ಮಾಡಾಳು ಮಲ್ಲಿಕಾರ್ಜುನ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

| Published : Jun 16 2024, 01:48 AM IST

ಮಾಡಾಳು ಮಲ್ಲಿಕಾರ್ಜುನ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ತಾಲೂಕು ಬಿಜೆಪಿ ಯುವ ಮುಖಂಡ, ದಾವಣಗೆರೆ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಅವರ 48ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ತಾಲೂಕಿನ ಚನ್ನೇಶಪುರ ಗ್ರಾಮದ ಅವರ ನಿವಾಸದಲ್ಲಿ ಶನಿವಾರ ವಿಜೃಂಭಣೆಯಿಂದ ಆಚರಿಸಿದರು.

- ಚನ್ನಗಿರಿ ತಾಲೂಕು ಚನ್ನೇಶಪುರ ಗ್ರಾಮಕ್ಕೆ ಆಗಮಿಸಿ ಶುಭಾಶಯ ಕೋರಿ ಸಂಭ್ರಮ - - - ಕನ್ನಡಪ್ರಭ ವಾರ್ತೆ, ಚನ್ನಗಿರಿ

ಚನ್ನಗಿರಿ ತಾಲೂಕು ಬಿಜೆಪಿ ಯುವ ಮುಖಂಡ, ದಾವಣಗೆರೆ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಅವರ 48ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ತಾಲೂಕಿನ ಚನ್ನೇಶಪುರ ಗ್ರಾಮದ ಅವರ ನಿವಾಸದಲ್ಲಿ ಶನಿವಾರ ವಿಜೃಂಭಣೆಯಿಂದ ಆಚರಿಸಿದರು.

ಬೆಳಗ್ಗೆಯಿಂದಲೇ ಕ್ಷೇತ್ರದಾದ್ಯಂತ ಬಿಜೆಪಿ ಕಾರ್ಯಕರ್ತರು ನೆಚ್ಚಿನ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ಬೃಹತ್ ಗಾತ್ರದ ಹೂವಿನ ಹಾರ, ಶಾಲು, ಪೇಟ, ಕೇಕ್‌ಗಳನ್ನು ತಂದು ನೀಡುವ ಮೂಲಕ ಮಾಡಾಳು ಮಲ್ಲಿಕಾರ್ಜುನ್ ಅವರಿಗೆ ಶುಭಾಶಯ ಕೋರಿದರು.

ಈ ಸಂದರ್ಭ ತಾಲೂಕು ಬಿಜೆಪಿ ಮುಖಂಡ ಮಾಡಾಳ್ ಪ್ರವೀಣ್ ಕುಮಾರ್ ಮಾತನಾಡಿ, ಜನತೆಯ ಪ್ರೀತಿ, ವಿಶ್ವಾಸ ತ್ಯಾಗದ ಮನೋಭಾವನೆಗಳನ್ನು ಗಳಿಸಿಕೊಳ್ಳುವ ವ್ಯಕ್ತಿಗಳು ಸದಾ ಜನರ ಹೃದಯದಲ್ಲಿ ಅಚ್ಚಳಿಯದೇ ಉಳಿಯಬಲ್ಲರು. ಅಂತಹ ವ್ಯಕ್ತಿತ್ವವನ್ನು ಹೊಂದಿರುವ ಮಾಡಾಳು ಮಲ್ಲಿಕಾರ್ಜುನ್ ಜನಮನ್ನಣೆಯ ನಾಯಕರಾಗಿ ಗುರುತಿಸಿಕೊಳ್ಳುತ್ತಿತ್ತಾರೆ ಎಂದರು.

ನಾವು ಮಾಡುವ ಉತ್ತಮವಾದ ಕೆಲಸಗಳು ಯಾವುದೇ ಸಂದರ್ಭಗಳಲ್ಲಾಗಲಿ ಉಪಕಾರ ಮನೋಭಾವನೆ ಹೊಂದಿರಬೇಕು. ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಅಭಿಮಾನಿಗಳು ಮಾಡಾಳು ಮಲ್ಲಿಕಾರ್ಜುನ್‌ ಅವರಿಗೆ ಹುಟ್ಟುಹಬ್ಬ ಶುಭಾಶಯ ಕೋರಿ, ಸಂಭ್ರಮಿಸುತ್ತಿದ್ದಾರೆ. ಇದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದರು.

