ಕೊಡಗು ಜಿಲ್ಲಾ ವಿಶೇಷ ಚೇತನರ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ

| Published : Nov 09 2025, 03:15 AM IST

ಕೊಡಗು ಜಿಲ್ಲಾ ವಿಶೇಷ ಚೇತನರ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿಯಲ್ಲಿ 70 ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು.

ಮಡಿಕೇರಿ: ಕೊಡಗು ಜಿಲ್ಲಾ ವಿಶೇಷ ಚೇತನರ ಸಂಘ ಹಾಗೂ ವಿಕಲಚೇತನರ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಮಡಿಕೇರಿಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.ನಗರದ ಕನ್ನಡ ರಾಜ್ಯೋತ್ಸವವನ್ನು ಸಂಘದ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜೆ.ಎ.ಮಹೇಶ್ವರ್ ಹಾಗೂ ಪದಾಧಿಕಾರಿಗಳು ಕನ್ನಡಾಂಬೆ ಭುವನೇಶ್ವರಿಗೆ ಪುಷ್ಪಾರ್ಚನೆಯ ಮೂಲಕ ಗೌರವ ಸಲ್ಲಿಸಿದರು.ಈ ಸಂದರ್ಭ ಸಂಘದ ಕಾರ್ಯದರ್ಶಿ ಬಿ.ಎಂ.ತಿರುಮಲೇಶ್ವರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಹಸ್ಸನ್, ಉಪಾಧ್ಯಕ್ಷೆ ಎಂ.ಎನ್.ವೀಣಾ, ನಿರ್ದೇಶಕರಾದ ಪಿ.ಡಿ.ಹೇಮಾವತಿ, ಟಿ.ಮಿಲನ, ಕವನ, ಜಿತೇಶ್, ಜುಬೇರ್ ರಾಮಚಂದ್ರ ಹಾಗೂ ಇತರ ಸಂಘದ ನಿರ್ದೇಶಕರು ಭಾಗವಹಿಸಿದ್ದರು.