ಸಾರಾಂಶ
ಪುನೀತ್ ರಾಜಕುಮಾರ್ ಕೊನೆಯ ಚಿತ್ರ ಗಂಧದಗುಡಿಯಲ್ಲಿ ಈ ವಿಸ್ಮಯ ಕಲ್ಲುಗಳನ್ನು ಪುನೀತ್ ಚಿತ್ರಿಸಿದ್ದಾರೆ.
ಕೂಡ್ಲಿಗಿ: ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ಎನ್ನೆಸ್ಸೆಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನಿಂದ 125 ವಿದ್ಯಾರ್ಥಿಗಳು ಒಂದು ದಿನದ ಐತಿಹಾಸಿಕ ಪ್ರವಾಸವನ್ನು ಸ್ಥಳೀಯ ಪಾಳೇಗಾರರ ಆಳ್ವಿಕೆ ನಡೆಸಿದ ಗುಡೆಕೋಟೆ ಸುತ್ತಮುತ್ತ ಹಮ್ಮಿಕೊಳ್ಳುವ ಮೂಲಕ ಇಲ್ಲಿಯ ಪ್ರಾಂಶುಪಾಲರು ಮಕ್ಕಳಿಗೆ ಸ್ಥಳೀಯ ಇತಿಹಾಸ ಪರಿಚಯಿಸುವ ಕಾರ್ಯ ಮಾಡಿದ್ದು ಪ್ರಶಂಸೆಗೆ ಕಾರಣವಾಗಿದೆ.ತಾಲೂಕಿನ ಗುಡೇಕೋಯೆಲ್ಲಿ ಪಾಳೇಗಾರರು ಆಡಳಿತ ಮಾಡಿದ ಕೋಟೆ ಆವರಣ ಹಾಗೂ ಅನೇಕ ಐತಿಹಾಸಿಕ ದೇವಾಲಯಗಳಿಗೆ ಭೇಟಿ ನೀಡಿ ನಂತರ ಗುಡೆಕೋಟೆಯ ಕರಡಿಧಾಮ ಸಂದರ್ಶಿಸಿದ ವಿದ್ಯಾರ್ಥಿಗಳು, ಕನ್ನಡಪ್ರಭ ದಿನಪತ್ರಿಕೆಯು ಹೊರ ಜಗತ್ತಿಗೆ ಪರಿಚಯಿಸಿದ ಜೋಡಿ ವಿಸ್ಮಯ ಕಲ್ಲುಗಳನ್ನು ನೋಡಿ ಪುನೀತರಾದರು.
ಪುನೀತ್ ರಾಜಕುಮಾರ್ ಕೊನೆಯ ಚಿತ್ರ ಗಂಧದಗುಡಿಯಲ್ಲಿ ಈ ವಿಸ್ಮಯ ಕಲ್ಲುಗಳನ್ನು ಪುನೀತ್ ಚಿತ್ರಿಸಿದ್ದಾರೆ. ಇಂತಹ ಸ್ಥಳ ನೋಡಿದ ವಿದ್ಯಾರ್ಥಿಗಳು ನಮ್ಮ ತಾಲೂಕಿನಲ್ಲಿ ಇಂತಹ ಇತಿಹಾಸ ವಿಸ್ಮಯ ಇದೆ ಎಂದು ಈಗಲೇ ಗೊತ್ತಾಗಿದ್ದು ಎಂದು ಪ್ರಶಂಸೆ ಆಶ್ಚರ್ಯ ಚಕಿತರಾದರು.ಕಾಡಿನಲ್ಲಿ ಹುಣಸೆ, ಬೇವಿನ ಬೀಜ, ಪೇರಲೆ ಹಣ್ಣಿನ ಬೀಜಗಳನ್ನು ನೆಡುವ ಮೂಲಕ ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರಿಸರ ಜಾಗೃತಿ ಮೂಡಿಸಿದರು. ಗುಡೇಕೋಟೆ ಪಕ್ಕದಲ್ಲಿಯೇ ಇರುವ ಶಿವ ಪಾರ್ವತಿ ದೇವಸ್ಥಾನವನ್ನು ಸ್ವಚ್ಛತೆಯನ್ನು ಮಾಡಿ ನಂತರ ಕೂಡ್ಲಿಗಿ ಪಟ್ಟಣಕ್ಕೆ ಹಿಂದಿರುಗಿದರು.
ಪ್ರವಾಸದಲ್ಲಿ ಮಕ್ಕಳೊಂದಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಸುಮಾ ಗಣೇಶನ್, ಇಮಾಮಸಾಹೇಬ್, ಸುಮಾ, ರಾಘವೇಂದ್ರ, ಆಕಾಶ್, ಕೊಟ್ರೇಶ್, ವಿವೇಕಾನಂದ ಸ್ವಾಮಿ, ಸಹಾಯಕರಾದ ಸುಲೋಚನಾ ಚಿನ್ನಪ್ಪ ಇದ್ದರು.