ಅಭಿಮಾನಿಗಳಿಗೆ ಅಭಿನಂದನೆ:

ಮಾಡಾಳು ಮಲ್ಲಿಕಾರ್ಜುನ್ ಹುಟ್ಟುಹಬ್ಬ ಶುಭಾಶಯಗಳ ಸ್ವೀಕರಿಸಿ ಮಾತನಾಡಿ, ತಾಲೂಕಿನ ಜನತೆ ನನ್ನ ಮೇಲೆ ಇಟ್ಟಿರುವ ಪ್ರೀತಿ- ವಿಶ್ವಾಸಕ್ಕೆ ಸದಾ ಚಿರಋಣಿಯಾಗಿದ್ದೇನೆ. ತಾಲೂಕಿನಲ್ಲಿರುವ ಜನತೆಗೆ ಎಂತಹ ಸಮಸ್ಯೆಗಳು ಬಂದರೂ ಅವರಿಗೆ ಸ್ಪಂದಿಸುತ್ತಿದ್ದೇನೆ. ಈಗಾಗಲೇ 15 ವರ್ಷಗಳಿಂದ ನನ್ನ ತಂದೆ, ತಾಯಿಗಳ ಮತ್ತು ಕ್ಷೇತ್ರದ ಜನತೆಯ ಆಶೀರ್ವಾದದಿಂದ ಕ್ಷೇತ್ರದ ಸಮಸ್ಯೆಗಳ ಪರಿಹರಿಸಿ, ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ನನ್ನ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ಬಂದಿರುವ ಎಲ್ಲ ಅಭಿಮಾನಿಗಳಿಗೂ ಅಭಿನಂದಿಸುತ್ತೇನೆ ಎಂದರು.

ಗ್ರಾಮದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಬ್ಯಾಗ್ ಮತ್ತು ಇತರೆ ಕಲಿಕಾ ಪರಿಕರಗಳನ್ನು ವಿತರಣೆ ಮಾಡಲಾಯಿತು ಬಿಜೆಪಿ ಮುಖಂಡರಾದ ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ. ಕುಬೇಂದ್ರೋಜಿ ರಾವ್, ಮಾಜಿ ಸದಸ್ಯರಾದ ಪಿ.ಬಿ.ನಾಯಕ, ಮಾಲತೇಶ್, ಬಿ.ಗಣೇಶ್, ರಾಘವೇಂದ್ರ ಶೆಟ್ಟಿ, ಪುರಸಭಾ ಸದಸ್ಯರಾದ ನಂಜುಂಡಪ್ಪ, ಮೊಟ್ಟೆ ಚಿಕ್ಕಣ್ಣ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಮಲಹಾಳ್ ಡಿ.ಸಿ. ಕುಮಾರಸ್ವಾಮಿ, ತಾಲೂಕು ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ತಿಪ್ಪಗೊಂಡನಹಳ್ಳಿ ಮಲ್ಲಿಕಾರ್ಜುನ್, ಪಟ್ಲಿ ನಾಗರಾಜ್, ಕೆ.ಆರ್.ಗೋಪಿ, ದೇವರಹಳ್ಳಿ ರಾಕೇಶ್, ಹನುಮಂತ್, ನರೇಂದ್ರ, ಜೆ.ದರ್ಶನ್, ಸಂಗಮೇಶ್, ಮಾಚನಾಯ್ಕನಹಳ್ಳಿ ಜಯಪ್ಪ, ಪುನೀತ್, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.

- - - -15ಕೆಸಿಎನ್‌ಜಿ1:

ಚನ್ನಗಿರಿ ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಅವರ ಸ್ವಗ್ರಾಮ ಚನ್ನೇಶಪುರ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು. -15ಕೆಸಿಎನ್‌ಜಿ2:

ಮಾಡಾಳು ಮಲ್ಲಿಕಾರ್ಜುನ ಅವರು ಹುಟ್ಟುಹಬ್ಬ ನಿಮಿತ್ತ ಚನ್ನೇಶಪುರ ಅಂಗನವಾಡಿ ಮಕ್ಕಳಿಗೆ ಬ್ಯಾಗ್ ಮತ್ತು ಇತರೆ ಕಲಿಕಾ ಪರಿಕರಗಳನ್ನು ವಿತರಿಸಿದರು.