ಸಾರಾಂಶ
ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸಿಮಿತವಾಗದೇ ನಿತ್ಯೋತ್ಸವ ಆಗಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಲ್.ಜಿ. ಮಧುಕುಮಾರ್ ಹೇಳಿದ್ದಾರೆ.
ಚನ್ನಗಿರಿ: ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸಿಮಿತವಾಗದೇ ನಿತ್ಯೋತ್ಸವ ಆಗಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಲ್.ಜಿ. ಮಧುಕುಮಾರ್ ಹೇಳಿದರು.
ತಾಲೂಕಿನ ಸಂತೆಬೆನ್ನೂರು ಗ್ರಾಮದ ಚೈತನ್ಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಚೈತನ್ಯ ಕನ್ನಡೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕನ್ನಡ ನಾಡು, ನುಡಿ ಬಗ್ಗೆ ನಿರಾಭಿಮಾನವನ್ನು ತೋರಿ ಪರಭಾಷೆಗಳ ವ್ಯಾಮೋಹಕ್ಕೆ ಒಳಗಾಗುತ್ತಿರುವ ಪರಿಣಾಮ ಕನ್ನಡದ ಮೂಲಬೇರುಗಳು ಸಡಿಲಿಕೆ ಹೊಂದಿವೆ. ಇದರಿಂದ ನಮ್ಮ ಗ್ರಾಮ ಸಂಸ್ಕೃತಿಗೆ ಧಕ್ಕೆಯುಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಸಮಾರಂಭದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ನೆರವೇರಿಸಿ, ಕನ್ನಡ ಕೇವಲ ಭಾಷೆ ಮಾತ್ರವಲ್ಲ. ಅದು ನಮ್ಮ ಬದುಕು. ಹಾಗಾಗಿ ಕನ್ನಡವನ್ನು ನಾವು ಬದುಕಾಗಿ ಬದಲಾವಣೆ ಮಾಡಿಕೊಂಡಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬಹುದು. 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ನಮ್ಮ ಬದುಕು, ಭಾಷೆ ಮತ್ತು ನಾಡಿನ ಪರಂಪರೆಯ ಶ್ರೀ ಮಂತಿಕೆ ಯಾರೂ ಮರೆಯಬಾರದು ಎಂದರು.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು, ಪೋಷಕರು ಮೊಬೈಲ್ ಎಂಬ ಜಾಲದಲ್ಲಿ ಸಿಲುಕಿದ್ದು ಇದರ ದಾಸರಾಗದೆ ಪುಸ್ತಕಗಳು ಪತ್ರಿಕೆಗಳನ್ನು ಓದುವುದರ ಜೊತೆಗೆ ತಮ್ಮ ಮಕ್ಕಳಿಗೆ ನಾಡು, ನುಡಿ ಬಗ್ಗೆ ಅಭಿಮಾನವನ್ನು ತೋರುವಂತೆ ಮಾಡಬೇಕು ಎಂದರು.ಮುಖ್ಯ ಅತಿಥಿಗಳಾಗಿ ಚೈತನ್ಯ ಗುರುಕುಲ ವಿದ್ಯಾಸಂಸ್ಥೆ ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಎನ್.ಶಿವಸ್ವಾಮಿ, ಕ.ಸಾ.ಪ. ಸಹ ಕಾರ್ಯದರ್ಶಿ ವೀರೇಶ್ ಪ್ರಸಾದ್, ಸಿ.ಆರ್.ಪಿ. ಶಂಕರಗೌಡ, ಮುಖ್ಯ ಶಿಕ್ಷಕಿ ಅಂಬಿಕಾ, ಶಾಲೆ ಸಿಬ್ಬಂದಿ ಹಾಜರಿದ್ದರು.
- - --6ಕೆಸಿಎನ್‌ಜಿ1:
ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದ ಚೈತನ್ಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಚೈತನ್ಯ ಕನ್ನಡೋತ್ಸವ ಕಾರ್ಯಕ್ರಮ ಉದ್ಘಾಟನೆಯನ್ನು ಬಿಇಒ ಎಲ್.ಜಯಪ್ಪ ನೆರವೇರಿಸಿದರು.