ನಾಯಕತ್ವ, ಶಿಸ್ತು ಬೆಳೆಸುವ ಸೇವಾದಳ: ಅಜಿತ ಮನ್ನಿಕೇರಿ

| Published : Dec 31 2023, 01:30 AM IST

ನಾಯಕತ್ವ, ಶಿಸ್ತು ಬೆಳೆಸುವ ಸೇವಾದಳ: ಅಜಿತ ಮನ್ನಿಕೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ರಾಷ್ಟ್ರೀಯ ಭಾವೈಕ್ಯತೆ ಮೇಳದಲ್ಲಿ ಬಿಇಒ ಮನ್ನಿಕೇರಿ ಮಾತನಾಡಿ, ಸೇವಾದಳದಲ್ಲಿ ಮಕ್ಕಳು ಭಾಗವಹಿಸುವುದರಿಂದ ಮಕ್ಕಳಲ್ಲಿ ಸೇವಾ ಮನೋಭಾವನೆ ಮತ್ತು ಶಿಸ್ತು, ನಾಯಕತ್ವದ ಗುಣಗಳು ಬೆಳೆಯುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಸೇವಾದಳದಲ್ಲಿ ಮಕ್ಕಳು ಭಾಗವಹಿಸುವುದರಿಂದ ಮಕ್ಕಳಲ್ಲಿ ಸೇವಾ ಮನೋಭಾವನೆ ಮತ್ತು ಶಿಸ್ತು, ನಾಯಕತ್ವದ ಗುಣಗಳು ಬೆಳೆಯುತ್ತದೆ ಎಂದು ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಹೇಳಿದರು.

ಪಟ್ಟಣದ ಎಸ್.ಎಸ್.ಆರ್ ಪ್ರೌಢಶಾಲೆಯಲ್ಲಿ ಭಾರತ ಸೇವಾದಳದ ಶತಮಾನೋತ್ಸವದ ಸವಿ ನೆನಪಿಗಾಗಿ ಮಕ್ಕಳ ರಾಷ್ಟ್ರೀಯ ಭಾವೈಕ್ಯತೆ ಮೇಳ ಕಾರ್ಯಕ್ರಮವನ್ನು ಮೂಡಲಗಿ ತಾಲೂಕು ಸೇವಾದಳ ಸಮಿತಿಯಿಂದ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್.ಎಸ್.ಆರ್ ಪ್ರೌಢಶಾಲೆಯ ಉಪಪ್ರಾಚಾರ್ಯ ಬಿ.ಕೆ.ಕಾಡಪ್ಪಗೋಳ ಮಾತನಾಡಿ, 1923 ಡಿಸೆಂಬರ್ 28ರಂದು ಡಾ.ಎನ್.ಎಸ್ ಅರ್ಡೇಕರ್ ಅವರು ಆರಂಭಿಸಿದ ಸೇವಾದಳ ಇಂದು ದೇಶಾದ್ಯಂತ ಶಾಲಾ-ಕಾಲೇಜು ಘಟಕಗಳು ಪ್ರಾರಂಭವಾಗಿ ಮಕ್ಕಳಲ್ಲಿ ಮಾನಸಿಕ ಮತ್ತು ದೈಹಿಕ ಬದಲಾವಣೆ ಕಾಣಲು ಸಹಾಯವಾಗಿದೆ ಎಂದು ಸೇವಾದಳ ಕಾರ್ಯ ವೈಖರಿಯನ್ನು ವಿವರಿಸಿದರು

ಜಿಲ್ಲಾ ಸೇವಾದಳದ ಸಂಘಟಕಿ ಅಶ್ವಿನಿ ಆಯಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಟ್ಟಣದಲ್ಲಿ ಪ್ರಭಾತಪೇರಿ ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಿಂದ ಆರಂಭವಾಗಿ ಕಲ್ಮೇಶ್ವರ ವೃತ್ತದವರಿಗೆ ಮರಳಿ ಮೂಡಲಗಿ ಶಿಕ್ಷಣ ಸಂಸ್ಥೆವರಿಗೆ ಜರುಗಿತು. ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಜುನೇದಿ ಪಟೇಲ್, ಮೂಡಲಗಿ ತಾಲೂಕು ಭಾರತ ಸೇವಾದಳದ ಸಂಘಟಕ ವಿಲಾಸ್ ಹೊನಕುಪ್ಪಿ, ಶಿಕ್ಷಕರಾದ ಚಂದ್ರು ಮೊಟೆಪ್ಪಗೋಳ, ರಾಮಲಿಂಗ ಕಳಸನ್ನವರ್ ಉಪಸ್ಥಿತರಿದ್ದರು.

ಶಿಕ್ಷಕರಾದ ಕೆ.ಎಚ್.ಪಾಟೀಲ ಸ್ವಾಗತಿಸಿ, ನಿರೂಪಿಸಿದರು. ಎಂ.ಎಸ್.ಮುತ್ತಣ್ಣವರ ವಂದಿಸಿದರು. ಮಕ್ಕಳಿಂದ ಸೇವಾದಳ ಪ್ರದರ್ಶಣ ವ್ಯಾಯಾಮ ಮತ್ತು ಸಾಭಿನಯ ಗೀತೆಗಳು ಮೂಡಿ ಬಂದವರು.