ಸರ್ಕಾರಿ ಶಾಲೆಯ ತರಗತಿ ‘ಸ್ಮಾರ್ಟ್‌ ಕ್ಲಾಸ್‌’ ಆಗಲಿ

| Published : Dec 14 2024, 12:47 AM IST

ಸರ್ಕಾರಿ ಶಾಲೆಯ ತರಗತಿ ‘ಸ್ಮಾರ್ಟ್‌ ಕ್ಲಾಸ್‌’ ಆಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಇನ್ಪೋಸಿಸ್ ಸಂಸ್ಥೆಯವರು ಸ್ಮಾರ್ಟ್‌ಕ್ಲಾಸ್ ರೂಮ್ ಪರಿವರ್ತನೆ ಹಾಗೂ ಸರಕಾರಿ ಶಾಲಾ ಮಕ್ಕಳಿಗೆ ಸುಸಜಿತವಾದ ಶಾಲಾ ಕೊಠಡಿಗಳ ನಿರ್ಮಾಣ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಿದ್ದಾರೆ. ಸ್ಮಾರ್ಟ್ ಕ್ಲಾಸ್ ರೂಮ್ ಎನ್ನುವುದು ಡಿಜಿಟಲ್ ತರಗತಿಯಾಗಿದ್ದು, ದಕ್ಷತೆ ಸುಧಾರಿಸಲು ಬೋಧನೆಯ ವಿವಿಧ ವಿಧಾನಗಳನ್ನು ಅನುಸರಿಸುವ ಶಾಲೆಯ ಮುಂದುವರಿದ ರೂಪವಾಗಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ಜಗತ್ತನ್ನು ಬದಲಾಯಿಸಲು ನೀವು ಬಳಸಬಹುದಾದ ಅತ್ಯಂತ ಪ್ರಭಲವಾದ ಅಸ್ತ್ರ ಎಂದರೆ ಶಿಕ್ಷಣ, ತರಗತಿಗಳು ತರಬೇತಿ ಕೇಂದ್ರಗಳಾಗಬೇಕು, ಜ್ಞಾನವು ಯಶಸ್ಸಿನ ಕೀಲಿಯಾಗಿದೆ, ವಿದ್ಯಾರ್ಥಿಗಳು ಅದನ್ನು ಪಡೆಯಲು ತರಗತಿ ಕೊಠಡಿಗಳು ಸ್ಮಾರ್ಟ್ ಕ್ಲಾಸ್ ಆಗಿ ಪರಿವರ್ತನೆಯಾಗಬೇಕಿದೆ ಎಂದು ಶಾಸಕಿ ರೂಪಕಲಾಶಶಿಧರ್ ತಿಳಿಸಿದರು. ಕೆಜಿಎಫ್ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳನ್ನು ಸ್ಮಾಟ್‌ಕ್ಲಾಸ್ ಶಾಲೆಗಳನ್ನಾಗಿ ಪರಿವರ್ತನೆ ಮಾಡಲು ಸಿಎಸ್‌ಆರ್ ಅನುದಾನದಡಿ ಇನ್ಪೋಸಿಸ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಬಂದಿದ್ದ ಅಧಿಕಾರಿಗಳೊಂದಿಗೆ ಸ್ಮಾಟ್‌ಕ್ಲಾಸ್‌ನಿಂದ ಆಗುವ ಪ್ರಯೋಜನಗಳ ಕುರಿತು ಮಾತನಾಡಿದರು.ಇನ್ಪೋಸಿಸ್ ಸಂಸ್ಥೆ ಕೊಡುಗೆ

ಇನ್ಪೋಸಿಸ್ ಸಂಸ್ಥೆಯವರು ಸ್ಮಾರ್ಟ್‌ಕ್ಲಾಸ್ ರೂಮ್ ಪರಿವರ್ತನೆ ಹಾಗೂ ಸರಕಾರಿ ಶಾಲಾ ಮಕ್ಕಳಿಗೆ ಸುಸಜಿತವಾದ ಶಾಲಾ ಕೊಠಡಿಗಳ ನಿರ್ಮಾಣ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಿದ್ದಾರೆ. ಸ್ಮಾರ್ಟ್ ಕ್ಲಾಸ್ ರೂಮ್ ಎನ್ನುವುದು ಡಿಜಿಟಲ್ ತರಗತಿಯಾಗಿದ್ದು, ದಕ್ಷತೆ ಸುಧಾರಿಸಲು ಬೋಧನೆಯ ವಿವಿಧ ವಿಧಾನಗಳನ್ನು ಅನುಸರಿಸುವ ಶಾಲೆಯ ಮುಂದುವರಿದ ರೂಪವಾಗಿದೆ. ಕಲಿಕೆಗೆ ಉತ್ತಮ ವಾತಾವರಣ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ ತಿಳಿಸಿದರು.

ಇನ್ಪೋಸಿಸ್ ಸಂಸ್ಥೆಯ ಅಧಿಕಾರಿ ಚೇತನ್ ಮಾತನಾಡಿ, ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಹಾಗೂ ವಿದ್ಯಾರ್ಥಿಗಳನ್ನು ಆಕರ್ಷಿಸಲು ಗುಣಮಟ್ಟದ ಶಿಕ್ಷಣಕ್ಕೆ ವೀಡಿಯೂಗಳು ಮತ್ತು ಅಡಿಯೊಗಳಂತಹ ಡಿಜಿಟಲ್ ಬೋಧನಗಳನ್ನು ಬಳಸುತ್ತದೆ. ಪಠ್ಯಪುಸ್ತಕದಿಂದ ಸತ್ಯಗಳನ್ನು ಓದುವ ಬದಲು, ಶಿಕ್ಷಕರು ಇಂಟರ್ನೆಟ್‌ನಿಂದ ವಿಡಿಯೂಗಳು, ಆಡಿಯೋಗಳು, ಅಂಕಿಅಂಶಗಳು ಇತ್ಯಾದಿಗಳ ರೂಪದಲ್ಲಿ ಬೋಧಿಸಬಹುದು ಎಂದು ತಿಳಿಸಿದರು.ಸರಕಾರಿ ಶಾಲೆ ಬಲಗೊಳ್ಳಬೇಕುಸರಕಾರಿ ಶಾಲೆಗಳಲ್ಲಿ ಉತ್ತಮವಾದ ಪರಿಸರ ಮೂಡಿಸಿ, ಶಾಲೆಗೆ ಅಗತ್ಯವಿರುವ ಮೂಲಬೂತ ಸೌಕರ್ಯಗಳನ್ನು ನೀಡಿದಾಗ ಸರಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ ಇದರಿಂದ ಬಡವರ ಮಕ್ಕಳು ಸಹ ಉತ್ತಮ ಶಿಕ್ಷಣ ಪಡೆಯಲು ಸಹಕಾರಿಯಾಗಲಿದೆ ಎಂದು ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ ತಿಳಿಸಿದರು.ತಹಸೀಲ್ದಾರ್ ನಾಗವೇಣಿ, ಪೌರಾಯುಕ್ತ ಪವನ್‌ಕುಮಾರ್, ಎಇಇ ಮಂಜುನಾಥ್ ಇದ್ದರು.