ಕಿನ್ನಿಗೋಳಿಯ ಬಿತ್ತುಲ್ ಪ್ರದೇಶದಲ್ಲಿ ನಾಯಿಗಳ ಮೇಲೆ ಚಿರತೆ ದಾಳಿ ನಡೆಸಿ ನಾಯಿಯನ್ನು ಕೊಂದು ಹಾಕಿದ ಘಟನೆ ನಡೆದಿದೆ.

ಮೂಲ್ಕಿ: ಕಿನ್ನಿಗೋಳಿಯ ಬಿತ್ತುಲ್ ಪ್ರದೇಶದಲ್ಲಿ ನಾಯಿಗಳ ಮೇಲೆ ಚಿರತೆ ದಾಳಿ ನಡೆಸಿ ನಾಯಿಯನ್ನು ಕೊಂದು ಹಾಕಿದ ಘಟನೆ ನಡೆದಿದೆ. ಕಿನ್ನಿಗೋಳಿಯ ಬಿತ್ತುಲು ಪ್ರದೇಶದಲ್ಲಿನ ಮೂರು ಮನೆಯ ಮೂರು ನಾಯಿಯನ್ನು ಬುಧವಾರ ರಾತ್ರಿ ಹೊತ್ತು ಕೊಂಡು ಹೋಗಿ ತಿಂದು ಹಾಕಿದೆ. ಈ ಪ್ರದೇಶದಲ್ಲಿ ಈ ಹಿಂದೆಯೂ ಹಲವು ಬಾರಿ ಚಿರತೆ ಕಂಡುಬಂದಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಿನ್ನಿಗೋಳಿ ಪರಿಸರದಲ್ಲಿ ಕಳೆದ ಹಲವು ಸಮಯಗಳಿಂದ ಅಲ್ಲಲ್ಲಿ ಚಿರತೆ ಕಂಡುಬಂದಿದ್ದು, ಈವರೆಗೆ ಸಿಕ್ಕಿಲ್ಲ. ಪಟ್ಟಣ ಪಂಚಾಯಿತಿ ಸದಸ್ಯರು ಸ್ಥಳಕ್ಕೆ ಬೇಟಿ ನೀಡಿ ಅರಣ್ಯಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.