ಐಕ್ಯತೆ, ಸೌಹಾರ್ದತೆಯಿಂದ ಬದುಕು ನಡೆಸಿ

| Published : Oct 07 2025, 01:03 AM IST

ಸಾರಾಂಶ

ಪ್ರವಾದಿ ಪೈಗಂಬರರು ಮತ್ತೊಬ್ಬರಿಗೆ ನೋವುಂಟು ಮಾಡದಂತೆ ಬದುಕಿ ಎಂಬ ಸರಳ ಸಂದೇಶ ಸಾರಿದ್ದರು. ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ.

ನವಲಗುಂದ:

ಸಾರ್ವತ್ರಿಕ ಸ್ಥಳದಲ್ಲಿ ಐಕ್ಯತೆ ಮತ್ತು ಕೋಮುಸೌಹಾರ್ದತೆಯಿಂದ ಬಾಳಬೇಕು. ಯಾರು ಏನೇ ಮಾಡಿದರೂ ಐಕ್ಯತೆ ಒಡೆಯಬಾರದು. ತಪ್ಪು ಮಾಡಿದವರನ್ನು ಆಯಾ ಸಮಾಜದ ಮುಖಂಡರೇ ತಿದ್ದಬೇಕೆಂದು ಅಜಾತ ನಾಗಲಿಂಗಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿ ನುಡಿದರು.

ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಸೀರತ್ ಅಭಿಯಾನ-2025ರ ಅಂಗವಾಗಿ ಸೀರತ್ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶಾಸಕ ಎನ್‌.ಎಚ್. ಕೋನರಡ್ಡಿ ಮಾತನಾಡಿ, ಪ್ರವಾದಿ ಪೈಗಂಬರರು ಮತ್ತೊಬ್ಬರಿಗೆ ನೋವುಂಟು ಮಾಡದಂತೆ ಬದುಕಿ ಎಂಬ ಸರಳ ಸಂದೇಶ ಸಾರಿದ್ದರು. ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಪ್ರವಚನಕಾರ ರಾಜ್ಯ ಜಮಾಅತ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞ ಮಾತನಾಡಿ, ಭಾರತಕ್ಕೆ ವೇದಾಂತದ ಮೆದುಳು, ಇಸ್ಲಾಂನ ದೇಹದ ಅಗತ್ಯವಿದೆ ಎಂದು ಸ್ವಾಮಿ ವಿವೇಕಾನಂದರು ಹೇಳಿರುವುದು ಪ್ರಸ್ತುತ ದಿನಗಳಲ್ಲಿ ದೇಶಕ್ಕೆ ಬೇಕಾಗಿದೆ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕಾಗಿದೆ. ಪ್ರವಾದಿಗಳ, ದಾರ್ಶನಿಕರ ನೈತಿಕ ಹಾಗೂ ಮಾನವೀಯ ಮೌಲ್ಯಗಳಲ್ಲಿ ಯಾರೂ ತಾರತಮ್ಯ ಮಾಡಬಾರದು. ಎಲ್ಲರಲ್ಲಿ ವಿಶ್ವಾಸ ಇರಿಸಿ, ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಹೃದಯವಂತಿಕೆ ನಮ್ಮಲ್ಲಿ ಬರಬೇಕು. ಉನ್ನತ ವಿಚಾರಗಳನ್ನು ಒಪ್ಪಿಕೊಂಡು ಪ್ರಜ್ಞೆಯೊಂದಿಗೆ ಒಗ್ಗೂಡಿ ಬಾಳಬೇಕು ಎಂದು ಹೇಳಿದರು.

ಜಿಲ್ಲಾ ಜಮಾಅತ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ಅಬ್ದುಲಖಾದರ ಬೆಳಗಲಿ ಮಾತನಾಡಿದರು. ಇದೇ ವೇಳೆ ಸಾಧಕರನ್ನು ಸನ್ಮಾನಿಸಲಾಯಿತು.

ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಪಿಎಸ್ಐ ಜನಾರ್ಧನ್‌ ಬಿ, ಅಬ್ದುಲ‌ಖಾದರ ಕುನ್ನಿಭಾವಿ, ಅಲ್ಲಾಸಾಬ್‌ ಕಲ್ಲಕುಟ್ರಿ, ಮೋದಿನಸಾಬ್‌ ಶಿರೂರ, ದ್ಯಾಮಣ್ಣ ಹೋನಕುದರಿ, ದಾವಲಸಾಬ್‌ ಮಸೂತಿ, ಅಬ್ದುಲಖಾದರ ಗಚ್ಚಿ, ಅಣ್ಣಪ್ಪ ಬಾಗಿ, ರಾಯನಗೌಡ ಪಾಟೀಲ, ಅಬ್ಬಾಸ್ ದೇವರಿಡು, ರೀಯಾಜ್‌ ಪೀರಜಾದೆ, ಸಂಗಮೇಶ ಹಂಡಗಿ, ಎನ್‌.ಎನ್. ಡಂಬಳ, ಸೈಪುದ್ದೀನ ಅವಾರದಿ, ಮೈನುದ್ದೀನ್‌ ಧಾರವಾಡ ಬಾಬುಸಾಬ ನದಾಫ್ ಇತರರು ಇದ್ದರು.