ಪಾವಗಡ: ತಾಲೂಕಿನ ಪ್ರತಿ ಮನೆಮನೆಯಲ್ಲಿ ಕನ್ನಡ ಭಾಷೆ ಮಾತನಾಡಬೇಕು. ಇನ್ನೂ ಮುಂದೆ ತಾಲೂಕಿನದ್ಯಂತ ಕನ್ನಡಮಯ ವಾತಾವರಣ ನಿರ್ಮಾಣವಾಗಬೇಕೆಂದು ಶಾಸಕ ಹಾಗೂ ತುಮುಲ್ ಅಧ್ಯಕ್ಷ ಎಚ್.ವಿ. ವೆಂಕಟೇಶ್ ಕರೆ ನೀಡಿದರು

ಪಾವಗಡ: ತಾಲೂಕಿನ ಪ್ರತಿ ಮನೆಮನೆಯಲ್ಲಿ ಕನ್ನಡ ಭಾಷೆ ಮಾತನಾಡಬೇಕು. ಇನ್ನೂ ಮುಂದೆ ತಾಲೂಕಿನದ್ಯಂತ ಕನ್ನಡಮಯ ವಾತಾವರಣ ನಿರ್ಮಾಣವಾಗಬೇಕೆಂದು ಶಾಸಕ ಹಾಗೂ ತುಮುಲ್ ಅಧ್ಯಕ್ಷ ಎಚ್.ವಿ. ವೆಂಕಟೇಶ್ ಕರೆ ನೀಡಿದರು.

ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ ಘಟಕದಿಂದ ಗುರುವಾರ ತಾಲೂಕಿನ ವೈ.ಎನ್. ಹೊಸಕೋಟೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ 3ನೇ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿ ಮಾತನಾಡಿ, ಕನ್ನಡಕ್ಕೆ ನಮ್ಮ ಮೊದಲ ಅದ್ಯತೆ ನೀಡಬೇಕು. ಆಂಧ್ರದ ಗಡಿಯಲಿರುವ ಕಾರಣ ಇಲ್ಲಿ ತೆಲುಗಿನ ಪ್ರಭಾವ ಹೆಚ್ಚಿದೆ. ಅದನ್ನು ಹೋಗಲಾಡಿಸುವ ಮೂಲಕ ತಾಲೂಕಿನಲ್ಕಿ ಕನ್ನಡದ ವಾತವರಣ ಸೃಷ್ಡಿಯಾಗಬೇಕೆಂದರು. ಕಾರ್ಯಕ್ರಮಗಳ ಮೂಲಕ ಭಾಷೆ ಉಳಿವು ಮತ್ತು ಕನ್ನಡ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅನೇಕ ವರ್ಷಗಳಿಂದ ತಾಲೂಕು ಕಸಾಪ ಅವಿರತ ಹೋರಾಟ ಮಾಡುತ್ತಿರುವುದು ಶ್ಲಾಘನೀಯ. ಕಸಾಪ ಕಾರ್ಯಕ್ರಮಗಳಿಗೆ ಸಹಕಾರ ಹಾಗೂ ಬೆಂಬಲವಾಗಿರುವ ಭರವಸೆ ವ್ಯಕ್ತಪಡಿಸಿದರು.

ಇದೇ ವೇಳೆ ಸಮ್ಮೇಳನಾಧ್ಯಕ್ಷ ಮಧು ಶ್ರೀನಿವಾಸನ್ ಕನ್ನಡದ ಇತಿಹಾಸ ಹಾಗೂ ಭಾಷೆಯ ಮಹತ್ವ ಕುರಿತು ಮಾತನಾಡಿದರು.

ತಾಲೂಕು ಕ್ಷೇತ್ರ ಶಿಕ್ಷಣಧಿಕಾರಿ ರೇಣುಕಮ್ಮ, ಗ್ರಾಪಂ ಅಧ್ಯಕ್ಷರ ಬಿ.ಎಲ್. ಸೋಮಣ್ಣ ಮಾತನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಟ್ಟಾ ನರಸಿಂಹ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹೋ.ಮ.ನಾಗರಾಜ್, ಎನ್. ಆರ್. ಅಶ್ವಥ್,ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ್,

ಖಜಾಂಚಿ ಶೇಖರ್ ಬಾಬು, ಪ್ರಮೋದ್ ಕುಮಾರ್, ಪ್ರಭಾಕರ್ ಶೆಟ್ಟಿ, ಗ್ರಾ.ಪಂ. ಸದಸ್ಯ ನಂದೀಶ್, ಡಿ.ಕೆ. ಕೇಶವಮೂರ್ತಿ, ಎಲ್.ಕೆ. ರಘು, ಈರರೆಡ್ಡಿ, ವಿಶ್ವನಾಥ್, ನಾರಾಯಣಪ್ಪ, ಮಾರುತೇಶ್, ಎನ್. ನಾಗೇಂದ್ರ, ಮೊಹಮ್ಮದ್ ಉಸ್ಮಾನ್ ಸೇರಿ ಇನ್ನೂ ಮುಂತಾದವರಿದ್ದರು.

-----------------------

ಪೊಟೋ 25 ಪಿವಿಡಿ2ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಲ್ಲಿ ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ‌ಸಮ್ಮೆಳನಾಧ್ಯಕ್ಷ ಮಧುಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.