ಶಾಂತಿಯಿಂದ ಹಬ್ಬ ಆಚರಣೆಗೆ ಸೂಚನೆ

| Published : Jun 16 2024, 01:48 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹನುಮಂತ ದೇವರ ಓಕುಳಿ ಹಾಗೂ ಬಕ್ರೀದ್ ಹಬ್ಬವನ್ನು ಸ್ಥಳೀಯ ಸರ್ವ ಸಮಾಜ ಬಾಂಧವರು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವಂತೆ ಕುಲಗೋಡ ಪೊಲೀಸ್ ಠಾಣೆ ಪಿಎಸ್‌ಐ ಬಿ.ಆನಂದ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ತಾಲೂಕಿನ ಬೆಟಗೇರಿ ಗ್ರಾಮದ ಹನುಮಂತ ದೇವರ ಓಕುಳಿ ಹಾಗೂ ಬಕ್ರೀದ್ ಹಬ್ಬವನ್ನು ಸ್ಥಳೀಯ ಸರ್ವ ಸಮಾಜ ಬಾಂಧವರು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವಂತೆ ಕುಲಗೋಡ ಪೊಲೀಸ್ ಠಾಣೆ ಪಿಎಸ್‌ಐ ಬಿ.ಆನಂದ ಸೂಚನೆ ನೀಡಿದರು.ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಹನುಮಂತ ದೇವರ ಓಕುಳಿ ಹಾಗೂ ಬಕ್ರೀದ್ ಹಬ್ಬದ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಜೂ.14 ರಂದು ನಡೆದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ಓಕುಳಿ ಹಾಗೂ ಬಕ್ರೀದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಬೇಕ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸುವಂತೆ ಸಮಾಜದ ಮುಖಂಡರಿಗೆ ಹೇಳಿದರು.

ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಬೆಟಗೇರಿ, ಕೌಜಲಗಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸಲು ಸ್ಥಳೀಯ ವಿವಿಧ ಸಮುದಾಯದ ಹಿರಿಯ ನಾಗರಿಕರ, ಯುವಕರ ಹಾಗೂ ಸಾರ್ವಜನಿಕರು ಸಹಕಾರ ಅಗತ್ಯವಾಗಿದೆ. ಹಬ್ಬ ಹರಿದಿನಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ಕೈಗೊಂಡವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸ್ಥಳೀಯ ಮುಖಂಡರಾದ ಸುಭಾಷ ಕರೆಣ್ಣವರ, ಸಂಗಯ್ಯ ಹಿರೇಮಠ, ವಿಠಲ ಚಂದರಗಿ, ಈರಣ್ಣ ಬಳಿಗಾರ, ಅಶೋಕ ಕೋಣಿ, ದುಂಡಪ್ಪ ಹಾಲಣ್ಣವರ, ಪ್ರಕಾಶ ಗುಡದಾರ, ಕೆಂಪಣ್ಣ ಪೇದನ್ನವರ, ಅರುಣ ಸವತಿಕಾಯಿ, ಸಿದ್ಧಾರೂಢ ವಡೇರ, ಮಾರುತಿ ಚಂದರಗಿ, ರವಿ ಉಪ್ಪಾರ, ಮುತ್ತೆಪ್ಪ ಕುರಬರ, ಸ್ಥಳೀಯ ಬೀಟ್ ಪೊಲೀಸ್ ಪೇದೆ ಎಸ್.ಎಸ್.ವಜ್ರಮಟ್ಟಿ, ವಿವಿಧ ಸಮಾಜದ ಮುಖಂಡರು, ಯುವಕರು, ಸಭೆಯಲ್ಲಿ ಇದ್ದರು.