಅವರು ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಕೋಕೇರಿ ತಂಡವುಕೇವಲ 5.4 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿ 9 ವಿಕೆಟ್ಗಳ ಭರ್ಜರಿ ಜಯ
ಸಾಧಿಸಿತು. ಇದಕ್ಕೂಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚೇಲಾವರ ತಂಡವನ್ನು ಪರಭಾವಗೊಳಿಸಿದ ನರಿಯಂದಡ ತಂಡವು ಫೈನಲ್ ಪ್ರವೇಶಿಸಿತ್ತು. ಕ್ರೀಡಾಕೂಟದಲ್ಲಿ ಮೂರು ಗ್ರಾಮಗಳ ಕ್ರೀಡಾಭಿಮಾನಿಗಳು ಪಾಲ್ಗೊಂಡು ಆಟಗಾರರನ್ನು ಪ್ರೋತ್ಸಾಹಿಸಿದರು. ಇತರ ಕ್ರೀಡಾಕೂಟವು ತಾರೀಕು 6,7 ಹಾಗೂ 8 ಎಂದು ಜರುಗಲಿದೆ. ಕಾರ್ಯಕ್ರಮದಲ್ಲಿ ಕ್ರೀಡಾಕೂಟ ಸಮಿತಿಯ ಅಧ್ಯಕ್ಷರಾದ ಚೇನಂಡ ಸಂಪತ್ , ಉಪಾಧ್ಯಕ್ಷ ಚೈಯಂಡ ನಂದ ನಾಚಪ್ಪ . ಕಾರ್ಯದರ್ಶಿ ಕುಟ್ಟನ ಸುನಿಲ್ ಕುಮಾರ್ ಸಮಿತಿಯು ಸದಸ್ಯರು ಹಾಗೂ ಕ್ರೀಡಾಭಿಮಾನಿಗಳುಭಾಗವಹಿಸಿದ್ದರು .
