ಧಾರ್ಮಿಕ ಚಿಂತನೆಗಳೊಂದಿಗೆ ಸನ್ಮಾರ್ಗದಲ್ಲಿ ನಡೆಯಬೇಕು: ಮಾಣಿಲ ಶ್ರೀ

| Published : Mar 13 2024, 02:07 AM IST

ಧಾರ್ಮಿಕ ಚಿಂತನೆಗಳೊಂದಿಗೆ ಸನ್ಮಾರ್ಗದಲ್ಲಿ ನಡೆಯಬೇಕು: ಮಾಣಿಲ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಧಾರ್ಮಿಕ ಚಿಂತನೆಗಳ ಮೂಲಕ ನಮ್ಮ ಮನಸನ್ನು ಶುದ್ಧವಾಗಿರಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು. ವಿಕೃತ ಮನಸ್ಸು ದೂರವಾಗಿ ಸಾತ್ವಿಕ ಮನಸ್ಸುಗಳು ಎಲ್ಲರದ್ದಾಗಿ ಮಾನವೀಯ ಮೌಲ್ಯಗಳು ಹೆಚ್ಚಾಗಬೇಕು ಎಂದು ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು. ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಟೀಲು ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ ಪ್ರಾಕೃತಿಕವಾದ ಆರಾಧನೆ ನಮ್ಮಲ್ಲಿ ನಡೆಯುತ್ತ ಬಂದಿದೆ. ಪ್ರಕೃತಿ ಆರಾಧನೆಯ ಜೊತೆಗೆ ಅದನ್ನು ಚೆನ್ನಾಗಿ ಉಳಿಸುವ ಕೆಲಸವೂ ಆಗಬೇಕು. ಜೀರ್ಣೋದ್ಧಾರಗೊಂಡ ದೈವಸ್ಥಾನದಲ್ಲಿ ಆರಾಧನಾ ಕಾರ್ಯಗಳು ನಿರಂತರವಾಗಿ ಆಗುವಂತೆ ನೋಡಿಕೊಳ್ಳಬೇಕು ಎಂದರು. ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ದಾನಿಗಳಾದ ನಳಿನಿ ಶೆಟ್ಟಿ ಕೊಡೆತ್ತೂರು ದೇವಸ್ಯ ಹಾಗೂ ರಾಜೇಂದ್ರ ಶೆಟ್ಟಿ ಮಾಗಂದಡಿ ಅವರನ್ನು ಗೌರವಿಸಲಾಯಿತು.

ಕಿಶೋರ್ ಶೆಟ್ಟಿ ಪುತ್ತೂರು, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬೈ ಕಾರ್ಪೋರೇಟರ್ ಅರವಿಂದ ಶೆಟ್ಟಿ, ಸಂತೋಷ್ ಜಿ. ಶೆಟ್ಟಿ, ಡಾ. ಶಶಿಕುಮಾರ್, ಯೋಗೀಶ್ ಮಾಡ ಕಿಲೆಂಜೂರು, ಕಾರ್ತಿಕೇಯ ಉಡುಪ, ಅತ್ತೂರು ಶ್ರೀ ಅಸರು ಕುಂಜರಾಯ ದೈವಸ್ಥಾನದ ಅಧ್ಯಕ್ಷ ಚರಣ್ ಜೆ. ಶೆಟ್ಟಿ ಕೊಜಪಾಡಿಬಾಳಿಕೆ ಪಕ್ಷಿಕರೆ, ಧನಂಜಯ ಶೆಟ್ಟಿಗಾರ್. ಕೆಂಚನಕೆರೆ ಶ್ರೀಕಾಂತ ಶೆಟ್ಟಿ. ಪೃಥ್ವಿರಾಜ್ ಆಚಾರ್ಯ ಕಿನ್ನಿಗೋಳಿ, ರಂಜಿತ್ ಪೂಜಾರಿ, ನಾಗರಾಜ ಶೆಟ್ಟಿ ಕೊಡೆತ್ತೂರು, ಜಯಂತ ಕರ್ಕೇರ ಅಡ್ಡಣಗುತ್ತು, ರಮೇಶ್ ಶೆಟ್ಟಿ, ಸಂಜೀವ ಅಂಚನ್ ಮುಕ್ಕಾಲ್ದಿ ಬೆನ್ನಿ, ತುಕಾರಾಮ ಶೆಟ್ಟಿ, ದಿವಾಕರ ಶೆಟ್ಟಿ ಮುಂಬೈ, ಭುವನಾಭಿರಾಮ ಉಡುಪ, ನಿತಿನ್ ಶೆಟ್ಟಿ ದೇವಸ್ಯ ಕೊಡೆತ್ತೂರುಗುತ್ತು, ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ದೈವಸ್ಥಾನದ ಅಧ್ಯಕ್ಷ ಮೋಹನ ಶೆಟ್ಟಿ, ಶೋಭಾ ಶೆಟ್ಟಿ ನಡ್ಯೋಡಿಗುತ್ತು, ಶೈಲೇಶ್ ಅಂಚನ್ ಮತ್ತಿತರರಿದ್ದರು. ಟ್ರಸ್ಟ್ ಅಧ್ಯಕ್ಷ ದೇವೀಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ನಿತೇಶ್ ಶೆಟ್ಟಿ ನಿರೂಪಿಸಿದರು.