ವೃತ್ತಿಯಲ್ಲಿ ಆರೋಗ್ಯಕರ ಪೈಪೋಟಿ ಇರಲಿ: ಪುರಸಭೆ ಅದ್ಯಕ್ಷೆ ತೀರ್ಥಕುಮಾರಿ

| Published : Jan 26 2024, 01:47 AM IST

ವೃತ್ತಿಯಲ್ಲಿ ಆರೋಗ್ಯಕರ ಪೈಪೋಟಿ ಇರಲಿ: ಪುರಸಭೆ ಅದ್ಯಕ್ಷೆ ತೀರ್ಥಕುಮಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಛಾಯಾಗ್ರಹಣ ಕ್ಷೇತ್ರದಲ್ಲಿ ಆರೋಗ್ಯಕರ ಪೈಪೋಟಿ ಇರಬೇಕು, ಪೈಪೋಟಿ ಹೆಚ್ಚಾಗಿದೆ. ದರ ಪೈಪೋಟಿಗಿಂತ ಉತ್ತಮ ಗುಣಮಟ್ಟದ ಸೌಲಭ್ಯವನ್ನು ಗ್ರಾಹಕರಿಗೆ ನೀಡಿಲು ಮುಂದಾಗಬೇಕು ಎಂದು ಪಟ್ಟಣ ಪುರಸಭೆ ಅದ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ತಿಳಿಸಿದರು. ಬೇಲೂರಿನಲ್ಲಿ ಆಯೋಜಿಸಿದ್ದ ವೃತ್ತಿ ‌ನಿರತ ಛಾಯಾಗ್ರಾಹಕ ಸಂಘದ ೧೨ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟಿಸಿ ಮಾತನಾಡಿದರು.

ವೃತ್ತಿ ‌ನಿರತ ಛಾಯಾಗ್ರಾಹಕ ಸಂಘದ ವಾರ್ಷಿಕೋತ್ಸವ ಕನ್ನಡಪ್ರಭ ವಾರ್ತೆ ಬೇಲೂರು

ಛಾಯಾಗ್ರಹಣ ಕ್ಷೇತ್ರದಲ್ಲಿ ಆರೋಗ್ಯಕರ ಪೈಪೋಟಿ ಇರಬೇಕು, ಪೈಪೋಟಿ ಹೆಚ್ಚಾಗಿದೆ. ದರ ಪೈಪೋಟಿಗಿಂತ ಉತ್ತಮ ಗುಣಮಟ್ಟದ ಸೌಲಭ್ಯವನ್ನು ಗ್ರಾಹಕರಿಗೆ ನೀಡಿಲು ಮುಂದಾಗಬೇಕು ಎಂದು ಪಟ್ಟಣ ಪುರಸಭೆ ಅದ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ತಿಳಿಸಿದರು.

ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ‌ಭವನದಲ್ಲಿ ತಾಲೂಕು ವೃತ್ತಿ ‌ನಿರತ ಛಾಯಾಗ್ರಾಹಕ ಸಂಘದ ೧೨ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟಿಸಿ ಮಾತನಾಡಿ, ಮೊಬೈಲ್ ಹಾವಳಿ ಛಾಯಾಗ್ರಾಹಕ ವೃತ್ತಿಗೆ ಮಾರಕವಾಗಿ ಪರಿಣಮಿಸಿದೆ. ಪುರಸಭೆಯಿಂದ ಛಾಯಾಗ್ರಾಹರ ಸಂಘಕ್ಕೆ ನಿವೇಶನ ಹಾಗೂ ತರಬೇತಿ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಎಲ್ಲರಿಗೂ ಸ್ಮೈಲ್ ಪ್ಲೀಸ್ ಎಂದು ಹೇಳುವ ಛಾಯಾಗ್ರಾಹಕನ ಬದಕು ಕಷ್ಟದಲ್ಲಿದೆ. ಕೊರೋನಾ ಸಮಯದಲ್ಲಿ ಇವರ ಬದಕು ಅತಂತ್ರವಾಗಿದ್ದು ಇನ್ನೂ ಚೇತರಿಕೆ ಕಂಡಿಲ್ಲ. ಸರ್ಕಾರ ಇವರು ಬದುಕು ಕಟ್ಟಿಕೊಳ್ಳಲು ಅಸಂಘಟಿತ ಕಾರ್ಮಿಕ ರ ಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.

