ಮಾದಾಪುರ: ಶ್ರೀ ಧ.ಗ್ರಾ.ಯೋಜನೆ ಬೆಂಚ್‌, ಡೆಸ್ಕ್‌ ವಿತರಣೆ

| Published : Jan 31 2025, 12:47 AM IST

ಮಾದಾಪುರ: ಶ್ರೀ ಧ.ಗ್ರಾ.ಯೋಜನೆ ಬೆಂಚ್‌, ಡೆಸ್ಕ್‌ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬುಧವಾರ ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬೆಂಚ್ ಡೆಸ್ಕ್ ವಿತರಣಾ ಸಮಾರಂಭ ನೆರವೇರಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಶಿಕ್ಷಣ ಉತ್ತೇಜಿಸುವ ದಿಸೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಡೆಸ್ಕ್, ಬೆಂಚ್ ವಿತರಿಸುತ್ತಿರುವುದು ಮಹತ್ಕಾರ್ಯ ಎಂದು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಜಗದೀಶ್ ಹೇಳಿದ್ದಾರೆ.

ಬುಧವಾರ ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬೆಂಚ್ ಡೆಸ್ಕ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಠಾಣಾಧಿಕಾರಿ ಅವರು, ಸಾಮಾಜಿಕವಾಗಿ ಸಮುದಾಯಕ್ಕೆ ಪ್ರೇರಣೆಯಾಗುವಂತಹ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಶಿಕ್ಷಣಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಸರ್ಕಾರಿ, ಅನುದಾನಿತ ಶಾಲೆ ಹಾಗೂ ಖಾಸಗಿ ಶಾಲೆಗಳಿಗೆ ಅವರ ಬೇಡಿಕೆ ಅನುಸಾರ ಬೆಂಚ್ ಡೆಸ್ಕ್‌ ವಿತರಿಸುವ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಿರುವುದು ಹರ್ಷದಾಯಕ ವಿಚಾರ ಎಂದರು.

ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 19 ಶಾಲೆಯವರು ಬೇಡಿಕೆ ಸಲ್ಲಿಸಿದಷ್ಟು 159 ಬೆಂಚ್, ಡೆಸ್ಕ್ ವಿತರಣೆ ಮಾಡಲಾಗಿದೆ ಎಂದು ಯೋಜನಾಧಿಕಾರಿ ಪುರುಷೋತ್ತಮ್ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಡಿ. ನರಸಿಂಹ, ಶ್ರೀಮತಿ ಚೆನ್ನಮ್ಮ ಕಾಲೇಜು ಪ್ರಾಂಶುಪಾಲ ಸಿ.ಜೆ.ಮಂದಪ್ಪ, ಗ್ರಾ.ಪಂ.ಅಧ್ಯಕ್ಷೆ ಭೋಜಮ್ಮ, ಒಕ್ಕೂಟದ ಅಧ್ಯಕ್ಷೆ ಪುಷ್ಪ, ಮೇಲ್ವಿಚಾರಕಿ ವಿನೋದ, ಸೇವಾಪ್ರತಿನಿಧಿ ಕುಸುಮ ಹಾಗೂ ಪದಾಧಿಕಾರಿಗಳು ಇದ್ದರು.