ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಹುಟ್ಟು, ಸಾವುಗಳ ಮಧ್ಯದಲ್ಲಿನ ಸುವರ್ಣಮಯವಾದ ಸಮಯವೇ ಬದುಕು. ಈ ಬದುಕನ್ನು ಸ್ಚಚ್ಛಂದವಾಗಿ ಶಾಂತಚಿತ್ತದಿಂದ ಕಳೆದು ಧರ್ಮದ ಕಾಯಕವನ್ನು ಮಾಡುವಲ್ಲಿ ಮಿಸಲಿಡೋಣ ಎಂದು ಗಾಯತ್ರಿ ಪೀಠ ಮಹಾಸಂಸ್ಥಾನ ಹೇಮಕೂಟ ಹಂಪಿಯ ದೇವಾಂಗ ಸಮಾಜದ ಜಗದ್ಗುರು ದಯಾನಂದ ಪುರಿ ಮಹಾಸ್ವಾಮಿಗಳು ನುಡಿದರು.ಸಮೀಪದ ಅನಂದಪೂರ-ಹತ್ತರಗಿ ಗ್ರಾಮದಲ್ಲಿ ಬನಶಂಕರಿ ದೇವಸ್ಥಾನದ ಕಳಸಾರೋಹಣ ನೆರವೇರಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ರೈತ ಮನುಕುಲದ ಹೊಟ್ಟೆಯನ್ನು ತಣಿಸಿದರೇ, ನೇಕಾರ ಮನುಕುಲದ ಮಾನ ಕಾಪಾಡುವ ಕಾಯಕ ಮಾಡುತ್ತಾರೆ. ಆ ದಿಸೆಯಲ್ಲಿ ಶ್ರೇಷ್ಠರಾದ ನೇಕಾರರ ಬದುಕಿನ ಬಗ್ಗೆ ಚಿಂತನೆ ಅಗತ್ಯವಾಗಿದ್ದು, ಯಮಕನಮರಡಿ ದೇವಾಂಗ ಸಮಾಜದ ಭಕ್ತಿ ಶ್ರೇಷ್ಠವಾಗಿದೆ. ಬನಶಂಕರಿ ದೇವಿ ಗುಡಿಯು ಉತ್ತರೋತ್ತರ ಅಭಿವೃದ್ಧಿ ಹೊಂದಿ ಬದುಕಿನ ನೆಲೆಗಾಗಿ ನೇಕಾರರು ನಡೆಸುತ್ತಿರುವ ವೃತ್ತಿ ಸದಾವಕಾಲ ಉತ್ತುಂಗಕ್ಕೇರಲಿ ಎಂದು ಹಾರೈಸಿದರು.ಭಕ್ತಿ, ಭಾವನೆಗಳಿಗೆ ಭಗವಂತನೋಲಿಯುತ್ತಾನೆ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಹುಟ್ಟು-ಸಾವಿನ ಮಧ್ಯೆ ಬದುಕಿ ಧರ್ಮದ ಕಾರ್ಯಗಳನ್ನು ಮಾಡಬೇಕು. ದೇವರ ದಾಸಿಮಯ್ಯನವರು ಅನುಭಾವದ ನುಡಿಗಳಿಂದ ಜೀವನಕ್ಕೆ ಒಳ್ಳೆಯ ಸಂದೇಶ ಸಾರಿದ್ದು ಅವರ ಮಾರ್ಗದಲ್ಲಿ ನಾವೆಲ್ಲರೂ ಬದುಕಬೇಕಾಗಿದೆ ಎಂದು ತಿಳಿಸಿದರು.ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಸಮಾಜದಲ್ಲಿ ಬರುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ಅಗತ್ಯವಾಗಿದ್ದು, ದೇವಾಂಗ ಸಮಾಜದ ಧೈಯೋದ್ದೇಶಗಳನ್ನು ಮುಂದಿನ ಪೀಳಿಗೆಗೆ ತಿಳಿಸಿ ಸಮಾಜದಲ್ಲಿ ಯುವಕರು-ಯುವತಿಯರು ಯೋಜನೆಗಳನ್ನು ಹಮ್ಮಿಕೊಂಡು ಸಮಜದ ಅಭಿವೃದ್ಧಿಗಾಗಿ ಶ್ರಮಿಸಿ ಸಮಾಜ ಮುನ್ನೆಲೆಗೆ ಬರುವಂತೆ ಸಲಹೆ ನೀಡಿದರು.ವೇದಿಕೆಯಲ್ಲಿ ಕಾರಿಮಠ ಹತ್ತರಗಿಯ ಗುರುಸಿದ್ದೇಶ್ವರ ಮಹಾಸ್ವಾಮಿಗಳು, ಯಮಕನಮರಡಿ ಹುಣಸಿಕೊಳ್ಳಮಠದ ರಾಚೋಟಿಶ್ವರ ಮಹಾಸ್ವಾಮಿಗಳು, ಹತ್ತರಗಿ ಹರಿ ಮಂದಿರದ ಡಾ.ನರಸಿಂಹ ಏಕನಾಥ ಆನಂದ ಮಹಾರಾಜ ಗೋಸಾವಿ, ರಕ್ಷಿ ಶಿರಗಾಂವದ ಶಿವಾನಂದ ಮಹಾಸ್ವಾಮಿಗಳು, ಯಮಕನಮರಡಿಯ ಸಿದ್ದಬಸವ ದೇವರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಕಾಂತ ಕಾಪಸಿ, ವಹಿಸಿದ್ದರು. ನೇಕಾರರ ಒಕ್ಕೂಟ ಹಾಗೂ ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ, ದೇವಾಂಗ ಸಮಾಜದ ರಾಜ್ಯಾಧ್ಯಕ್ಷ ರವಿಂದ್ರ ಕಲಬುರ್ಗಿ, ಸಂಕೇಶ್ವರದ ಗಣ್ಯರಾದ ಅಪ್ಪಾಸಾಹೇಬ ಶಿರಕೊಳಿ, ರವಿಂದ್ರ ಜಿಂಡ್ರಾಳಿ, ಗಜಾನನ ಗುಂಜೇರಿ, ಮಹಾದೇವ ಪಟೋಳಿ, ಮುಂತಾದವರು ಇದ್ದರು. ಈ ಸಂದರ್ಭದಲ್ಲಿ ಚಂದ್ರಶೇಖರ ಚಪಣಿ, ಕಾಶಪ್ಪ ಮಳ್ಳೋಳ್ಳಿ, ವೀರಭದ್ರ ಸುಂಬಳಿ, ಬಾಬುರಾವ ಹಟ್ಟಿ, ಜಯಂತ ಹಟ್ಟಿ, ವಿರೂಪಾಕ್ಷಿ ಮಾಸ್ತಮರಡಿ, ಸುಭಾಷ ಮಳೊಳ್ಳಿ, ಚಂದ್ರಕಾಂತ ಕಾಪ್ಸಿ, ಮಹಾದೇವ ಅತ್ತಿಮರದ, ಅಶೋಕ ಮನವಾಡಿ ಶಶಿಕಾಂತ ಹಟ್ಟಿ, ವಜಯ ಜಕ್ಕನ್ನವರ, ಸಂಕಪ್ಪ ಮುಗಳಿ ಮುಂತಾದವರು ಉಪಸ್ಥಿತರಿದ್ದರು. ಬಸವರಾಜ ಅತ್ತಿಮರದ ಸ್ವಾಗತಿಸಿದರು. ಎಂ.ಎಸ್.ಮಳ್ಳೊಳ್ಳಿ ನಿರೂಪಿಸಿದರು.
;Resize=(128,128))
;Resize=(128,128))