ಸಾರಾಂಶ
ಮಧುಗಿರಿ: ಇಲ್ಲಿನ ಶೃಂಗೇರಿ ಮಠದಲ್ಲಿ ಗುರುವಾರ 60ಕ್ಕೂ ಅಧಿಕ ಚಿಕ್ಕ ಮಕ್ಕಳು ಅಕ್ಷರಭ್ಯಾಸದಲ್ಲಿ ಭಾಗವಹಿಸಿದ್ದರು.
ಮಧುಗಿರಿ: ಇಲ್ಲಿನ ಶೃಂಗೇರಿ ಮಠದಲ್ಲಿ ಗುರುವಾರ 60ಕ್ಕೂ ಅಧಿಕ ಚಿಕ್ಕ ಮಕ್ಕಳು ಅಕ್ಷರಭ್ಯಾಸದಲ್ಲಿ ಭಾಗವಹಿಸಿದ್ದರು.
ಶ್ರೀಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ್ ಮಾತನಾಡಿ, ಇಲ್ಲಿನ ಶಂಕರ ಮಠದಲ್ಲಿ ಇದೇ ಪ್ರಥಮ ಬಾರಿಗೆ ಸಾಮೂಹಿಕ ಅಕ್ಷರಾಭ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶೃಂಗೇರಿ ಶಾರದಾಂಬ ದೇಗುಲದಲ್ಲಿ ನಡೆಸುವ ರೀತಿ ನಮ್ಮಲ್ಲಿಯೂ ಸಹ ಅಕ್ಷರಭ್ಯಾಸವನ್ನು ಶಾಸ್ತ್ರೋಕ್ತವಾಗಿ ನಡೆಸಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಶ್ರೀವಿಧುಶೇಖರಭಾರತಿ ಸ್ವಾಮಿಜಿ ಮಧುಗಿರಿಗೆ ಆಗಮಿಸಿ ಶ್ರೀಶಂಕರ ಸಮುದಾಯ ಭವನ ಉದ್ಘಾಟಿಸಿದ್ದರು. ಇದೇ ಸ್ಥಳದಲ್ಲಿ ಶ್ರೀಶಾರದಾ ಮಾತೆಯ ಸಂಸ್ಥಾನ ಪೂಜೆ ನೆರವೇರಿಸಿದ್ದರು. ಇಂತಹ ಪವಿತ್ರ ಸ್ಥಳದಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿರುವ ಮಕ್ಕಳು ಉತ್ತು ಶಿಕ್ಷಣ ಪಡೆದು ದೇಶಕ್ಕೆ ಮತ್ತು ಸಮಾಜಕ್ಕೆ ಉತ್ತಮ ಸತ್ಪ್ರಜೆಗಳಾಗಿ ರೂಪಗೊಳ್ಳಲಿ ಎಂದರು. ಕಾರ್ಯದರ್ಶಿ ಶಕುಂತಲಾ ಗುಂಡುರಾವ್, ಖಜಾಂಚಿ ಲಕ್ಷ್ಮೀಪ್ರಸಾದ್, ಪದಾಧಿಕಾರಿಗಳಾದ ಶ್ರೀನಿವಾಸ್ ಶಾಸ್ತ್ರಿ, ಎಂ.ಎಸ್.ಸಂತೋಷ್,ಜಿ.ಆರ್.ವರದರಾಜ ರಾವ್, ಎಂ.ಎನ್. ನಾಗಭೂಷಣ್,ಎಂ.ಎಸ್.ಬದರಿನಾತ್, ಟಿ.ಎಚ್.ಸಂಜೀವಮೂರ್ತಿ, ಕೆ.ಆರ್.ರಮ್ಯಾ, ಸರಸ್ವತಿ, ಸತ್ಯವತಿ, ಜಿ.ವೆಂಕಟೇಶ್, ಎಸ್.ವಿನಯಶರ್ಮ, ಶ್ರೀನಿವಾಸ್, ಲಕ್ಷ್ಮೀಕಾಂತ್ , ಗುರುಪ್ರಸಾದ್ ಸೇರಿದಂತೆ ಮಕ್ಕಳು ಮತ್ತು ಸಮಾಜದ ಬಂಧುಗಳು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))