ಸಾರಾಂಶ
ಖಾನಾಪುರ: ತಾಲೂಕಿನ ಮಂಗೇನಕೊಪ್ಪ ಗ್ರಾಮದ ಡಿಜಿಟಲ್ ಗ್ರಂಥಾಲಯದಲ್ಲಿ ಶನಿವಾರ ಮತದಾನ ಜಾಗೃತಿಗಾಗಿ ಶಾಲಾ ಮಕ್ಕಳಿಂದ ಪತ್ರ ಚಳವಳಿ ಕಾರ್ಯಕ್ರಮ ಜರುಗಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಾಗೀರದಾರ ಪತ್ರ ಚಳವಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಕ್ಕಳಿಗೆ ಮತದಾನ ಮಹತ್ವ ವಿವರಿಸಿ ಪಾಲಕರಿಗೂ ಮತದಾನ ಮಾಡುವಂತೆ ತಿಳಿ ಹೇಳುವಂತೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಖಾನಾಪುರ: ತಾಲೂಕಿನ ಮಂಗೇನಕೊಪ್ಪ ಗ್ರಾಮದ ಡಿಜಿಟಲ್ ಗ್ರಂಥಾಲಯದಲ್ಲಿ ಶನಿವಾರ ಮತದಾನ ಜಾಗೃತಿಗಾಗಿ ಶಾಲಾ ಮಕ್ಕಳಿಂದ ಪತ್ರ ಚಳವಳಿ ಕಾರ್ಯಕ್ರಮ ಜರುಗಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಾಗೀರದಾರ ಪತ್ರ ಚಳವಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಕ್ಕಳಿಗೆ ಮತದಾನ ಮಹತ್ವ ವಿವರಿಸಿ ಪಾಲಕರಿಗೂ ಮತದಾನ ಮಾಡುವಂತೆ ತಿಳಿ ಹೇಳುವಂತೆ ಸೂಚಿಸಿದರು.
ಮಂಗೇನಕೊಪ್ಪ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ 30ಕ್ಕೂ ಹೆಚ್ಚು ಮಕ್ಕಳು ಪತ್ರ ಚಳವಳಿಯಲ್ಲಿ ಭಾಗವಹಿಸಿ ಮೇ 7ರಂದು ಕಡ್ಡಾಯವಾಗಿ ಮತದಾನ ಮಾಡುವಂತೆ ತಮ್ಮ ಪೋಷಕರು, ಪಾಲಕರು ಮತ್ತು ಸಂಬಂಧಿಕರಿಗೆ ಪತ್ರ ಬರೆದರು. ಪತ್ರದಲ್ಲಿ ಬರೆದಿರುವ ವಿಷಯ ಓದಿ ಹೇಳಿದರು. ನಂತರ ಪತ್ರಗಳನ್ನು ಸಂಬಂಧಪಟ್ಟ ವಿಳಾಸಕ್ಕೆ ಪೋಸ್ಟ್ ಮಾಡಲಾಯಿತು.ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಮಹಾಂತೇಶ ಜಾಂಗಟಿ, ಗ್ರಾಪಂ ಪಿಡಿಒ ವಿಠ್ಠಲ ದೇವಲತ್ತಿ ಸೇರಿದಂತೆ ಗ್ರಾಪಂ ಸಿಬ್ಬಂದಿ, ಶಿಕ್ಷಕರು ಇದ್ದರು.