ಸಾರಾಂಶ
ಮಾಧ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಳವಳ್ಳಿ ತಾಲೂಕು ದೊರನಹಳ್ಳಿ ಮೂಲದ ಬಸವೇಗೌಡ ಮತ್ತು ಗೌರಮ್ಮರ ಪುತ್ರ ಎಚ್.ಬಿ.ಸುನೀಲ್ ಕುಮಾರ್ ಅವರು ಕೂಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರಾಜ್ ನ್ಯೂಸ್ ಬಳಿಕ ಈಗ ನ್ಯೂಸ್ 18 ಕನ್ನಡದಲ್ಲಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪಾಂಡವಪುರ: ಪತ್ರಿಕೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಹಿರಿಯ ಪತ್ರಕರ್ತರಾದ ಚನ್ನಮಾದೇಗೌಡ, ಸುದೇಶ್ ಪಾಲ್ ಹಾಗೂ ಖಾಸಗಿ ಟಿವಿ ವರದಿಗಾರ ಎಚ್.ವಿ.ಸುನೀಲ್ ಕುಮಾರ್ ಅವರನ್ನು ಜಿಲ್ಲಾಡಳಿತವು 2025- 26ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗ್ರಾಮದ ನಿವಾಸಿ ಚನ್ನೇಗೌಡ ಮತ್ತು ಸುಶೀಲಮ್ಮ ದಂಪತಿ ಸುಪುತ್ರ ಚನ್ನಮಾದೇಗೌಡರು ಕಳೆದ 18 ವರ್ಷದಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಡ್ಯದಲ್ಲಿ ಈ ಟಿವಿ ಛಾಯಾಗ್ರಾಹಕನಾಗಿ ವೃತ್ತಿ ಆರಂಭಿಸಿದ ಬಳಿಕ ಕನ್ನಡಪ್ರಭ, ವಿಜಯ ಕರ್ನಾಟಕ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ತಾಲೂಕು ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಮಾಧ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಳವಳ್ಳಿ ತಾಲೂಕು ದೊರನಹಳ್ಳಿ ಮೂಲದ ಬಸವೇಗೌಡ ಮತ್ತು ಗೌರಮ್ಮರ ಪುತ್ರ ಎಚ್.ಬಿ.ಸುನೀಲ್ ಕುಮಾರ್ ಅವರು ಕೂಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರಾಜ್ ನ್ಯೂಸ್ ಬಳಿಕ ಈಗ ನ್ಯೂಸ್ 18 ಕನ್ನಡದಲ್ಲಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಗರದ ಕ್ರಿಶ್ಚಿಯನ್ ಕಾಲೋನಿಯ ಸುದೇಶ್ ಪಾಲ್ ಅವರು ಕಳೆದ ಹಲವು ವರ್ಷಗಳಿಂದ ಕೆಮ್ಮುಗಿಲು ಸೇರಿದಂತೆ ವಿವಿಧ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಜನಯೋಗಿ ಜಿಲ್ಲಾ ವರದಿಗಾರರಾಗಿದ್ದಾರೆ.ಇವರ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ನ.1ರಂದು ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಕನ್ನಡ ರಾಜ್ಯೋತ್ಸವದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಿದೆ.
;Resize=(128,128))
;Resize=(128,128))
;Resize=(128,128))