ಕಾರಟಗಿ ಪುರಸಭೆ: ಅಧ್ಯಕ್ಷೆ-ಉಪಾಧ್ಯಕ್ಷ ಅಧಿಕಾರ ಸ್ವೀಕಾರ

| Published : Sep 01 2024, 01:49 AM IST

ಸಾರಾಂಶ

ಕಾರಟಗಿ ಪುರಸಭೆಯಲ್ಲಿ ನೂತನ ಅಧ್ಯಕ್ಷೆಯಾಗಿ ರೇಖಾ ರಾಜಶೇಖರ ಆನೆಹೊಸೂರು ಮತ್ತು ಉಪಾಧ್ಯಕ್ಷರಾಗಿ ದೇವಮ್ಮ ಛಲವಾದಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಕಾರಟಗಿ: ಇಲ್ಲಿನ ಪುರಸಭೆಯಲ್ಲಿ ನೂತನ ಅಧ್ಯಕ್ಷೆಯಾಗಿ ರೇಖಾ ರಾಜಶೇಖರ ಆನೆಹೊಸೂರು ಮತ್ತು ಉಪಾಧ್ಯಕ್ಷರಾಗಿ ದೇವಮ್ಮ ಛಲವಾದಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಕಳೆದ ಮಂಗಳವಾರ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿದ್ದು, ಅಲ್ಲಿ ರೇಖಾ ಆನೆಹೊಸೂರು ಅಧ್ಯಕ್ಷರಾಗಿ ಮತ್ತು ದೇವಮ್ಮ ಛಲವಾದಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಪುರಸಭೆ ಮುಖ್ಯಾಧಿಕಾರಿ ಸುರೇಶ ಪುಷ್ಪಗುಚ್ಚ ನೀಡಿ ಪುರಸಭೆಗೆ ಸ್ವಾಗತಿಸಿದರು. ಇದಕ್ಕೂ ಮುನ್ನ ಆಯ್ಕೆಯಾದ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಅಧ್ಯಕ್ಷೆ-ಉಪಾಧ್ಯಕ್ಷೆ ಅಧಿಕಾರ ಸ್ವೀಕಾರದ ಪ್ರಕ್ರಿಯೆಗಳು ನಡೆದವು. ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು.ನೂತನ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು ಅಧಿಕಾರ ಸ್ವೀಕರಿಸಿ ಮಾತನಾಡಿ, ಪಟ್ಟಣದ ಸಮಗ್ರ ಅಭಿವೃದ್ಧಿ ಹಾಗೂ ಮೂಲಸೌಲಭ್ಯ ಕಲ್ಪಿಸಲು ಹಗಲಿರುಳು ಶ್ರಮಿಸುವುದಾಗಿ ಭರವಸೆ ನೀಡಿದರು. ಅಭಿವೃದ್ಧಿ ಕಾರ್ಯಕ್ಕೆ ಸರ್ವ ಸದಸ್ಯರ ಬೆಂಬಲ ಪಡೆಯಲಾಗುವುದು. ಮುಖ್ಯವಾಗಿ ಸಚಿವ ಶಿವರಾಜ್ ತಂಗಡಗಿ ಅವರ ಮಾರ್ಗದರ್ಶನದಲ್ಲಿ ಜನರ ನಿರೀಕ್ಷೆಯಂತೆ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಿಗೆ ಸದಸ್ಯರು, ಕಾಂಗ್ರೆಸ್ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶುಭ ಕೋರಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾ.ಪಾ. ಕೆ. ಸಿದ್ದನಗೌಡ, ಅಯ್ಯಪ್ಪ ಉಪ್ಪಾರ್, ಗಿಣಿವಾರ್ ಲಿಂಗಪ್ಪ ಪುರಸಭೆ ಸದಸ್ಯರಾದ ಎಚ್. ಈಶಪ್ಪ, ಸಂಗನಗೌಡ, ಬೂದಿ ದೊಡ್ಡಬಸವರಾಜ, ರಾಜಶೇಖರ ಸಿರಿಗೇರಿ, ಸೋಮಶೇಖರ ಬೇರಗಿ, ಶ್ರೀನಿವಾಸ ರೆಡ್ಡಿ, ಮಂಜುನಾಥ ಮೇಗೂರು, ಹಿರೇಬಸಪ್ಪ ಸಜ್ಜನ್, ಆನಂದ ಮೇಲಿನಮನಿ, ಬಸವರಾಜ ಕೊಪ್ಪದ್, ಫಕ್ಕಿರಪ್ಪ ನಾಯಕ, ರಾಮಣ್ಣ, ಹುಸೇನ್ ಬಿ ನನ್ನುಸಾಬ್, ಜಿ. ಅರುಣಾದೇವಿ, ಮೌನಿಕಾ ಧನಂಜಯ, ಲಕ್ಷ್ಮೀ ಎತ್ತಿನಮನಿ, ಸುಜಾತಾ ನಾಗರಾಜ, ಪದ್ಮಾವತಿ ನಾಗರಾಜ, ನಾಮನಿರ್ದೇಶಕ ಸದಸ್ಯರಾದ ಸೋಮಶೇಖರಪ್ಪ ನಾಯಕ, ವೀರೇಶ ಗದ್ದಿ, ಹನುಮಂತ ರೆಡ್ಡಿ ಸೇರಿದಂತೆ ಪುರಸಭೆ ಸಿಬ್ಬಂದಿ ಇದ್ದರು.