ಸಾಲು ಮರದ ತಿಮ್ಮಕ್ಕ ಅಂತಾರಾಷ್ಟ್ರೀಯ ಪೌಂಡೇಷನ್ ಅಧ್ಯಕ್ಷ ಬಳ್ಳೂರು ಉಮೇಶ್ ಮಾತನಾಡಿ, ಸರ್ಕಾರ ಶೀಘ್ರವೇ ಛಾಯಾಗ್ರಾಹಕ ನಿಗಮ ಮಂಡಳಿ ಸ್ಥಾಪಿಸಲು ಮುಂದಾಗಿ ಸರ್ಕಾರದಿಂದ ಬದುಕು ಕಟ್ಟಿಕೊಳ್ಳುವ ವ್ಯವಸ್ಥೆ ಮಾಡಬೇಕು. ಸಮಾಜದ ಮಹತ್ವದ ಕ್ಷಣ ಹಾಗೂ ವ್ಯಕ್ತಿಯೊಬ್ಬರ ಸಂತಸದ ಕ್ಷಣಗಳನ್ನು ಚಿತ್ರಗಳ ಮೂಲಕ ಹಿಡಿದಿಡುವುದು ವೃತ್ತಿಯ ವಿಶೇಷತೆಯಾಗಿದೆ. ಪತ್ರಿಕಾ ಛಾಯಾಗ್ರಾಹಕರು, ವಿಡಿಯೋಗ್ರಾಫರ್‌ಗಳು ಅಥವಾ ಛಾಯಾಗ್ರಹಣ ವೃತ್ತಿ ಹೊಂದಿದವರು ಸಮಾಜದ ಅವಿಭಾಜ್ಯ ಅಂಗವಾಗಿದ್ದಾರೆ. ಸಂಘಟನೆಯಿಂದ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿದೆ, ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಯಬೇಕು ಎಂದರು.

ಕರ್ನಾಟಕ ಛಾಯಾಗ್ರಾಹಕ ಸಂಘದ ನಿರ್ದೇಶಕ ಜಯಚಂದ್ರ, ನಿಟಕಪೂರ್ವಕ ಅಧ್ಯಕ್ಷ ಎ.ಬಿ.ಪ್ರಕಾಶ್ ಮಾತನಾಡಿದರು.

ತಾಲೂಕು ವೃತ್ತಿ ನಿರತ ಛಾಯಾಗ್ರಾಹಕ ಸಂಘದ ಮಾಜಿ ಕಾರ್ಯಾಧ್ಯಕ್ಷ ರಾಘವೇಂದ್ರ ಹೊಳ್ಳ, ತಾಲೂಕು ವೃತ್ತಿ ‌ನಿರತ ಛಾಯಾಗ್ರಾಹಕ ಸಂಘದ ಅಧ್ಯಕ್ಷ ಮಲ್ಲೇಶ್, ಕಾರ್ಯದರ್ಶಿ ಹಗರೆ ಚಂದ್ರು, ಖಜಾಂಚಿ ಸಂದೀಪ, ಅಶೋಕ್, ಎ.ಬಿ.ಸುರೇಶ್, ಕೃಷ್ಣಮೂರ್ತಿ, ಉಮೇಶ್, ನಾಗೇಶ್, ಸತೀಶ್, ಭವ್ಯ, ಯದುನಂದನ್, ವೇಣುಕುಮಾರ್, ಅರೇಹಳ್ಳಿ ‌ಮುಸ್ತಾಪ್ ಹಾಜರಿದ್ದರು. ಫೋಟೋ: ಬೇಲೂರು ತಾಲೂಕು ವೃತ್ತಿ ‌ನಿರತ ಛಾಯಾಗ್ರಾಹಕ ಸಂಘ ೧೨ ನೇ ವಾರ್ಷಿಕೋತ್ಸವ ‌ಸಮಾರಂಭ ಉದ್ಘಾಟಿಸಲಾಯಿತು.