ಸಾರಾಂಶ
ಅಶಕ್ತರು, ಅನಾಥರ ಸೇವೆ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರೆ ಕುಸುಮ ಹನುಮಂತ ರಾಯಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಶಕ್ತರು, ಅನಾಥರ ಸೇವೆ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರೆ ಕುಸುಮ ಹನುಮಂತ ರಾಯಪ್ಪ ಹೇಳಿದರು.ನಗರದ ಮಾಗಡಿ ಮುಖ್ಯ ರಸ್ತೆಯ ನಿರಾಶ್ರಿತರ ಪುನರ್ವಸತಿ ಕೇಂದ್ರದ ನಿರಾಶ್ರಿತರಿಗೆ ಲೋಕಸಭಾ ಮಾಜಿ ಸದಸ್ಯ ಡಿ.ಕೆ.ಸುರೇಶ್ ಅವರ ಹುಟ್ಟು ಹಬ್ಬದ ಅಂಗವಾಗಿ ಹಣ್ಣು-ಹಂಪಲು, ಕಂಬಳಿ ಹೊದಿಕೆ ವಿತರಿಸಿದ ಬಳಿಕ ಮಾತನಾಡಿದ ಅವರು, ಅಧಿಕಾರ, ಅಂತಸ್ತು ಯಾವುದು ಶಾಶ್ವತವಲ್ಲ. ಬಡವರು, ಅನಾಥರ, ಅಶಕ್ತರ ಸಂಕಷ್ಟಗಳಿಗೆ ಮಿಡಿಯುವ ಮೂಲಕ ಮಾನವ ಧರ್ಮ ಪಾಲಿಸಬೇಕು ಎಂದು ಹೇಳಿದರು.
ಕೊಟ್ಟಿಗೆಪಾಳ್ಯ ಬಿಬಿಎಂಪಿ ಮಾಜಿ ಸದಸ್ಯ ಮೋಹನ್ ಕುಮಾರ್ ಮಾತನಾಡಿ, ನಿರಾಶ್ರಿತರ ಸೇವೆಯೇ ದೇವರ ಸೇವೆ. ಸಂದರ್ಭದ ಕಾಲ ಸುಳಿಗೆ ಸಿಲುಕಿ ಬಂಧು-ಬಾಂಧವರ ಒಡನಾಟವಿಲ್ಲದೆ ಜೀವನ ಸಾಗಿಸುತ್ತಿರುವರ ನೆರವಿಗೆ ಧಾವಿಸ ಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗ ಬೇಕಾಗಿದೆ ಎಂದರು.ಕಾಂಗ್ರೆಸ್ ಮುಖಂಡರಾದ ರಾಂಪುರ ನಾಗೇಶ್, ಅಮರ್, ರಮೇಶ್ ಗೌಡ, ಜ್ಯೋತಿ, ರಾಜೇಶ್ ಉಪಸ್ಥಿತರಿದ್ದರು.