ಸಾರಾಂಶ
ನವಲಗುಂದ ಪಪಂ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಾ ಮಂಜುನಾಥ ಸುಣಗಾರ ಗೆಲವು ಸಾಧಿಸಿದ್ದಾರೆ.
- ಪಪಂ 23ನೇ ವಾರ್ಡ್‌ಲ್ಲಿ ಅನ್ನಪೂರ್ಣಾ ಸುಣಗಾರ ಜಯಭೇರಿಕನ್ನಡಪ್ರಭ ವಾರ್ತೆ ನವಲಗುಂದ
ಪಟ್ಟಣದ ಬಸವೇಶ್ವರ ನಗರದ 23ನೇ ವಾರ್ಡಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅನ್ನಪೂರ್ಣಾ ಮಂಜುನಾಥ ಸುಣಗಾರ ಗೆಲವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 385 ಮತಪಡೆದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಚುಳಚವ್ವ ಸಂದಿಗವಾಡ 164 ಮತಪಡೆದು ಪರಾಭವಗೊಂಡರು ಎಂದು ಚುನಾವಣಾ ಅಧಿಕಾರಿ ಕುರುವತ್ತಿಮಠ ಹಾಗೂ ತಹಸೀಲ್ದಾರ್ ಸುಧೀರ ಸಾಹುಕಾರ ತಿಳಿಸಿದರುಪಟ್ಟಣದ ಬಸವೇಶ್ವರ ನಗರದ 23ನೇ ವಾರ್ಡಿಗೆ ಡಿ. 27ರಂದು ಉಪಚುನಾವಣೆ ನಡೆಯಿತು. ಡಿ. 30ರ ಶನಿವಾರ ಬೆಳಗ್ಗೆ ಮತ ಎಣಿಕೆ ಜರುಗಿತು. ಮತ ಏಣಿಕೆ ಆರಂಭದ 8ರಿಂದ 10 ನಿಮಿಷದಲ್ಲೇ ಕಾಂಗ್ರೆಸ್ ಅಭ್ಯರ್ಥಿ 221 ಮತಗಳ ಭಾರಿ ಅಂತರದಿಂದ ಮುಂದಿದ್ದರು. ಇದು ತಿಳಿಯುತ್ತಿದ್ದಂತೆಯೇ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಗೊಂಡಿತ್ತು. ಬಣ್ಣ ಹಚ್ಚಿ ಹಾಗೂ ಪಟಾಕಿ ಸಿಡಿಸಿ, ಸಿಹಿ ತಿನಿಸಿ ಸಂಭ್ರಮಿಸಿದರು. ನಂತರ ಬಸವೇಶ್ವರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ದ್ಯಾಮವ್ವನ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಬಳಿಕ ಶಾಸಕ ಎನ್. ಎಚ್. ಕೋನರಡ್ಡಿ ಅವರನ್ನು ಭೇಟೆಯಾದರು. ಈ ವೇಳೆ ಶಾಸಕರು ಅನ್ನಪೂರ್ಣಾ ಸುಣಗಾರ ಅವರಿಗೆ ಹೂಮಾಲೆ ಹಾಕಿ ಸನ್ಮಾನಿಸಿದರು. ಇದೇ ವೇಳೆ ಉಪಚುನಾವಣೆ ಗೆಲ್ಲಿಸಲು ದುಡಿದ ಮುಖಂಡರು ಹಾಗೂ ಕಾರ್ಯಕರ್ತರನ್ನು ಸನ್ಮಾನಿಸಿದರುಈ ವೇಳೆ ವರ್ಧಮಾನಗೌಡ ಹಿರೇಗೌಡ್ರು, ಆನಂದ ಹವಳಕೋಡ, ನಾಗರಾಜ್ ಭಜಂತ್ರಿ, ಬಸಣ್ಣ ಈಟಿ, ಹಣಮಂತಪ್ಪ ಮಳಗಿ, ಮಂಜು ಜಾಧವ, ಜೀವನ ಪವಾರ, ಈರಣ್ಣ ಸಿಡಗಂಟಿ, ಬಸವರಾಜ ಮುಧೋಳ, ಸಂತೋಷ್ ಮರಿಗೌಡ, ಉಸ್ಮಾನ ಬರ್ಬಚಿ, ಚಂದ್ರು ಮರಿಲಕ್ಕಣ್ಣವರ ಸೇರಿದಂತೆ ನೂರಾರು ಕಾರ್ಯಕರ್ತರು ಸಂಭ್ರಮದಲ್ಲಿ ಭಾಗಿಯಾಗಿದ್ದರು.