ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ ಸಮಾರಂಭ ಡಿ. 13ರಂದು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಪ್ರಭಾಕರ್ ಕೋರೆ ಕ್ರೀಡಾಂಗಣದ ಆವರಣದಲ್ಲಿ ನಡೆಯಲಿದೆ. ಪದವಿ, ಸ್ನಾತಕೋತ್ತರ ಮತ್ತು ಪಿಎಚ್.ಡಿ ಸೇರಿದಂತೆ ಒಟ್ಟು 2,466 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ.
ಹುಬ್ಬಳ್ಳಿ:
ಇಲ್ಲಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ ಸಮಾರಂಭ ಡಿ. 13ರಂದು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಪ್ರಭಾಕರ್ ಕೋರೆ ಕ್ರೀಡಾಂಗಣದ ಆವರಣದಲ್ಲಿ ನಡೆಯಲಿದೆ. ಪದವಿ, ಸ್ನಾತಕೋತ್ತರ ಮತ್ತು ಪಿಎಚ್.ಡಿ ಸೇರಿದಂತೆ ಒಟ್ಟು 2,466 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ.ಬಿವಿಬಿ ಕ್ಯಾಂಪಸ್ ಹುಬ್ಬಳ್ಳಿ, ಡಾ. ಎಂ.ಎಸ್. ಶೇಷಗಿರಿ ಕ್ಯಾಂಪಸ್ ಬೆಳಗಾವಿ ಮತ್ತು ಬೆಂಗಳೂರಿನ ಕೆಎಲ್‌ಇ ಕಾನೂನು ಕಾಲೇಜ್ ಕ್ಯಾಂಪಸ್ನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಇದರಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ (ಬಿಇ), ಬ್ಯಾಚುಲರ್ ಆಫ್ ಆಕಿರ್ಟೆಕ್ಚರ್ (ಬಿ.ಆರ್ಕ್), ಬ್ಯಾಚುಲರ್ ಆಫ್ ಲಾ, ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಬಿಸಿಎ), ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ), ಬ್ಯಾಚುಲರ್ ಆಫ್ ಫ್ಯಾಷನ್ ಮತ್ತು ಅಪೇರಲ್ ಡಿಸೈನ್ (ಬಿ.ಎಸ್ಸಿ. ಎಫ್ಎಡಿ) ಹಾಗೂ ಎಂ.ಟೆಕ್, ಎಂಸಿಎ, ಎಂಬಿಎ, ಮಾಸ್ಟರ್ ಆಫ್ ಲಾ, ಎಂ.ಎಸ್ಸಿ. ರಿಸರ್ಚ್ ಮತ್ತು ಪಿಎಚ್.ಡಿ ಕಾರ್ಯಕ್ರಮಗಳ ಪದವೀಧರರು ಸೇರಿದ್ದಾರೆ.ಪದವಿ ವಿತರಣೆ:
2131 ವಿದ್ಯಾರ್ಥಿಗಳು (1331 ಬಾಲಕರು, 800 -ಬಾಲಕಿಯರು) ಪದವಿ ಪ್ರದಾನ, 311 ವಿದ್ಯಾರ್ಥಿಗಳಿಗೆ (154 ಬಾಲಕರು, 157 ಬಾಲಕಿಯರು) ಸ್ನಾತಕೋತ್ತರ ಪದವಿ, 24 ವಿದ್ಯಾರ್ಥಿಗಳು (16 ಬಾಲಕರು, 8 -ಬಾಲಕಿಯರು) ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ. ಪದವಿ ವಿಭಾಗದಲ್ಲಿ 15 ಮತ್ತು ಸ್ನಾತಕೋತ್ತರ ವಿಭಾಗದಲ್ಲಿ 6 ಚಿನ್ನದ ಪದಕ ನೀಡಲಾಗುತ್ತಿದೆ. ಪದವಿ ವಿಭಾಗದಲ್ಲಿ 15 ಮತ್ತು ಸ್ನಾತಕೋತ್ತರ ವಿಭಾಗದಲ್ಲಿ 7 ಬೆಳ್ಳಿ ಪದಕ ನೀಡಲಾಗುತ್ತಿದೆ. ಸಿವಿಲ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದವರಿಗೆ ಡಾ. ಎಸ್.ಎಸ್. ಭಾವಿಕಟ್ಟಿ ಚಿನ್ನದ ಪದಕ ಸಹ ನೀಡಲಾಗುತ್ತಿದೆ.ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಮ್ಯಾಗ್ನಾ ಇಂಟರ್‌ನ್ಯಾಷನಲ್ ಕಂಪನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೀತಾರಾಮ (ಸ್ವಾಮಿ) ಕೋಟಗಿರಿ ಆಗಮಿಸಲಿದ್ದು ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ ಡಾ. ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸುವರು. ಪ್ರೊ. ಚಾನ್ಸಲರ್ ಡಾ. ಅಶೋಕ ಶೆಟ್ಟರ್, ಕುಲಪತಿ ಡಾ. ಪ್ರಕಾಶ್ ತಿವಾರಿ, ರಿಜಿಸ್ಟ್ರಾರ್ ಡಾ. ಬಸವರಾಜ್ ಅನಾಮಿ, ಅಕಾಡೆಮಿಕ್ ಡೀನ್ ಡಾ. ಬಿ.ಬಿ. ಕೊಟ್ಟೂರಶೆಟ್ಟರ್, ಪರೀಕ್ಷಾ ನಿಯಂತ್ರಕ ಡಾ. ಅನಿಲಕುಮಾರ ನಂದಿ, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಅಧ್ಯಾಪಕರು ಉಪಸ್ಥಿತರಿರಲಿದ್ದಾರೆ ಎಂದು ರಿಜಿಸ್ಟ್ರಾರ್ ಡಾ. ಬಸವರಾಜ ಅನಾಮಿ ತಿಳಿಸಿದ್ದಾರೆ.