ಸಾರಾಂಶ
ಕೊಟ್ಟೂರು: ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯ ಜನರ ಮನಸ್ಸಿನ ಪ್ರಿಯವಾದ ಸಾಹಿತ್ಯವಾಗಿದೆ. ಸಮಾಜದ ಎಲ್ಲ ಬಗೆಯ ವೈರುಧ್ಯಗಳಿಗೆ ಸೂಕ್ತ ಬಗೆಯ ಅರವಿನ ಜ್ಞಾನ ಮತ್ತು ದಾರಿಯನ್ನು ತೋರಿಸಿದ್ದು, ಕನಕದಾಸರ ಸಾಹಿತ್ಯವಾಗಿದೆ ಎಂದು ವಿಚಾರವಾದಿ ಹುಲುಗಪ್ಪ ಬಿ ಗುಡಿಕೋಡೆ ಹೇಳಿದರು.ಶನಿವಾರ ತಾಲೂಕು ಆಡಳಿತ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಏರ್ಪಡಿಸಿದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಕನಕದಾಸರು ಕವಿ ಸಾಹಿತಿ ಶ್ರೇಷ್ಠರಾಗಿ ತಮ್ಮ ಕೀರ್ತನೆಗಳ ಮೂಲಕ ಸಾಹಿತ್ಯವು ಬಹು ಬೇಗ ಜನ ಸಾಮಾನ್ಯರಲ್ಲಿ ಮನೆ ಮಾಡುವಂತೆ ಮಾಡಿದವರು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಅಮರೇಶ್ ಜಿ.ಕೆ. ಮಾತನಾಡಿ, ಇಂತಹ ಮಹಾತ್ಮರ ಜಯಂತಿಯನ್ನು ಕೇವಲ ಆಚರಣೆಗೆ ಸಿಮೀತವಾಗದೇ ಅವರ ಸಾಹಿತ್ಯ ಆದರ್ಶ ಮತ್ತಿತರ ನೀತಿ ನಿಲುವುಗಳ ಅನುಸಾರ ಪಾಲಿಸಬೇಕು ಎಂದರು.
ಮುಖಂಡರಾದ ಜಗದೀಶ, ಕೊಟ್ರೇಶ್, ಹರಾಳು ಸಂಗಣ್ಣ, ಯೋಗಿಶ್ವರ ದಿನ್ನೆ, ಬದ್ದಿ ಮರಿಸ್ವಾಮಿ ಮಾತನಾಡಿದರು.ಗ್ರೇಡ್ 2 ತಹಶೀಲ್ದಾರ್ ಪ್ರತಿಭಾ ಎಂ., ಪಪಂ ಉಪಧ್ಯಾಕ್ಷ ಜಿ.ಸಿದ್ದಯ್ಯ ಸದಸ್ಯರಾದ ಕೆ.ಲಕ್ಷ್ಮೀದೇವಿ, ಸಿ.ಕೆಂಗರಾಜ್, ಮುಖ್ಯಾಧಿಕಾರಿ ಸಿ.ನಸರುಲ್ಲಾ, ಎಪಿಎಂಸಿ ಸದಸ್ಯ ದೇವಪ್ಪ, ಲೋಕಪ್ಪ ಕೆ., ಕುರುಬ ಸಂಘದ ಮೇಘರಾಜ್, ಪೂಜಾರಿ ನಾಗಪ್ಪ, ಕಂದಾಯ ಪರಿವೀಕ್ಷಕ ಹಳ್ಳಿ ಹರೀಶ್, ಉಪ ತಹಶೀಲ್ದಾರ್ ಅನ್ನದಾನೇಶ್ ಬಿ.ಪತ್ತಾರ್ ಮತ್ತಿತರರು ಇದ್ದರು. ಸಿ.ಮ. ಗುರುಬಸವರಾಜ ಸ್ವಾಗತಿಸಿ, ನಿರೂಪಿಸಿದರು.
ಇದಕ್ಕೂ ಮೊದಲು ಕನಕದಾಸರ ಜಯಂತಿ ನಿಮಿತ್ಯ ಕುರುಬ ಸಮಾಜದ ಸಾಧಕರು ಮತ್ತು ಪ್ರತಿಭಾವಂತ ವಿಧ್ಯಾರ್ಥಿಗಳನ್ನು ತಾಲೂಕು ಆಡಳಿತದಿಂದ ಸನ್ಮಾನಿಸಿ ಗೌರವಿಸಲಾಯಿತು.;Resize=(128,128))
;Resize=(128,128))
;Resize=(128,128))
;Resize=(128,128))