ಲೋಕಾಯುಕ್ತ ದಾಳಿ: ಖಜಾನೆ ಇಲಾಖೆ ಸಿಬ್ಬಂದಿ ಬಂಧನ

| Published : Dec 19 2024, 12:30 AM IST

ಲೋಕಾಯುಕ್ತ ದಾಳಿ: ಖಜಾನೆ ಇಲಾಖೆ ಸಿಬ್ಬಂದಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

Lokayukta Raid: Treasury Department Staff Arrested

ಹೊಸದುರ್ಗ: ಲಂಚ ಸ್ವೀಕರಿಸುತ್ತಿದ್ದ ವೇಳೆ ಖಜಾನೆ ಇಲಾಖೆಯ ಮುಖ್ಯ ಲೆಕ್ಕಿಗ ಜಿ. ಗೋವಿಂದರಾಜು ಹಾಗೂ ಪ್ರಥಮ ದರ್ಜೆ ಸಹಾಯಕಿ ವರಲಕ್ಷ್ಮಿ ಅವರನ್ನು ಲೋಕಾಯುಕ್ತ ಪೋಲೀಸರು ಬಂಧಿಸಿ ಅವರಿಂದ ಲಂಚದ ಹಣವನ್ನು ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.

ಪಟ್ಟಣದ ತಾಲೂಕು ಕಛೇರಿಯ ಆವರಣದಲ್ಲಿರುವ ಖಜಾನೆ ಇಲಾಖೆಯಲ್ಲಿ ಈ ಘಟನೆ ನಡೆದಿದ್ದು, ನಿವೃತ್ತ ಶಿಕ್ಷಕಿ ಶಾರದಮ್ಮ ತಮ್ಮ ಡಿಸಿಆರ್‌ಜಿ ಹಾಗೂ ಮ್ಯೂಟೇಷನ್‌ ಸಾಲದ ಬಿಲ್‌ ಮಾಡಿಕೊಡುವಂತೆ ಅಲ್ಲಿನ ಮುಖ್ಯ ಲೆಕ್ಕಿಗರನ್ನು ಕೇಳಿಕೊಂಡಾಗ 2 ಸಾವಿರ ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದರ ಬಗ್ಗೆ ಶಾರದಮ್ಮ ಚಿತ್ರದುರ್ಗ ಲೋಕಾಯುಕ್ತ ಪೋಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಲೋಕಾಯುಕ್ತ ಎಸ್‌.ಪಿ.ವಾಸುದೇವರಾಮ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸ್‌ ನಿರೀಕ್ಷಕ ಎಚ್‌.ಗುರುಬಸವರಾಜ ಹಾಗೂ ಬಿ ಮಂಜುನಾಥ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ರೆಡ್‌ ಹ್ಯಾಂಡ್‌ ಆಗಿ ಹಿಡಿದು ಅವರನ್ನು ಬಂಧಿಸಿ ಅವರಿಂದ ಲಂಚದ ಹಣ ತಲಾ 2 ಸಾವಿರ ಹಣವನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

------

ಪೋಟೋ, 18 ಎಚ್‌ಎಸ್‌ಡಿ3: ಮುಖ್ಯ ಲೆಕ್ಕಿಗ ಗೋವಿಂದರಾಜು.

18ಎಚ್‌ಎಸ್‌ಡಿ4: ಪ್ರಥಮ ದರ್ಜೆ ಸಹಾಯಕಿ ವರಲಕ್ಷ್ಮಿ