ಜ್ಞಾನವೇ ಜೀವನ ಯಶಸ್ಸಿನ ಮಾರ್ಗ: ಅರುಣಕುಮಾರ್

| Published : Jun 27 2024, 01:00 AM IST

ಜ್ಞಾನವೇ ಜೀವನ ಯಶಸ್ಸಿನ ಮಾರ್ಗ: ಅರುಣಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಜ್ಞಾನಕ್ಕಿಂತ ಮಿಗಿಲಾದದ್ದು ಮತ್ತು ಪವಿತ್ರವಾದದ್ದು ಯಾವುದೂ ಇಲ್ಲ. ಜ್ಞಾನ ಎಂದರೆ ತಿಳಿವಳಿಕೆ, ವಿಷಯಗಳ ಗ್ರಹಣ ಮತ್ತು ಪ್ರಾಜ್ಞತೆ. ಅಜ್ಞಾನ ಎಂದರೆ ಜ್ಞಾನದ ಕೊರತೆ. ಜೀವನದಲ್ಲಿ ಜ್ಞಾನವನ್ನು ಸಂಪಾದಿಸದೇ ಇರುವವನು ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್ ಹೇಳಿದರು.

- ಲಿಂ. ಇಂದುಮತಿ ಎಂ. ಪಾಟೀಲ ದತ್ತಿ ಕಾರ್ಯಕ್ರಮ- ಶರಣ ಚಿಂತನಗೋಷ್ಠಿ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಜ್ಞಾನಕ್ಕಿಂತ ಮಿಗಿಲಾದದ್ದು ಮತ್ತು ಪವಿತ್ರವಾದದ್ದು ಯಾವುದೂ ಇಲ್ಲ. ಜ್ಞಾನ ಎಂದರೆ ತಿಳಿವಳಿಕೆ, ವಿಷಯಗಳ ಗ್ರಹಣ ಮತ್ತು ಪ್ರಾಜ್ಞತೆ. ಅಜ್ಞಾನ ಎಂದರೆ ಜ್ಞಾನದ ಕೊರತೆ. ಜೀವನದಲ್ಲಿ ಜ್ಞಾನವನ್ನು ಸಂಪಾದಿಸದೇ ಇರುವವನು ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ದಾವಣಗೆರೆ ಜಿಲ್ಲಾ ಘಟಕ ಮತ್ತು ಬಿ.ಇ.ಎ. ಹೈಯರ್ ಪ್ರೈಮರಿ ಸ್ಕೂಲ್, ಸಿಬಿಎಸ್‌ಸಿ ಸ್ಕೂಲ್‌ ವತಿಯಿಂದ ಲಿಂ. ಇಂದುಮತಿ ಎಂ. ಪಾಟೀಲ ದತ್ತಿ ಕಾರ್ಯಕ್ರಮ ಮತ್ತು ಶರಣ ಚಿಂತನಗೋಷ್ಠಿ ಕಾರ್ಯಕ್ರಮದಲ್ಲಿ ''''''''''''''''ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ'''''''''''''''' ವಿಷಯದ ಕುರಿತು ಅವರು ಮಾತನಾಡಿದರು.

ಜ್ಞಾನವೇ ಜೀವನದ ಯಶಸ್ಸಿನ ಮಾರ್ಗವಾಗಿದೆ. ಜ್ಞಾನವಿಲ್ಲದ ಮಾನವ ಜೀವನ ಅಪೂರ್ಣ. ಜ್ಞಾನವು ನಮ್ಮಲ್ಲಿನ ಹಣ ಆಸ್ತಿಗಿಂತಲೂ ಮುಖ್ಯವಾದ ಸಂಪತ್ತಾಗಿದೆ. ಅದು ಎಂದಿಗೂ ಖಾಲಿಯಾಗದ ಭಂಡಾರ. ಜ್ಞಾನವನ್ನು ಆದಷ್ಟು ಹೆಚ್ಚಿಸಿಕೊಳ್ಳಬೇಕು. ಜ್ಞಾನದ ಕೊರತೆಯಿಂದಾಗಿ ವ್ಯಕ್ತಿಯು ಜೀವನದಲ್ಲಿ ಮೋಸ ಹೋಗುವ ಹಾಗೂ ನಷ್ಟ ಅನುಭವಿಸುವ ಸಾಧ್ಯತೆ ಇರುತ್ತದೆ ಎಂದರು.

ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪ್ರಾಚಾರ್ಯರಾದ ನೀತುಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶರಣರ ವಚನಗಳ ಮೌಲ್ಯವನ್ನು ಅನುಸರಿಸಿ ಉತ್ತಮ ಪ್ರಜೆಗಳಾಗಬೇಕೆಂದು ತಿಳಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಬಿಇಎ ಹೈಯರಿ ಪ್ರೈಮರಿ ಸ್ಕೂಲ್‌ನ ಪ್ರಾಚಾರ್ಯ ಎಚ್.ಎಸ್.ಸತೀಶ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಖಜಾಂಚಿ ಆರ್.ಸಿದ್ದೇಶಪ್ಪ, ದತ್ತಿ ದಾನಿ ಶಂಕರ್ ಸಿ.ಅಕ್ಕಿಹಾಳ, ಕದಳಿ ವೇದಿಕೆಯ ತಾಲೂಕು ಅಧ್ಯಕ್ಷೆ ಮಮತಾ ನಾಗರಾಜ, ಎನ್.ಟಿ.ಸಣ್ಣ ಮಂಜುನಾಥ, ಬುಳ್ಳಾಪುರದ ಮಲ್ಲಿಕಾರ್ಜುನ ಸ್ವಾಮಿ, ಸಹಶಿಕ್ಷಕಿ ಡಾ. ಆರ್.ಗೀತಾ, ಕಾರ್ಯದರ್ಶಿ ಬಿ.ಟಿ. ಪ್ರಕಾಶ, ಶಿಕ್ಷಕ ಬಸವರಾಜ ಇತರರು ಇದ್ದರು.

- - - ಕೋಟ್‌

ಬುದ್ಧಿವಂತ ವ್ಯಕ್ತಿಯು ತನ್ನ ಜ್ಞಾನ ಸರಿಯಾದ ಮಾರ್ಗದಲ್ಲಿ ಬಳಸಿಕೊಂಡರೆ ಅದು ಜೀವನಕ್ಕೆ ಸಹಕಾರಿ ಆಗುತ್ತದೆ. ವಿದ್ಯಾರ್ಥಿಗಳು ಸುಜ್ಞಾನ ಬೆಳೆಸಿಕೊಳ್ಳುವುದರ ಮೂಲಕ ಮೌಢ್ಯ ಮತ್ತು ಅಂಧಕಾರಗಳನ್ನು ತೊಡೆದು ಹಾಕಿ, ಸಮಾಜದ ಉತ್ತಮ ಆಸ್ತಿಗಳಾಗಬೇಕು

- ಎಲ್‌.ಎಚ್‌. ಅರುಣಕುಮಾರ್‌, ಅಧ್ಯಕ್ಷ - - - -24ಕೆಡಿವಿಜಿ33ಃ:

ದಾವಣಗೆರೆಯಲ್ಲಿ ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ, ಚಿಂತನಾಗೋಷ್ಠಿ ನಡೆಯಿತು.