ಕಾಪು: ಕಾಪು ತಾಲೂಕು ವ್ಯಾಪ್ತಿಯ ನಿವೇಶನ ಹಂಚಿಕೆ ಕುರಿತು ಶುಕ್ರವಾರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾಪು ತಹಸೀಲ್ದಾರ್‌ ಕಚೇರಿಯಲ್ಲಿ ಸಭೆ ನಡೆಸಿ ಚರ್ಚಿಸಲಾಯಿತು.ಸಭೆಯಲ್ಲಿ ಕಾಪು ತಾಲೂಕು ವ್ಯಾಪ್ತಿಯ 16 ಗ್ರಾಪಂ ಹಾಗೂ ಕಾಪು ಪುರಸಭೆ ವ್ಯಾಪ್ತಿಯ ಸರಕಾರಿ ನಿವೇಶನಗಳನ್ನು ನಿವೇಶನ ರಹಿತ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಬಗ್ಗೆ ಮತ್ತು ಈಗಾಗಲೇ ಹಸ್ತಾಂತರಗೊಂಡ ನಿವೇಶನಗಳಲ್ಲಿ ಭೌತಿಕ ಹಾಗೂ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ಫಲಾನುಭವಿಗಳಿಗೆ ನಿವೇಶನಗಳನ್ನು ವಿತರಿಸುವ ಬಗ್ಗೆ ಚರ್ಚೆ ನಡೆಸಲಾಯಿತು.ಈ ಸಂದರ್ಭ ಕಾಪು ತಹಸೀಲ್ದಾರ್‌ ಅನಂತ ಶಂಕರ್, ಕಾಪು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಾದ ವಿಜಯ ಕುಮಾರ್, ಕಾಪು ಪುರಸಭೆ ಮುಖ್ಯಾಧಿಕಾರಿಗಳಾದ ನೀಲಕಂಠ ಮೇಸ್ತಾ ಹಾಗೂ ಗ್ರಾಮ ಆಡಳಿತಾಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.