ಕೊರಟಗೆರೆ: ಭವ್ಯ ಭಾರತದ ಭವಿಷ್ಯಕ್ಕಾಗಿ ದಿ. ಅಟಲ್ ನಿಹಾರಿ ವಾಜಪೇಯಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ನೂರಾರು ವರ್ಷಗಳ ಕಾಲ ಶಾಶ್ವತವಾಗಿ ಉಳಿಯುವಂತಹ ಕೆಲಸಗಳನ್ನ ಮಾಡಿದ್ದಾರೆ ಎಂದು ಕೇಂದ್ರ ಜನಶಕ್ತಿ ಮತ್ತು ರೈಲ್ವೆ ಸಚಿವ, ತುಮಕೂರು ಲೋಕಾಸಭಾ ಸದಸ್ಯ ವಿ. ಸೋಮಣ್ಣ ತಿಳಿಸಿದರು
ಕೊರಟಗೆರೆ: ಭವ್ಯ ಭಾರತದ ಭವಿಷ್ಯಕ್ಕಾಗಿ ದಿ. ಅಟಲ್ ನಿಹಾರಿ ವಾಜಪೇಯಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ನೂರಾರು ವರ್ಷಗಳ ಕಾಲ ಶಾಶ್ವತವಾಗಿ ಉಳಿಯುವಂತಹ ಕೆಲಸಗಳನ್ನ ಮಾಡಿದ್ದಾರೆ ಎಂದು ಕೇಂದ್ರ ಜನಶಕ್ತಿ ಮತ್ತು ರೈಲ್ವೆ ಸಚಿವ, ತುಮಕೂರು ಲೋಕಾಸಭಾ ಸದಸ್ಯ ವಿ. ಸೋಮಣ್ಣ ತಿಳಿಸಿದರು.
ಕೊರಟಗೆರೆ ಪಟ್ಟಣದ ಪಂಚಾಜನ್ಯ ಕಚೇರಿಯಲ್ಲಿ ಎನ್‌ಡಿಎ ವತಿಯಿಂದ ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಅಂಗವಾಗಿ ವಾಜಪೇಯಿ ಅವರ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದರು.ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಚತುಷ್ಪಥ ರಸ್ತೆ, ಗ್ರಾಮ ಸಡಕ್ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ದೂರದೃಷ್ಟಿ ಹೊಂದಿದ್ದ ಏಕೈಕ ಪ್ರಧಾನಿ ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ವಾಜಪೇಯಿ ಆಶಯಗಳನ್ನು ಹೊಂದಿರುವ ನಾಯಕ ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಂದರೆ ತಪ್ಪಾಗುವುದಿಲ್ಲ ಎಂದು ತಿಳಿಸಿದರು.
೨೦೨೭ರ ಒಳಗೆ ತುಮಕೂರು ರಾಯದುರ್ಗ ರೈಲ್ವೆ ಕಾಮಗಾರಿ ಮುಗಿಸಿ ಈ ಭಾಗದ ಸಾಮಾನ್ಯ ಜನರು ರೈಲಿನಲ್ಲಿ ಓಡಾಡುವಂತೆ ಮಾಡುತ್ತೇನೆ. ಈಗಾಗಲೇ ಆಂಧ್ರದಿಂದ ಪಾವಗಡದವರೆಗೂ ಮಾರ್ಚ್ ಒಳಗೆ ರೈಲು ಸಂಚಾರ ಆರಂಭವಾಗಲಿದೆ. ಜೂನ್ ಒಳಗೆ ಮಡಕಸಿರಾ ಸಂಚಾರ ಆರಂಭವಾಗಲಿದೆ. ಎಲ್ಲಾ ಕಾಮಗಾರಿಗಳು ಶರವೇಗದಲ್ಲಿ ನಡೆಯುತ್ತಿದ್ದು, ಇತ್ತ ತುಮಕೂರಿನ ಊರುಕೆರೆ ಹತ್ತಿರ ಕಾಮಗಾರಿ ಮುಗಿಸಲಾಗಿದೆ ಹಾಗೂ ಅದರ ಪ್ರಾಯೋಗಿಕ ಸಂಚಾರದಲ್ಲಿ ನಾನು ಓಡಾಡಿದ್ದೇನೆ. ಕೊರಟಗೆರೆ ಮಧುಗಿರಿ ತಾಲೂಕಿನ ಭೂ ಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿ ಪ್ರಾರಂಭ ಮಾಡಲಿದ್ದಾರೆ ಎಂದು ತಿಳಿಸಿದರು.ಇದೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾ. ಅಧ್ಯಕ್ಷ ಕಾಮರಾಜು, ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್, ಪ್ರಧಾನ ಕಾರ್ಯದರ್ಶಿ ಮಹೇಂದ್ರ ಬಾಬು ಮುಖಂಡರಾದ ಸ್ವಾಮಿ, ಲಕ್ಷ್ಮೀನಾರಾಯಣ್, ಚೇತನ್, ದಯಾನಂದ್, ರಂಗರಾಜು, ರಂಜಿತ್, ಸಾಕಣ್ಣ, ಹನುಮಂತರಾಜು, ಹರೀಶ್, ದಾಡಿವೆಂಕಟೇಶ್, ರವಿನಂದನ್, ಪ್ರವೀಣ್, ರಾಜೇಂದ್ರ, ಸಿದ್ದನಂಜಪ್ಪ, ಚಂದ್ರಣ್ಣ ಸೇರಿದಂತೆ ಜೆಡಿಎಸ್ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಜರಿದ್ದರು.
(ಚಿತ್ರ ಇದೆ)೨೫ ಕೊರಟಗೆರೆ ಚಿತ್ರ೦೨
ಕೊರಟಗೆರೆ ಪಟ್ಟಣದಲ್ಲಿ ವಾಜಪೇಯಿ ಅವರ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಕೇಂದ್ರ ಸಚಿವ ವಿ.ಸೋಮಣ್ಣ ಸೇರಿದಂತೆ ಇತರ ಗಣ್ಯರು.೨೫ ಕೊರಟಗೆರೆ ಚಿತ್ರ೦೩
ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಅಂಗವಾಗಿ ಗಿಡ ನೆಟ್ಟ ಕೇಂದ್ರ ಸಚಿವ ವಿ.ಸೋಮಣ್ಣ.